ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಈ ರೋಬೊಟ್ ನೋಡಿ ಇದು ಚೀನಾದ ಬೀದಿ ಬೀದಿಗಳಲ್ಲಿ ಹೇಗೆ ಓಡಾಡುತ್ತಿದೆ ಎಂಬುದನ್ನು ಗಮನಿಸಿ. ಚೀನಾ ಹಲವು ವರ್ಷಗಳಿಂದ ಸಾಧಿಸಬೇಕೆಂದಿದ್ದನ್ನು ಈಗ ಸಾಧಿಸಿದೆ. ಇದು ಮನುಷ್ಯಳ ರೀತಿ ಇರುವ ರೋಬೊಟ್ ಆಗಿದ್ದು, ತಕ್ಷಣಕ್ಕೆ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅಸಾಧಾರಣವಾಗಿ ಈ ರೊಬೋಟ್ ಅನ್ನು ನಿರ್ಮಿಸಲಾಗಿದೆ” ಎಂದು ಶೇರ್ ಮಾಡಲಾಗುತ್ತಿದೆ.
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ನಿಂತಿರುವುದು ಹಾಗೂ ಆಕೆಯ ಫೋಟೋವನ್ನು ಸುತ್ತಲಿರುವವರು ತೆಗೆಯುತ್ತಿರುವುದನ್ನು ನೋಡಿದ ಹಲವು ಮಂದಿ, ಈ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಯಾಂಡೆಕ್ಸ್ ಮತ್ತು ಮೈಕ್ರೋಸಾಫ್ಟ್ ಬಿಂಗ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಆಗ ನಮಗೆ ವೈರಲ್ ವಿಡಿಯೋವಿನಂತೆಯೆ YouTube ನಲ್ಲಿ ಹಂಚಿಕೊಳ್ಳಲಾದ ಕಿರು ವಿಡಿಯೋವೊಂದು ಕಂಡು ಬಂದಿದೆ. ಅದನ್ನು “ಕಿಯಾನ್ ಪ್ರಿನ್ಸೆಸ್ #ಟಿಕ್‌ಟಾಕ್ #ಟ್ರೆಂಡ್ #ಚೀನಾ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ.
ನಾವು, ನಂತರ, Instagram ಮತ್ತು X (ಹಿಂದೆ Twitter) ನಲ್ಲಿ “Qian Princess” ಎಂಬ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ “qian__princess “ ಎಂಬ ಬಳಕೆದಾರ ಹೆಸರಿನೊಂದಿಗೆ ಅಸ್ತಿತ್ವದಲ್ಲಿರುವ ಅಧಿಕೃತ ಖಾತೆಯೊಂದು ಪತ್ತೆಯಾಗಿತ್ತು. ಪುಟವನ್ನು ಪರಿಶೀಲಿಸಿದಾಗ, ನಾವು ವೈರಲ್ ವೀಡಿಯೊದಂತೆಯೇ ದೃಶ್ಯವನ್ನು ನೋಡಿದ್ದೇವೆ. ವೈರಲ್ ವಿಡಿಯೋ ಹಾಗೂ ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಎರಡೂ ವಿಡಿಯೋಗಳು ಹೋಲಿಕೆಯಾಗಿರುವುದು ಕಂಡು ಬಂದಿದೆ. ಇನ್ನು ಈ ಇನ್‌ಸ್ಟಾಗ್ರಾಂ ಬಳಕೆದಾರರು ವಯಸ್ಕರಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಕೂಡ ಹಂಚಿಕೊಂಡಿರುವುದು ಕಂಡು ಬಂದಿದೆ. ಹೀಗೆ ಈಕೆಯ ಈ ಖಾತೆಯಲ್ಲಿನ ಮಾಹಿತಿ ಮತ್ತು ಹಲವು ವಿಡಿಯೋಗಳು ಈಕೆ ರೊಬೋಟ್ ಅಲ್ಲ ಮನುಷ್ಯಳು ಎಂಬುದನ್ನು ಸ್ಪಷ್ಟಪಡಿಸಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಚೀನಾದ ಸಾರ್ವಜನಿಕ ಸ್ಥಳಗಳಲ್ಲಿ ರೊಬೋಟ್‌ವೊಂದು ಓಡಾಟ ನಡೆಸಿದೆ ಎಂಬುದು ಸುಳ್ಳು.. ವಿಡಿಯೋದಲ್ಲಿ ಕಂಡು ಬಂದಿರುವಾಕೆ ಡಿಜಿಟಲ್ ವಿಡಿಯೋ ಕ್ರಿಯೇಟರ್ ಆಗಿದ್ದಾಳೆ. ಈಕೆ ಹಲವು ವಯಸ್ಕರಿಗೆ ಸಂಬಂಧಿಸಿದ ವಿಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವುದು ಹಾಗೂ ಹಲವು ಉಡುಗೆಗಳಿಗೆ ಉದ್ದೇಶಿತ ವಿಡಿಯೋಗಳನ್ನು ಹಾಕಿರುವುದು ಕಂಡು ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಈಕೆ ಮನುಷ್ಯಳು ಎಂಬುದು ಸಾಬೀತಾಗಿದೆ.
ಇದನ್ನೂ ಓದಿ : Fact Check : ವೃದ್ಧ ರೋಗಿಯನ್ನು ಪಾರಿವಾಳ ಭೇಟಿಯಾಗಿದೆ ಎಂಬುದು ಸುಳ್ಳು: ಇದು ಆಕಸ್ಮಿಕವಾಗಿ ಸೆರೆಹಿಡಿದ ಹಳೆಯ ಫೋಟೊ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇ