ವೃದ್ಧ ರೋಗಿಯೊಬ್ಬನ ಮೇಲೆ ಪಾರಿವಾಳವು ಕುಳಿತಿರುವ ಚಿತ್ರವೊಂದನ್ನು ಆಸ್ಪತ್ರೆಯ ನರ್ಸ್ ಒಬ್ಬರು ಸೆರೆಹಿಡಿದಿದ್ದಾರೆ ಎಂಬ ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ವೃದ್ಧ ರೋಗಿಯನ್ನು 3 ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಈ 3 ದಿನಗಳಲ್ಲಿ ಅವರ ಕುಟುಂಬದ ಸದಸ್ಯರು ಯಾರೂ ಅವರನ್ನು ಭೇಟಿ ಮಾಡಿಲ್ಲ, ಆದರೆ ಈ ಪಾರಿವಾಳವು 2 ದಿನಗಳಿಂದ ಅವರನ್ನು ನೋಡಲು ಬರುತ್ತಿದೆ” ಎಂದು ಬರೆದು ನರ್ಸ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನಿಜವೆಂದು ನಂಬಿ ಅನೇಕ ಫೇಸ್ಬುಕ್ ಬಳಕೆದಾರರು ಇದೇ ಚಿತ್ರವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ವೃದ್ಧ ರೋಗಿಯನ್ನು ಪಾರಿವಾಳ ಭೇಟಿಯಾಗಲು ಬಂದಿತ್ತಾ? ಎಂಬುದರ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಚಿತ್ರದ ಕುರಿತು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಚಿತ್ರವನ್ನು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2013ರ ಅಕ್ಟೋಬರ್ 19ರಂದು ಐಯೋನಿಸ್ ಪ್ರೊಟೊನೊಟಾರಿಯೊಸ್ ವೈರಲ್ ಚಿತ್ರವನ್ನು ಹಂಚಿಕೊಂಡಿರುವುದು ಕಂಡುಬಂದಿದೆ.
ಲೀಡ್ ಸ್ಟೋರೀಸ್ ಅವರೊಂದಿಗೆ ಈ ವೈರಲ್ ಚಿತ್ರದ ಕುರಿತು ಚರ್ಚಿಸಿದಾಗ, ಅವರು ಛಾಯಾಗ್ರಾಹಕ ಮತ್ತು ಗ್ರೀಕ್ನ ಅಥೆನ್ಸ್ನಲ್ಲಿರುವ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿತ್ತು. ಹೃದ್ರೋಗ ವಿಭಾಗದಲ್ಲಿ ಮಲಗಿದ್ದ ವೃದ್ಧ ರೋಗಿಯ ಮೇಲೆ ಪಾರಿವಾಳವನ್ನು ನೋಡಿದಾಗ , “ಇದು ಹಾರಿಹೋಗುವ ಮುನ್ನವೇ ಚಿತ್ರವನ್ನು ಸೆರೆಹಿಡಿಯಲು ನನಗೆ ಸಮಯ ಸಿಗುತ್ತದೆಯೋ ಇಲ್ಲವೋ?” ಎಂದು ನನ್ನ ಮನಸ್ಸಿಗೆ ಬಂದ ಮೊದಲ ಏಕೈಕ ವಿಚಾರವಾಗಿತ್ತು. ಅದೃಷ್ಟವಶಾತ್ ಹಕ್ಕಿಯ ಚಿತ್ರವನ್ನು ಸೆರೆಹಿಡಿದೆ ಎಂದು ಹೇಳಿದ್ದಾರೆ. ಆದ್ದರಿಂದ ವೃದ್ಧ ರೋಗಿಯನ್ನು ನೋಡಲು ಪಾರಿವಾಳ ಬಂದಿರಲಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಥೇನ್ಸ್ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಆಕಸ್ಮಿಕವಾಗಿ ಬಂದು ಕುಳಿತಿದ್ದ ಪಾರಿವಾಳದ ಚಿತ್ರವನ್ನು ಸೆರೆಹಿಡಿಯಲಾಗಿದೆಯೇ ಹೊರತು ವೃದ್ಧ ರೋಗಿಯನ್ನು ಪಾರಿವಾಳ ಭೇಟಿಯಾಗಲು ಬಂದಿರಲಿಲ್ಲ. ಆದ್ದರಿಂದ ಇಂತಹ ದೃಶ್ಯಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.