Fact Check : ಇಂದಿರಾ ಗಾಂಧಿಯವರು ಮೀನು ತಿನ್ನುತ್ತಿದ್ದರು ಎಂದು ಹುರಿದ ಜೋಳ ತಿನ್ನುವ ಫೋಟೋ ಹಂಚಿಕೆ

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  “ಬ್ರಾಹ್ಮಣ’ರಾಗಿದ್ದರೂ,  ಇವರು ಮೀನು ತಿನ್ನುತ್ತಿದ್ದರು” ಎಂಬ ಹೇಳಿಕೆಯೊಂದಿಗೆ ಈ ಫೋಟೋವನ್ನು ವೈರಲ್‌ ಮಾಡಲಾಗುತ್ತಿದೆ. ವರದಿಗಳ ಪ್ರಕಾರ , ಪುಷ್ಕರ್‌ನ ದೇವಾಲಯದ ಅರ್ಚಕರೊಬ್ಬರು 2018 ರಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪೂಜಾ ಸಮಾರಂಭದಲ್ಲಿ ರಾಹುಲ್ ಗಾಂಧಿಯವರು ಗೋತ್ರ ‘ದತ್ತಾತ್ರೇಯ’ ಮತ್ತು ತಾನೊಬ್ಬ  ‘ಕಾಶ್ಮೀರಿ ಬ್ರಾಹ್ಮಣ’ ಎಂದು ಹೇಳಿರುವುದಾಗಿ ಬಹಿರಂಗಪಡಿಸಿದ್ದರು.

“ದತ್ತಾತ್ರೇಯ ಕಾಶ್ಮೀರಿ ಬ್ರಾಹ್ಮಣನ(ರಾಹುಲ್‌ ಗಾಂಧಿ) ಅಜ್ಜಿ ಮೀನು ತಿನ್ನುತ್ತಿದ್ದಾರೆ. ಇವರು ನಿಜಕ್ಕೂ ಅದ್ಭುತ ಮಹಿಳೆ….ನಮಗೆ ಬೇರೆ ಏನನ್ನೋ ಕಲಿಸಿ  ಎಪ್ಪತ್ತು ವರ್ಷಗಳ ಕಾಲ ನಮ್ಮನ್ನು ಮೂರ್ಖರನ್ನಾಗಿಸಿದರು” ಎಂಬ ಸಂದೇಶದೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್ ಚೆಕ್‌

ವೈರಲ್ ಆಗಿರುವ ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇಂದಿರಾ ಗಾಂಧಿಯವರು ಹುರಿದ ಜೋಳವನ್ನು ತಿನ್ನುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದಲ್ಲದೇ ಹೆಚ್ಚುವರಿ ಹುರಿದ ಜೋಳದ ದಂಟುಗಳು ಮೇಜಿನ ಮೇಲೆ ಇರುವುದು ಗೋಚರಿಸುತ್ತವೆ.

 

ಈ ವೈರಲ್ ಫೋಟೋದ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆ. ಈ ವೇಳೇ, ಹಿರಿಯ ಛಾಯಾಗ್ರಾಹಕ ಶ್ರೀಧರ್ ನಾಯ್ಡು ಅವರ ನಿಧನದ ಕುರಿತು ‘ದಿ ಹಿಂದೂ’ ಪ್ರಕಟಿಸಿದ 2017 ರ ಲೇಖನದಲ್ಲಿ  ಈ ಫೋಟೋವನ್ನು ಕಾಣಬಹುದು. ಈ ಫೋಟೋದ ಶೀರ್ಷಿಕೆಯು, “ಮಾಜಿ ಪ್ರಧಾನಿ ಇಂದಿರಾಗಾಂಧಿ ಮೆಕ್ಕೆ ಜೋಳವನ್ನು ತಿನ್ನುತ್ತಿರುವುದು- ಶ್ರೀಧರ್ ನಾಯ್ಡು ಅವರು ತೆಗೆದ ಫೋಟೋ”  ಎಂದು ಉಲ್ಲೇಖಿಸಿದೆ.  ಲೇಖನದ ಪ್ರಕಾರ, ಖ್ಯಾತ ಛಾಯಾಗ್ರಾಹಕ ಮತ್ತು ಆಂಧ್ರಪ್ರದೇಶ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಜಿ ಸಹಾಯಕ ನಿರ್ದೇಶಕ ಶ್ರೀಧರ್ ನಾಯ್ಡು ಅವರು ತೆಗೆದ ಹಲವಾರು ಛಾಯಾಚಿತ್ರಗಳಲ್ಲಿ ವೈರಲ್ ಫೋಟೋ ಕೂಡ ಒಂದಾಗಿದೆ.

1960ರ ದಶಕದ ಅಂತ್ಯದಲ್ಲಿ ಹೈದರಾಬಾದ್‌ನ ಫತೇಹ್ ಮೈದಾನ ಕ್ಲಬ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹುರಿದ ಜೋಳವನ್ನು ತಿನ್ನುತ್ತಿರುವ ಈ ಫೋಟೋವನ್ನು ಡಿ. ಶ್ರೀಧರ್ ನಾಯ್ಡು ಅವರು ತೆಗೆದಿದ್ದಾರೆ ಎಂದು ಸೂಚಿಸುವ ವರದಿಗೆ ನಮ್ಮನ್ನು ಕರೆದೊಯ್ಯಿತು. ಕೆಲವು ವರದಿಗಳು ಇಂದಿರಾ ಗಾಂಧಿಯವರು ಸ್ಥಳೀಯ ಪಾಕಪದ್ಧತಿಯನ್ನು ಆನಂದಿಸುತ್ತಿದ್ದರು ಮತ್ತು ಅವರ ಪ್ರಯಾಣದ ಸಮಯದಲ್ಲಿ  ಆಗಾಗ್ಗೆ ಹೊರಗಡೆ ಆಹಾರ ಸೇವಿಸುವುದನ್ನು ಆನಂದಿಸುತ್ತಿದ್ದರು ಎಂದು ಲೇಖನಗಳು ಉಲ್ಲೇಖಿಸಿವೆ. ಹೆಚ್ಚುವರಿಯಾಗಿ,  ಡಾ. ಕೆಪಿ ಮಾಥುರ್ ಅವರ ಪುಸ್ತಕ ‘ದಿ ಅನ್‌ಸೀನ್ ಇಂದಿರಾ ಗಾಂಧಿ: ಥ್ರೂ ಹರ್ ಫಿಸಿಶಿಯನ್ಸ್ ಐಸ್’  ಪ್ರಕಾರ “ಇಂದಿರಾ ಗಾಂಧಿಯವರು ಕಟ್ಟುನಿಟ್ಟಾಗಿ ಸಸ್ಯಾಹಾರಿಯಾಗಿರಲಿಲ್ಲ. ಅವರು ಹೆಚ್ಚಾಗಿ ಸಸ್ಯಾಹಾರಿ ಆಹಾರವನ್ನು ತಿನ್ನುತ್ತಿದ್ದರು, ಆದರೂ ಸಾಂದರ್ಭಿಕವಾಗಿ ಉತ್ತಮ ರುಚಿಯ ಕಾಶ್ಮೀರಿ ಮಾಂಸಾಹಾರಿ ಭಕ್ಷ್ಯಗಳು, ಮೀನುಗಳನ್ನು ತಮ್ಮ ಭೋಜನದಲ್ಲಿ ಸೇವಿಸುತ್ತಿದ್ದರು” ಎಂದು ಬರೆದಿದ್ದಾರೆ.

ಒಟ್ಡಾರೆಯಾಗಿ ಹೇಳುವುದಾದರೆ,  ವೈರಲ್ ಫೋಟೋ ಇಂದಿರಾ ಗಾಂಧಿಯವರು ಮೀನು ತನ್ನುತ್ತಿಲ್ಲ  ಬದಲಿಗೆ ಹುರಿದ ಜೋಳವನ್ನು ತಿನ್ನುತ್ತಿರುವುದು ಎಂಬುದು ಸಾಬೀತಾಗಿದೆ. ಇದಲ್ಲದೇ ಇಂದಿರಾ ಗಾಂಧಿಯವರು ಕಟ್ಟುನಿಟ್ಟಾಗಿ ಸಸ್ಯಾಹಾರಿಯಾಗಿರಲಿಲ್ಲ. ಅವರು ಮಾಂಸಹಾರವನ್ನೂ ಕೂಡ ಸೇವಿಸುತ್ತಿದ್ದರು.


ಇದನ್ನು ಓದಿದ್ದೀರಾ? : Fact Check : ಮದರಸಾ ಮಕ್ಕಳು ಭಾರತದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ವೈರಲ್‌ ಆಗುತ್ತಿರುವ ವಿಡಿಯೋ ಪಾಕಿಸ್ತಾನದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇ

Leave a Reply

Your email address will not be published. Required fields are marked *