ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಅವರನ್ನು ಎಲ್ಲಾ ಸಂಸದೀಯ ಸಮಿತಿಗಳಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೆಗೆದುಹಾಕಿದ್ದಾರೆ ಎಂಬುದು ಸುಳ್ಳು

ರಾಹುಲ್‌ ಗಾಂಧಿ ಕುರಿತಂತೆ ಪ್ರತೀದಿನ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವೇ ದಿನಗಳು ಹಿಂದೆಯಷ್ಟೇ ಮಹಾರಾಷ್ಟ್ರದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಸಂವಿಧಾನ ರಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಂವಿಧಾನದ ಖಾಲಿ ಪ್ರತಿಗಳನ್ನು ನೀಡಲಾಗಿದೆ ಎಂದು ಮಹಾರಾಷ್ಟ್ರದ ಬಿಜೆಪಿ ಘಟಕವು ಕಾರ್ಯಕ್ರಮದಲ್ಲಿ ನೀಡಿದ ನೋಟ್‌ಪ್ಯಾಡ್‌ಗಳ ವಿಡಿಯೋ ಹಂಚಿಕೊಂಡು ವಿವಾದಕ್ಕೆ ಕಾರಣವಾಗಿತ್ತು. ಈಗ, “ರಾಹುಲ್ ಗಾಂಧಿ ಎಲ್ಲಾ ಸಂಸದೀಯ ಸಮಿತಿಗಳಿಂದ ಹೊರಗುಳಿದಿದ್ದಾರೆ” ಎಂದು ಹೇಳುವ ಯೂಟ್ಯೂಬ್ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ವೈರಲ್ ಆಗುತ್ತಿವೆ. “ವಿದೇಶಾಂಗ ಸಚಿವ…

Read More

Fact Check | ಜಿಯೋ ಸ್ಕ್ರ್ಯಾಚ್ ಧಮಾಕಾ ಆಫರ್ ಹೆಸರಿನಲ್ಲಿ ನಕಲಿ ಲಿಂಕ್ ವೈರಲ್

“ಜಿಯೋದ ಧಮಾಕಾವನ್ನು ಸ್ಕ್ರ್ಯಾಚ್ ಮಾಡಿ ಮತ್ತು ರೂ 650 ಗೆಲ್ಲಿರಿ” ಎಂಬ ಶೀರ್ಷಿಕೆಯಲ್ಲಿ “ಜಿಯೋ ಧಮಾಕಾ ಸ್ಕ್ರ್ಯಾಚ್ ಎಂಬ ಆಫರ್‌ನೊಂದಿಗೆ ಬಂದಿದೆ. ಈ ಆಫರ್‌ ಅನ್ನು ಯಾವುದೇ ಕಾರಣಕ್ಕೂ ಮಿಸ್‌ ಮಾಡಿಕೊಳ್ಳಬೇಡಿ. ಇದು ದೀಪಾಳಿಯ ಹಿನ್ನೆಲೆಯಲ್ಲಿ ಬಂದಿರುವ ಆಫರ್‌ ಆಗಿದೆ. ಹಾಗಾಗಿ ಕೆಲವೇ ದಿನಗಳವರೆಗೆ ಮಾತ್ರ ಈ ಆಫರ್‌ ಅನ್ನು ನೀಡಲಾಗಿದೆ. ಆದಷ್ಟು ಬೇಗ ಈ ಆಫರ್‌ ಅನ್ನು ಬಳಸಿಕೊಳ್ಳಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಲಾಭ ಪಡೆಯಿರಿ” ಎಂದು ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌…

Read More

Fact Check : 2018ರ ಓರಿಸ್ಸಾದ ದೀಪಾವಳಿ ಆಚರಣೆಯ ವಿಡಿಯೋವನ್ನು ಇತ್ತೀಚಿಗೆ ನಡೆದ ಕೋಮು ಘರ್ಷಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ದೀಪಾವಳಿ ಆಚರಣೆಯಲ್ಲಿ ಯುವಕರ ಗುಂಪೊಂದು ಪಟಾಕಿ ಸಿಡಿಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಹೆಲ್ಮೆಟ್ ಧರಿಸಿರುವ ಯುವಕನೊಬ್ಬ ಸಣ್ಣ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದಾನೆ. ಈ ಪೆಟ್ಟಿಗೆಯಿಂದ ಪಟಾಕಿ ರಾಕೆಟ್‌ಗಳನ್ನು ಉಡಾಯಿಸುತ್ತಿದ್ದಾರೆ. ಅಲ್ಲದೆ, ಸ್ಫೋಟಗಳ ನಡುವೆ  “ಪಾಕಿಸ್ತಾನ, ಪಾಕಿಸ್ತಾನ” ಎಂದು ಕೂಗುವ ಧ್ವನಿಯು ಕೇಳಿಬರುತ್ತಿದೆ, ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಘರ್ಷಣೆ ಎಂದು ಕೆಲವು  ಬಳಕೆದಾರರು ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. “ ಓರಿಸ್ಸಾದಲ್ಲಿ ದೀಪಾವಳಿ ಆಚರಿಸುವಾಗ ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ,…

Read More

Fact Check | 2024ರ ಚುನಾವಣೆಯ ಗೆಲುವಿನ ನಂತರ ಡೊನಾಲ್ಡ್‌ ಟ್ರಂಪ್‌ ಹಿಂದೂಗಳನ್ನು ಹೊಗಳಿದ್ದಾರೆ ಎಂಬುದು ಸುಳ್ಳು

“ 256 ವರ್ಷಗಳಲ್ಲಿ ಯಾವುದೇ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯು ಇದನ್ನು ಹೇಳಲು ಧೈರ್ಯವನ್ನು ಹೊಂದಿರಲಿಲ್ಲ… ಅಮೆರಿಕ ಚುನಾವಣೆಯಲ್ಲಿ ಗೆಲ್ಲಲು ಹಿಂದೂಗಳನ್ನು ನೆರವಾಗಿದ್ದಾರೆ ಎಂದು ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಡೋನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ನೀಡಿದ್ದಾರೆ. ಈಗ ಭಾರತದಲ್ಲಿನ ಜಾತ್ಯಾತೀತರು ಟ್ರಂಪ್‌ ಬಾಯಿಯಿಂದ ಈ ಮಾತನ್ನು ಪ್ರಧಾನಿ ಮೋದಿ ಅವರು ಹೇಳಿಸಿದ್ದಾರೆ” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. As a Hindu, I am a Big Fan of Trump.. pic.twitter.com/rQv7qy6Im8 — srisathya (@sathyashrii)…

Read More

Fact Check : ಪ್ರಧಾನಿ ಮೋದಿ ʼಟ್ರಂಪ್‌ ಗೆಲ್ಲುತ್ತಾರೆʼ ಎಂದು ಭವಿಷ್ಯ ನುಡಿದಿದ್ದರು ಎಂಬುದು ಸುಳ್ಳು

2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಯಲ್ಲಿಯೇ ಈ ಚುನಾವಣೆಯಲ್ಲಿ ಟ್ರಂಪ್‌ರವರು ಗೆಲುವು ಸಾಧಿಸಿಯೇ ಸಾಧಿಸುತ್ತಾರೆ ಎಂದು ಮೋದಿ ಭವಿಷ್ಯವನ್ನು ನುಡಿದಿದ್ದರು ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ, “ಸ್ನೇಹಿತರೇ, ಭಾರತೀಯರೆಲ್ಲರೂ ಅಮೇರಿಕದ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌” (ಈ ಬಾರಿಗೆ ಟ್ರಂಪ್ ಸರ್ಕಾರ ಆಡಳಿತದ ಚುಕ್ಕಾಣಿಯನ್ನು ಹಿಡಿಯುತ್ತದೆ)  ಎಂದು…

Read More

Fact Check | ಮಹಾರಾಷ್ಟ್ರ ಹೌಸಿಂಗ್ ಸೊಸೈಟಿಯಲ್ಲಿ ಪುರುಷರ ಗುಂಪು ಹಿಂದೂ ಪರ ಘೋಷಣೆ ಕೂಗಿದೆ ಎಂಬುದು ಸುಳ್ಳು

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವು ರೀತಿಯ ಸುಳ್ಳು ಸುದ್ದಿಗಳು ವೈರಲ್ ಆಗುತ್ತಿದೆ. ಇದೀಗ ಹೌಸಿಂಗ್ ಸೊಸೈಟಿಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಶ್ರೀರಾಮ ಮತ್ತು ಹಿಂದುಗಳನ್ನು ಬೆಂಬಲಿಸಿ, ಘೋಷಣೆಗಳನ್ನು ಕೂಗುಲಾಗುತ್ತಿದೆ. ಇನ್ನು ಈ ಸೊಸೈಟಿಯ ಪಕ್ಕದಲ್ಲಿರುವ ಹಲವು ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ಈ ಪುರುಷರ ಗುಂಪಿಗೆ ಬೆಂಬಲವನ್ನು ನೀಡಿದ್ದಾರೆ ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್‌ನಲ್ಲಿ ಪುರುಷರ ಗುಂಪೊಂದು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನು ನೋಡಿದ ಹಲವು ಮಂದಿ ಮಹಾರಾಷ್ಟ್ರದಲ್ಲಿ ಚುನಾವಣೆ…

Read More
ತೇಜಸ್ವಿ ಸೂರ್ಯ

Fact Check: ಪಹಣಿಯಲ್ಲಿ ವಕ್ಫ್ ಹೆಸರು: ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹಂಚಿಕೊಂಡ ತೇಜಸ್ವಿ ಸೂರ್ಯ

ಕರ್ನಾಟಕದಲ್ಲಿ ವಕ್ಫ್‌ ಬೋರ್ಡ್‌ಗೆ ಸಂಬಂಧಿಸಿದಂತೆ ಈಗ ವಿವಾದ ಸೃಷ್ಟಿಯಾಗಿದೆ, ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ ರೈತರ ಭೂಮಿಯನ್ನು ಕಸಿದು ವಕ್ಫ್‌ ಬೋರ್ಡಿಗೆ ನೀಡುತ್ತಿದೆ, ಈ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಈ ಪ್ರಕರಣವನ್ನು ರಾಜಕೀಯಗೊಳಿಸಿದ್ದಾರೆ. ಆದರೆ ಈ ವಿವಾದವನ್ನು ತಿಳಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆಯುವುದಾಗಿ ಮತ್ತು ಯಾವ ರೈತರ ಭೂಮಿಯನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದ್ದಾರೆ. ಆದರೆ, ವಕ್ಫ್‌ ಬೋರ್ಡಿಗೆ ಸಂಬಂಧಿಸಿದಂತೆ ಈ…

Read More

Fact Check: ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಸಂವಿಧಾನದ ಖಾಲಿ ಪ್ರತಿಯನ್ನು ಹಂಚಲಾಗಿದೆ ಎಂದು ನೋಟ್‌ಪ್ಯಾಡ್‌ನ ವಿಡಿಯೋ ಹಂಚಿಕೊಂಡ ಬಿಜೆಪಿ

ಸಂವಿಧಾನಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಬುಧವಾರ ಕಾಂಗ್ರೆಸ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದೆ, ನಾಗ್ಪುರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಂವಿಧಾನ ರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂವಿಧಾನದ ಖಾಲಿ ಪ್ರತಿಗಳನ್ನು ವಿತರಿಸಿದೆ ಎಂದು ಮಹಾರಾಷ್ಟ್ರ ಬಿಜೆಪಿ ಈಗ ಆರೋಪಿಸಿದೆ. ಸಧ್ಯ ಈ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಅನೇಕರು ಇದನ್ನು ಹಂಚಿಕೊಂಡು ಕಾಂಗ್ರೆಸ್‌ ಪಕ್ಷ ಮತ್ತು ರಾಹುಲ್‌ ಗಾಂಧಿಯವರನ್ನು ಟೀಕಿಸುತ್ತಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಘಟಕವು ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು…

Read More

Fact Check | ಬಿಹಾರದ ಮೋತಿಹಾರಿಯಲ್ಲಿ ಪೊಲೀಸರ ಮೇಲೆ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಇತ್ತೀಚೆಗಷ್ಟೇ ಬಿಹಾರದ ಮೋತಿಹಾರಿಯಲ್ಲಿ ಅಪಹರಣ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಮುಸಲ್ಮಾನರು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ. ಇಬ್ಬರು ಪೊಲೀಸರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಇವರನ್ನು ನೀವು ಶಾಂತಿಪಾಲಕರು ಎಂದು ಕರೆಯುತ್ತೀರಾ? ಈಗ ಇವರ ಜನಸಂಖ್ಯೆ ಹೆಚ್ಚಾಗುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಭಾರತದಲ್ಲಿ ಬದುಕಲು ಕೂಡ ಭಯಪಡಬೇಕಾಗುತ್ತದೆ.” ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್‌ನಲ್ಲಿ ಕಂಡುಬಂದ ವಿಡಿಯೋದಲ್ಲಿ, ಹಲವರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದು…

Read More
ಡೊನಾಲ್ಡ್‌ ಟ್ರಂಪ್

Fact Check: 2016ರ ಹಳೆಯ ವಿಡಿಯೋವನ್ನು ಡೊನಾಲ್ಡ್‌ ಟ್ರಂಪ್ ಅವರು ಇತ್ತೀಚೆಗೆ “ನಾನು ಹಿಂದೂಗಳ ದೊಡ್ಡ ಅಭಿಮಾನಿ” ಎಂದು ಹೇಳಿದ್ದಾರೆ ಎಂದು ಹಂಚಿಕೆ

2024 ರ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿದ ನಂತರ, ಈಗ ಟ್ರಂಪ್ ಇತ್ತೀಚೆಗೆ ಚುನಾವಣೆಯ ಸಂದರ್ಭದಲ್ಲಿ ಮಾತನಾಡಿರುವ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಭಾಷಣದಲ್ಲಿ ಡೊನಾಲ್ಡ್‌ ಟ್ರಂಪ್‌ “ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ಭಾರತದ ದೊಡ್ಡ ಅಭಿಮಾನಿ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ಭಾರತೀಯ ಮತ್ತು ಹಿಂದೂ ಸಮುದಾಯಕ್ಕೆ ಶ್ವೇತಭವನದಲ್ಲಿ ನಿಜವಾದ ಸ್ನೇಹಿತ ಇರುತ್ತಾನೆ ಎಂದು ಹೇಳುವ ಮೂಲಕ ನಾನು ಭಾಷಣ ಪ್ರಾರಂಭಿಸುತ್ತೇನೆ” ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ವೀಡಿಯೊದ…

Read More