“ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು” ಎಂದು ಎಂ.ಎಸ್ ಗೋಳ್ವಾಲ್ಕರ್‌ರವರು ತಮ್ಮ “ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ವೈರಲ್ ಮಾಡಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸೋಣಾ.
ಫ್ಯಾಕ್ಟ್‌ಚೆಕ್ :
ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು ಎಂದು ಎಂ.ಎಸ್ ಗೋಳ್ವಾಲ್ಕರ್ ಅವರ ಪುಸ್ತಕದಲ್ಲಿ ಉಲ್ಲೇಖಿಸಿಲ್ಲ. ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಗೋಳ್ವಾಲ್ಕರ್ ಅವರ ಪುಸ್ತಕವನ್ನು ಪರಿಶೀಲಿಸಿದೆ ಮತ್ತು ಅದರಲ್ಲಿ ಅಂತಹ ಯಾವುದೇ ಹೇಳಿಕೆ ಕಂಡುಬಂದಿಲ್ಲ ಎಂಬುದನ್ನು ಗಮನಿಸಿದೆ. ಈ ಪುಸ್ತಕವು ಹಿಂದೂ ಸಮಾಜ, ರಾಷ್ಟ್ರೀಯತೆ ಮತ್ತು ಸಾಮಾಜಿಕ ರಚನೆಗಳ ವಿಮರ್ಶೆಗಳ ಮೇಲೆ ಕೇಂದ್ರೀಕರಿಸುತ್ತದೆ. ಎಡಿಟ್ ಮಾಡಿ ತಿರುಚಲಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಇದರಿಂದ ದೃಢವಾಗಿದೆ.
ನಾವು MSGolwalkar ಅವರ ‘ಬಂಚ್ ಆಫ್ ಥಾಟ್ಸ್’ ಅನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ ಮತ್ತು ಇದರಲ್ಲಿ OBC, SC, ಅಥವಾ ST ಸಮುದಾಯಗಳ ಹುಡುಗಿಯರನ್ನು ಪ್ರೀತಿಯ ಸೋಗಿನಲ್ಲಿ ಬಲೆಗೆ ಹಾಕಿಕೊಂಡು ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು ಎಂದು ಸೂಚಿಸುವ ಯಾವುದೇ ಹೇಳಿಕೆ ಕಂಡುಬಂದಿಲ್ಲ. ಅಲ್ಲದೇ ಈ ಪುಸ್ತಕವು ನೇರವಾಗಿ ಅಥವಾ ಪರೋಕ್ಷವಾಗಿ ಅಂತಹ ವಿಚಾರಗಳನ್ನು ಅನುಮೋದಿಸುವುದಿಲ್ಲ. ಬದಲಾಗಿ, ಎಂ.ಎಸ್ ಗೋಳ್ವಾಲ್ಕರ್ ರವರ ಚರ್ಚೆಗಳು ಹಿಂದೂ ಸಮಾಜದ ವಿವಿಧ ಅಂಶಗಳು, ರಾಷ್ಟ್ರೀಯತೆ ಮತ್ತು ಕೆಲವು ಸಾಮಾಜಿಕ ರಚನೆಗಳು ಮತ್ತು ಧಾರ್ಮಿಕ ಪರಿವರ್ತನೆಗಳ ವಿಮರ್ಶೆಗಳ ಮೇಲೆ ಕೇಂದ್ರೀಕರಿಸುತ್ತವೆ.
2018ರ ಸೆಪ್ಟೆಂಬರ್‌ನಲ್ಲಿ , ಮಾಧ್ಯಮ ವರದಿಗಳು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗೋಲ್ವಾಲ್ಕರ್‌ರ ಬಂಚ್ ಆಫ್ ಥಾಟ್ಸ್‌ನ ಅಂಶಗಳನ್ನು ಉದ್ದೇಶಿಸಿ ಮಾತನಾಡಿದ್ದನ್ನು ಉಲ್ಲೇಖಿಸಿದ್ದು, “ಬಂಚ್ ಆಫ್ ಥಾಟ್ಸ್” ಇದು ನಿರ್ದಿಷ್ಟ ಸಂದರ್ಭದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಮತ್ತು ಶಾಶ್ವತವಾಗಿ ಮಾನ್ಯವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮತ್ತು ಬಂಚ್ ಆಫ್ ಥಾಟ್ಸ್ ನ “ಕೆಲವು ಆಯ್ದ ಭಾಗಗಳನ್ನು ಮಾತ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮಾನ್ಯವೆಂದು ಅಂಗೀಕರಿಸುತ್ತದೆ” ಎಂದು ಭಾಗವತ್ ಹೇಳಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಎಂ.ಎಸ್ ಗೋಳ್ವಾಲ್ಕರ್‌ರವರು ತಮ್ಮ “ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋ ಎಡಿಟೆಡ್ ಆಗಿದೆ.
ಇದನ್ನು ಓದಿದ್ದೀರಾ? : Fact Check | ಬ್ರಿಟೀಷರ ಗುಲಾಮನಾಗಿರುತ್ತೇನೆ ಎಂದು ಎಂ.ಎಸ್ ಗೋಳ್ವಾಲ್ಕರ್ ಹೇಳಿರುವುದಕ್ಕೆ ಆಧಾರಗಳಿಲ್ಲ..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.