“ರೋಗಿಗಳಿಗೆ ರಕ್ತ ಒದಗಿಸಲು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪ್ಯಾನ್-ಇಂಡಿಯಾ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಿದೆ” ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಈ ವಾಟ್ಸಾಪ್ ಸಂದೇಶದಲ್ಲಿ ರೋಗಿಗಳಿಗೆ ರಕ್ತ ಬೇಕಿದ್ದಲ್ಲಿ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ ಎಂದು ಈ ಸೇವೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸೇರಿಸಿ ವಾಟ್ಸಪ್ನಲ್ಲಿ (WhatsApp) ಸಂದೇಶವೊಂದು ಫಾರ್ವರ್ಡ್ ಮಾಡಲಾಗುತ್ತಿದೆ.
“ರೋಗಿಗಳಿಗೆ ರಕ್ತ ಒದಗಿಸಲು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪ್ಯಾನ್-ಇಂಡಿಯಾ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಿದೆ. ಈ ಸೌಲಭ್ಯವನ್ನು ಪಡೆಯಲು, ಕುಟುಂಬದ ಸದಸ್ಯರು ಸಹಾಯವಾಣಿ 104ಕ್ಕೆ ಡಯಲ್ ಮಾಡಿ ರೋಗಿಗೆ ರಕ್ತದ ಅಗತ್ಯವಿದೆ ಎಂದು ತಿಳಿಸಬೇಕು. ಅಲ್ಲದೆ, ಅದರ ಸಂಪೂರ್ಣ ವಿವರಗಳನ್ನು ನೀಡಬೇಕು. ಉದಾಹರಣೆಗೆ, ರೋಗಿಯನ್ನು ದಾಖಲಿಸಲಾದ ಆಸ್ಪತ್ರೆಯ ಹೆಸರು, ವಿಳಾಸ ಇತ್ಯಾದಿಗಳಿಂದ ರೋಗಿಗೆ ಸಮಯಕ್ಕೆ ರಕ್ತವನ್ನು ಸುಲಭವಾಗಿ ತಲುಪಿಸಬಹುದು. 40 ಕಿಲೋಮೀಟರ್ ಒಳಗಡೆ ಇರುವ ರಕ್ತನಿಧಿ ಕೇಂದ್ರದಿಂದ ನಿಮಗೆ ಕರೆ ಮಾಡಿದ ನಾಲ್ಕು ಗಂಟೆಗಳಲ್ಲಿಯೇ ರಕ್ತ ಪೂರೈಕೆಯಾಗುತ್ತದೆ. ಇದರ ಬದಲಾಗಿ, ರೋಗಿಯ ಕುಟುಂಬವು ರೂ.450 ಸಂಸ್ಕರಣಾ ಶುಲ್ಕ ಮತ್ತು ರೂ.100 ಸಾರಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.”
ಫ್ಯಾಕ್ಟ್ ಚೆಕ್:
‘‘ರೋಗಿಗಳಿಗೆ ರಕ್ತ ನೀಡಲು ಕೇಂದ್ರ ಸರಕಾರ ರಾಷ್ಟ್ರವ್ಯಾಪಿ ಸಹಾಯವಾಣಿ ಸಂಖ್ಯೆ 104ನ್ನು ಸ್ಥಾಪಿಸಿಲ್ಲ. ರಕ್ತ ಪೂರೈಕೆಗೆ ಈ ಸಹಾಯವಾಣಿ ಸಂಖ್ಯೆ ದೇಶಾದ್ಯಂತ ಲಭ್ಯವಿದೆ ಎಂಬುದು ಸುಳ್ಳು. ಇಂತಹ ಸುಳ್ಳು ಸಂದೇಶ ಮತ್ತು ಪ್ರಚಾರಕ್ಕೆ ಯಾರೂ ಬೀಳಬೇಡಿ ಎಂದು ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯಾಸತ್ಯತೆ ವಿಭಾಗ ಸಾರ್ವಜನಿಕರಿಗೆ ತಿಳಿಸಿದೆ.”
ಇದೇ ರೀತಿಯ ಸುಳ್ಳು ಸುದ್ದಿಯು 2019ರಲ್ಲಿ ಹರಿದಾಡುತ್ತಿದ್ದಾಗ ಸತ್ಯಶೋಧನಾ ಸಂಸ್ಥೆಯು ವರದಿಯನ್ನು ಪ್ರಕಟಿಸಿತ್ತು. ಈ ವರದಿಯಲ್ಲಿ “ಮಹಾರಾಷ್ಟ್ರದಲ್ಲಿ 2014ರ ಜನವರಿ ತಿಂಗಳಲ್ಲಿ ಪ್ರಾರಂಭಿಸಲಾದ ‘ಬ್ಲಡ್ ಆನ್ ಕಾಲ್’ (104) ಸೇವೆಯನ್ನು ರಾಜ್ಯ ಸರ್ಕಾರವು 2022 ಏಪ್ರಿಲ್ 1ರಿಂದ ಸ್ಥಗಿತಗೊಳಿಸಿದೆ.“ ಎಂಬ ಬ್ಗಗೆ ಸತ್ಯಪರಿಶೀಲನೆ ನಡೆಸಿತ್ತು.
ಆದರೆ, ‘104’ ಸಹಾಯವಾಣಿಯನ್ನು ಇತರ ರಾಜ್ಯಗಳು ವಿಭಿನ್ನ ಉದ್ದೇಶಗಳಿಗಾಗಿ ಬಳಸುತ್ತಿವೆ (ಮಹಾರಾಷ್ಟ್ರವೂ ಸಹ ಅದೇ ಸಂಖ್ಯೆಯನ್ನು ಇತರ ಉದ್ದೇಶಗಳಿಗಾಗಿ ಬಳಸುತ್ತಿದೆ ) ಮತ್ತು ‘ಬ್ಲಡ್ ಆನ್ ಕಾಲ್’ ಸೇವೆಯು ದೇಶಾದ್ಯಂತ ಜಾರಿಗೆ ಬಂದಿಲ್ಲ.
‘104’ ಸಹಾಯವಾಣಿಯ ಕುರಿತು ಮತ್ತಷ್ಟು ಹುಡುಕಿದಾಗ, ‘ ಜಿವಿಕೆ ಇಎಂಆರ್ಐ ತಮಿಳುನಾಡು, ಗುಜರಾತ್, ಗೋವಾ ಮತ್ತು ರಾಜಸ್ಥಾನದ ಕೇಂದ್ರಾಡಳಿತ ಪ್ರದೇಶಗಳಾದ ದಿಯು ಮತ್ತು ದಾಮನ್ , ದಾದ್ರಾ ಮತ್ತು ನಗರ ಹವೇಲಿಯ ಸಹಭಾಗಿತ್ವದಲ್ಲಿ “104 ಆರೋಗ್ಯ ಸಲಹೆ ಸಹಾಯವಾಣಿ ಸೇವೆಗಳನ್ನು” ನಿರ್ವಹಿಸುತ್ತಿದೆ ಎಂದು ಕಂಡುಬಂದಿದೆʼ.‘
‘104’ ಸಹಾಯವಾಣಿ ಸಂಖ್ಯೆಯಾಗಿ ಬಳಸುವ ರಾಜ್ಯಗಳು ಮತ್ತು ಉದ್ದೇಶಗಳು:
104 ವೈದ್ಯಕೀಯ ಸೇವೆಗಳು ಆರೋಗ್ಯ ಇಲಾಖೆಯ ನಿರ್ದೇಶಕರು ಮತ್ತು ಆಯುಕ್ತರ ನಿಯಂತ್ರಣದಲ್ಲಿವೆ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳಿಗೆ ಮೀಸಲಾಗಿದೆ.
ಅಸ್ಸಾಂ:
104 ಸಾರಥಿ ಎಂಬುದು ಉಚಿತವಾಗಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಅಸ್ಸಾಂನಲ್ಲಿ ಸಹಾಯವಾಣಿಯಾಗಿ ಬಳಸಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ ‘ಬ್ಲಡ್ ಆನ್ ಕಾಲ್’ (104) ಸೇವೆಯನ್ನು ಪ್ಯಾನ್-ಇಂಡಿಯನ್ ಸೇವೆಯಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಹಾಯವಾಣಿ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ? : Fact Check : “OBC, ST ಮತ್ತು SC ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವೇಶ್ಯೆಯರನ್ನಾಗಿ ಮಾಡಬೇಕು” ಎಂದು ಗೋಳ್ವಾಲ್ಕರ್ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.