Fact Check: ನಟ ವಿಜಯ್ ಕೆಸಿಆರ್ ಮತ್ತು ಜಗನ್ ಮೋಹನ್ ರೆಡ್ಡಿ ಅವರನ್ನು ಟೀಕಿಸಿ ಭಾಷಣ ಮಾಡಿದ್ದಾರೆ ಎಂಬ ಸುಳ್ಳು ಹೇಳಿಕೆಗಳು ವೈರಲ್

ನಟ ವಿಜಯ್

ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ಇತ್ತೀಚೆಗೆ ತಮಿಳುನಾಡಿನಲ್ಲಿ ತಮ್ಮ ಪಕ್ಷದ ಮೊದಲ ಸಭೆಯನ್ನು ಆಯೋಜಿಸಿದ್ದರು. ವಿಜಯ್ ಅವರ ಭಾಷಣದ ಸಣ್ಣ ವೀಡಿಯೊ ತುಣುಕೊಂದರಲ್ಲಿ ಅವರು ತಮ್ಮ ಭಾಷಣದಲ್ಲಿ ಜಗನ್ ಮತ್ತು ಕೆಸಿಆರ್ ಪಕ್ಷದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ (ಇಲ್ಲಿ ಮತ್ತು ಇಲ್ಲಿ). ಇದಲ್ಲದೆ, “ನಾನು ಗೆಲ್ಲಲು ಹೆಣದ ರಾಜಕೀಯ ಮಾಡುವುದಿಲ್ಲ, ನಾನು ಯಾವುದೇ ಖಡ್ಗ ಹಿಡಿದು ನಾಟಕವನ್ನು ಆಡುವುದಿಲ್ಲ” ಎಂದು ವಿಜಯ್ ಮನೆಯಲ್ಲಿ ಹೇಳಿದ್ದಾರೆ ಎಂದು ಹೇಳುವ ವಿಡಿಯೋ ಸಹ ವೈರಲ್ ಆಗುತ್ತಿದೆ.

ಇನ್ನೂ ಕೆಲವರು “ಜಗನ್ಮೋಹನ್ ರೆಡ್ಡಿ ವಿರುದ್ಧ ಹಲವು ಕೇಸ್ ಗಳು ಇವೆ. ನನ್ನ ಮೇಲೆ ಒಂದು ಕೇಸ್ ಕೂಡ ಇಲ್ಲ. ಸಿಎಂ ಆಗದ ನಾನು ಸಿಎಂ ಆಗಬಾರದೇ?? ನೀವೇ ಹೇಳಿ. ಜಗನ್ಮೋಹನ ರೆಡ್ಡಿ ತರ ಕಳ್ಳರನ್ನು ಅತ್ಯಾಚಾರಿಗಳನ್ನು ಪಕ್ಷದಲ್ಲಿ ಇಟ್ಟುಕೊಂಡು ಪ್ರೋತ್ಸಾಹಿಸುವುದಿಲ್ಲ.” ಎಂದು ವಿಜಯ್ ಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ನೀವು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ವೈರಲ್ ವಿಡಿಯೋದಲ್ಲಿ ವಿಜಯ್ ಅವರು ತಮಿಳಿನಲ್ಲಿ ಮಾತನಾಡುವುದನ್ನು ಕಾಣಬಹುದು. ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಜಗನ್ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ, ಅವರು ತಮ್ಮ ಅನುಯಾಯಿಗಳಿಗೆ ಧನ್ಯವಾದಗಳನ್ನು ತಿಳಿಸುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ. ವಿಜಯ್ ಅವರ ಭಾಷಣದ ವೀಡಿಯೊದಲ್ಲಿ, ಅವರು 6:48 ಸೆಕೆಂಡುಗಳಲ್ಲಿ ಆಡಿದ ಪದಗಳನ್ನು ಕತ್ತರಿಸುವ ಮೂಲಕ ವೈರಲ್ ವಿಡಿಯೋ ಮಾಡಲಾಗಿದೆ.

 

ವಿಜಯ್ ಅವರ ಭಾಷಣದ ಪದಗಳನ್ನು ಕನ್ನಡಕ್ಕೆ ಅನುವಾದ ಹೀಗಿದೆ – “ನನಗೆ ತಿಳಿದ ಮಟ್ಟಿಗೆ, ನಾವೆಲ್ಲರೂ ಒಂದೇ ಮತ್ತು ನಾವೆಲ್ಲರೂ ಸಮಾನರು. ಆದ್ದರಿಂದ, ನನ್ನ ಹೃದಯದಲ್ಲಿರುವ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು / ನಮಸ್ಕಾರಗಳು” ಎಂದು ಹೇಳಿದ್ದಾರೆ. ಇದರಿಂದ ವಿಜಯ್ ಅವರು ತಮ್ಮ ಅಭಿಮಾನಿಗಳಿಗೆ ನಮಸ್ಕರಿಸುವ ವಿಡಿಯೋವನ್ನು ಕೆಸಿಆರ್ ಮತ್ತು ಜಗನ್ ಅವರ ರಾಜಕೀಯ ನೀತಿಗಳನ್ನು ಟೀಕಿಸುತ್ತಿದ್ದಾರೆ ಮತ್ತು ತಮ್ಮ ರಾಜಕೀಯ ನೀತಿಗಳೊಂದಿಗೆ ಹೋಲಿಸುತ್ತಿದ್ದಾರೆ ಎಂದು ತಪ್ಪಾಗಿ ಅನುವಾದಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಇದಲ್ಲದೆ, ವಿಜಯ್ ತಮ್ಮ ಭಾಷಣದಲ್ಲಿ ಜಗನ್ ಮೋಹನ್ ರೆಡ್ಡಿ ಮತ್ತು ಕೆಸಿಆರ್‌ ಉದ್ದೇಶಿಸಿ ಮಾತನಾಡಿದ್ದಾರೆ ಎಂದು ತೋರಿಸಲು ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಯೂಟ್ಯೂಬ್‌ನಲ್ಲಿ ತಮ್ಮ ಸಮಾವೇ‍ಷದ ಭಾಷಣದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅವರು ಇದನ್ನು ಎಲ್ಲಿಯೂ ಹೇಳಿಲ್ಲ.

 

ಅಲ್ಲದೆ, ವೈರಲ್ ಗ್ರಾಫಿಕ್‌ನಲ್ಲಿ ವಿಜಯ್ ಹೇಳಿದಂತೆ – “ನಾನು ಗೆಲ್ಲಲು ಹೆಣದ ರಾಜಕೀಯ ಮಾಡುವುದಿಲ್ಲ, ನಾನು ಯಾವುದೇ ಖಡ್ಗದ ನಾಟಕವನ್ನು ಆಡುವುದಿಲ್ಲ” ಎಂದು ವಿಜಯ್ ಇಡೀ ಭಾಷಣದಲ್ಲಿ ಎಲ್ಲಿಯೂ ಹೇಳಿಲ್ಲ.

ರಾಜಕೀಯಕ್ಕೆ ಪ್ರವೇಶಿಸಿದ ನಂತರ ನಡೆದ ಮೊದಲ ಮಹಾಸಮ್ಮೇಳನದಲ್ಲಿ ವಿಜಯ್ ನೆರೆಯ ರಾಜ್ಯಗಳ ನಾಯಕರ ಬಗ್ಗೆ ಈ ರೀತಿ ಮಾತನಾಡಿದ್ದರೆ, ಅದನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ, ವಿಜಯ್ ಕೆಸಿಆರ್ ಮತ್ತು ಜಗನ್ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಎಂದು ಯಾವುದೇ ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿಲ್ಲ.

ಅಂತಿಮವಾಗಿ, ನಟ ವಿಜಯ್ ತಮ್ಮ ಮಹಾಸಮ್ಮೇಳನ ಸಭೆಯಲ್ಲಿ ಕೆಸಿಆರ್ ಮತ್ತು ಜಗನ್ ಅವರನ್ನು ಟೀಕಿಸಿ ಭಾಷಣ ಮಾಡಿದ್ದಾರೆ ಎಂಬ ಸುಳ್ಳು ಹೇಳಿಕೆಗಳು ವೈರಲ್ ಆಗುತ್ತಿವೆ.


ಇದನ್ನು ಓದಿ: ಹೆಜ್ಬುಲ್ಲಾ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಫೋಟೋ ತೆಗೆದುಕೊಂಡಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *