AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ವಾಗ್ದಾಳಿ ನಡೆಸಿದ್ದಾರೆ ಎಂಬ ವಿಡಿಯೋವೊಂದನ್ನುಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಹೊಸ ಆಕ್ರಮಣಕಾರಿ ಎನ್‌ಡಿಎ” ,“…ಓವೈಸಿ ಕೇಳು, ಔರಂಗಜೇಬ್‌ನ ಗುರುತಿನ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ. ಈಗ ಭಾರತದ ಮೇಲೆ ಕೇಸರಿಕರಣದ ಅಲೆ ಪ್ರಾರಂಭವಾಗುತ್ತದೆ…” ಎಂದು 1:46 ಸೆಕೆಂಡ್‌ನ ವಿಡಿಯೋದಲ್ಲಿ ಫಡ್ನವೀಸ್ ಹೇಳಿದ್ದಾರೆ. “2024 ಹಿನ್ನಡೆಯು ಒಂದು ರೀತಿಯಲ್ಲಿ ಉತ್ತಮವಾಗಿದೆ! ನಾವು ಇದುವರೆಗೂ ನೋಡಿರದ ಹೊಸ ಆಕ್ರಮಣಕಾರಿ ಎನ್‌ಡಿಎಯನ್ನು ನೋಡುತ್ತಿದ್ದೇವೆ” ಈ ದೃಶ್ಯಗಳು ಇತ್ತೀಚಿನವು ಎಂದು ಟ್ವಿಟರ್, ಫೇಸ್‌ಬುಕ್ ಮತ್ತು Instagram ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹಾಗಾದರೆ 2024ರ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅಸಾದುದ್ದೀನ್ ಓವೈಸಿ ವಿರುದ್ಧ ಫಡ್ನವಿಸ್ ವಾಗ್ದಾಳಿ ನಡೆಸಿದ್ದಾರಾ? ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡ ಮುಂದಾಯಿತು. ಈ ವಿಡಿಯೋದ ಕುರಿತು ಹುಡುಕಾಟ ನಡೆಸಿದಾಗ, 2022ರ ಮೇ 16ರಂದು ನಡೆದ ಸಭೆಯಲ್ಲಿ ಫಡ್ನವಿಸ್‌ರವರನ್ನು “ವಿರೋಧ ಪಕ್ಷದ ನಾಯಕ” ಎಂದು ಗುರುತಿಸುವ ಬ್ರ್ಯಾಂಡಿಂಗ್ ಹೆಸರು ಮತ್ತು ದಿನಾಂಕದ ಅಂಚೆಚೀಟಿಯ ಮೇಲೆ ಅವರ ಹೆಸರನ್ನು ನಮೂದಿಸಿರುವುದು ಕಂಡುಬಂದಿದೆ.
YouTube ನಲ್ಲಿ ದೇವೇಂದ್ರ ಫಡ್ನವಿಸ್, ಔರಂಗಜೇಬ್ ಮತ್ತು ಓವೈಸಿ ಎಂಬ ಕೆಲವು ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, 2022ರ ಮೇ 15ರಂದು ABP Majha ಎಂಬ ವರದಿಯೊಂದು ಲಭಿಸಿದೆ. ಓವೈಸಿ ವಿರುದ್ಧ ಫಡ್ನವಿಸ್‌ರವರು ವಾಗ್ದಾಳಿ ನಡೆಸಿರುವ ಮೂಲ ವಿಡಿಯೋ ದೊರೆತಿದೆ.
ಇದೇ ವಿಡಿಯೋವನ್ನು 2022ರ ಮೇ 17ರಂದು ದೇವೇಂದ್ರ ಫಡ್ನವಿಸ್‌ರವರ ಅಧಿಕೃತ Youtube ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. 2022ರ ಮೇ 15ರಂದು ಮುಂಬೈನಲ್ಲಿ “ಹಿಂದಿ ಭಾಷೆಯ ಮಹಾಸಂಕಲ್ಪ ಸಭಾ” ನಡೆದಿದೆ ಎಂದು ವಿಡಿಯೋದ ವಿವರಣೆಯಲ್ಲಿ ಉಲ್ಲೇಖವಾಗಿದೆ.
2022ರ ಮೇ 16ರಂದು ಎಎನ್‌ಐ ವರದಿಯು AIMIM ಮುಖ್ಯಸ್ಥರ ಮೇಲೆ ಬಿಜೆಪಿ ನಾಯಕನ ದಾಳಿಯ ಕುರಿತು ಉಲ್ಲೇಖಿಸಲಾಗಿದೆ. “ಅಸಾದುದ್ದೀನ್ ಓವೈಸಿಯವರು ಔರಂಗಜೇಬ್ ಸಮಾಧಿಗೆ ಗೌರವ ಸಲ್ಲಿಸಲು ಭೇಟಿ ನೀಡುತ್ತಿದ್ದಾರೆ. ಅದನ್ನು ನೀವು ನೋಡುವಾಗ ನಿಮಗೆ ನಾಚಿಕೆಯಾಗಬೇಕು. ಔರಂಗಜೇಬ್‌ನ ಗುರುತಿನ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ, ಕೇಸರಿಕರಣವು ಮಾತ್ರ ಭಾರತವನ್ನು ಆಳುತ್ತದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಅಸಾದುದ್ದೀನ್ ಓವೈಸಿ ವಿರುದ್ಧ ದೇವೇಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ ಎಂದು ಹಳೆಯ ವಿಡಿಯೋವನ್ನು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ:
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.