Fact Check : ರೋಗಿಗಳಿಗೆ ರಕ್ತ ಪೂರೈಸಲು ಕೇಂದ್ರ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ ಎಂಬುದು ಸುಳ್ಳು

“ರೋಗಿಗಳಿಗೆ ರಕ್ತ ಒದಗಿಸಲು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪ್ಯಾನ್-ಇಂಡಿಯಾ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಿದೆ” ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಈ  ವಾಟ್ಸಾಪ್ ಸಂದೇಶದಲ್ಲಿ ರೋಗಿಗಳಿಗೆ ರಕ್ತ ಬೇಕಿದ್ದಲ್ಲಿ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ ಎಂದು  ಈ ಸೇವೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸೇರಿಸಿ ವಾಟ್ಸಪ್‌ನಲ್ಲಿ (WhatsApp) ಸಂದೇಶವೊಂದು ಫಾರ್ವರ್ಡ್‌  ಮಾಡಲಾಗುತ್ತಿದೆ. “ರೋಗಿಗಳಿಗೆ ರಕ್ತ ಒದಗಿಸಲು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪ್ಯಾನ್-ಇಂಡಿಯಾ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಿದೆ. ಈ ಸೌಲಭ್ಯವನ್ನು ಪಡೆಯಲು, ಕುಟುಂಬದ ಸದಸ್ಯರು ಸಹಾಯವಾಣಿ 104ಕ್ಕೆ ಡಯಲ್…

Read More
ನಟ ವಿಜಯ್

Fact Check: ನಟ ವಿಜಯ್ ಕೆಸಿಆರ್ ಮತ್ತು ಜಗನ್ ಮೋಹನ್ ರೆಡ್ಡಿ ಅವರನ್ನು ಟೀಕಿಸಿ ಭಾಷಣ ಮಾಡಿದ್ದಾರೆ ಎಂಬ ಸುಳ್ಳು ಹೇಳಿಕೆಗಳು ವೈರಲ್

ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ಇತ್ತೀಚೆಗೆ ತಮಿಳುನಾಡಿನಲ್ಲಿ ತಮ್ಮ ಪಕ್ಷದ ಮೊದಲ ಸಭೆಯನ್ನು ಆಯೋಜಿಸಿದ್ದರು. ವಿಜಯ್ ಅವರ ಭಾಷಣದ ಸಣ್ಣ ವೀಡಿಯೊ ತುಣುಕೊಂದರಲ್ಲಿ ಅವರು ತಮ್ಮ ಭಾಷಣದಲ್ಲಿ ಜಗನ್ ಮತ್ತು ಕೆಸಿಆರ್ ಪಕ್ಷದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ (ಇಲ್ಲಿ ಮತ್ತು ಇಲ್ಲಿ). ಇದಲ್ಲದೆ, “ನಾನು ಗೆಲ್ಲಲು ಹೆಣದ ರಾಜಕೀಯ ಮಾಡುವುದಿಲ್ಲ, ನಾನು ಯಾವುದೇ ಖಡ್ಗ ಹಿಡಿದು ನಾಟಕವನ್ನು ಆಡುವುದಿಲ್ಲ” ಎಂದು ವಿಜಯ್ ಮನೆಯಲ್ಲಿ ಹೇಳಿದ್ದಾರೆ ಎಂದು ಹೇಳುವ ವಿಡಿಯೋ ಸಹ ವೈರಲ್ ಆಗುತ್ತಿದೆ. ಇನ್ನೂ ಕೆಲವರು…

Read More

Fact Check | ಹೆಜ್ಬುಲ್ಲಾ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಫೋಟೋ ತೆಗೆದುಕೊಂಡಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಲೆಬನಾನ್‌ನ ಹೆಜ್ಬುಲ್ಲಾ ಉಗ್ರಸಂಘಟಣೆಯ ನಡುವೆ ನಡೆಯುತ್ತಿರುವ ಸಂಘರ್ಷ ಪ್ರತಿನಿತ್ಯವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆ ಈ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ರೀತಿಯಾದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ಅದೇ ರೀತಿಯಲ್ಲಿ ಹೆಜ್ಬುಲ್ಲಾ ಉಗ್ರರು ಇಸ್ರೇಲ್ ವಿರುದ್ಧ ಹೋರಾಡಲು ತಮ್ಮ ಬಳಿ ಇರುವ ಆಯುಧಗಳನ್ನು ಪ್ರದರ್ಶಿಸಿ ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ನೋಡಿದ ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ನಿಜವಿಂದು ಭಾವಿಸಿ ವ್ಯಾಪಕವಾಗಿ…

Read More

“OBC, ST ಮತ್ತು SC ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವೇಶ್ಯೆಯರನ್ನಾಗಿ ಮಾಡಬೇಕು” ಎಂದು ಗೋಳ್ವಾಲ್ಕರ್‌ ಹೇಳಿಲ್ಲ

“ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ  ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು”  ಎಂದು ಎಂ.ಎಸ್ ಗೋಳ್ವಾಲ್ಕರ್‌ರವರು ತಮ್ಮ “ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ  ಬರೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ವೈರಲ್‌ ಮಾಡಲಾಗುತ್ತಿದೆ.  ಈ ಬಗ್ಗೆ ಪರಿಶೀಲನೆ ನಡೆಸೋಣಾ. ಫ್ಯಾಕ್ಟ್‌ಚೆಕ್‌ : ಒಬಿಸಿ, ಎಸ್‌ಟಿ ಮತ್ತು ಎಸ್‌ಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ  ಸಿಲುಕಿಸಿ ಅವರನ್ನು ವೇಶ್ಯೆಯರನ್ನಾಗಿ ಮಾಡಬೇಕು  ಎಂದು ಎಂ.ಎಸ್ ಗೋಳ್ವಾಲ್ಕರ್ ಅವರ ಪುಸ್ತಕದಲ್ಲಿ ಉಲ್ಲೇಖಿಸಿಲ್ಲ. ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಗೋಳ್ವಾಲ್ಕರ್ ಅವರ…

Read More
ಹೈದರಾಬಾದ್‌

Fact Check: ಹೈದರಾಬಾದ್‌ನ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು

ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಕುರಿತು ಈಗ ದೇಶದಾದ್ಯಂತ ಪರವಿರೋಧ ಚರ್ಚೆಗಳು ನಡೆಯುತ್ತಿದೆ. ಆದರೆ ದೀಪಾವಳಿಗೂ ಮುನ್ನ ಹೈದರಾಬಾದ್‌ನ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂದು ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರು ಅಕ್ಟೋಬರ್ 28 ರಂದು ವೀಡಿಯೊವನ್ನು (ಆರ್ಕೈವ್ ಲಿಂಕ್) vedikatextile_degana ಹಂಚಿಕೊಂಡಿದ್ದಾರೆ. “ದೀಪಾವಳಿಗೆ ಮೊದಲು ಪಟಾಕಿ ಕಾರ್ಖಾನೆಯಲ್ಲಿ ಎಷ್ಟು ಜೀವಗಳು ಕಳೆದುಹೋದವು?” ಎಂದು…

Read More

Fact Check : ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೂ ಮುಂಚೆ ಓವೈಸಿ ವಿರುದ್ಧ ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ ಎಂದು 2022ರ ವಿಡಿಯೋ ಹಂಚಿಕೆ

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ವಾಗ್ದಾಳಿ ನಡೆಸಿದ್ದಾರೆ ಎಂಬ ವಿಡಿಯೋವೊಂದನ್ನುಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಹೊಸ ಆಕ್ರಮಣಕಾರಿ ಎನ್‌ಡಿಎ” ,“…ಓವೈಸಿ ಕೇಳು, ಔರಂಗಜೇಬ್‌ನ ಗುರುತಿನ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ. ಈಗ ಭಾರತದ ಮೇಲೆ ಕೇಸರಿಕರಣದ ಅಲೆ ಪ್ರಾರಂಭವಾಗುತ್ತದೆ…” ಎಂದು 1:46 ಸೆಕೆಂಡ್‌ನ ವಿಡಿಯೋದಲ್ಲಿ ಫಡ್ನವೀಸ್ ಹೇಳಿದ್ದಾರೆ. “2024 ಹಿನ್ನಡೆಯು ಒಂದು ರೀತಿಯಲ್ಲಿ ಉತ್ತಮವಾಗಿದೆ! ನಾವು ಇದುವರೆಗೂ ನೋಡಿರದ ಹೊಸ ಆಕ್ರಮಣಕಾರಿ ಎನ್‌ಡಿಎಯನ್ನು…

Read More

Fact Check | ಬ್ರೆಜಿಲ್ ಸರ್ಕಾರವು ಬೈಕ್‌ನಲ್ಲಿ ಬರುವ ದರೋಡೆಕೋರರನ್ನು ಕೊಲ್ಲಲು ಅನಿಮತಿ ನೀಡಿದೆ ಎಂಬುದು ಸುಳ್ಳು

“ರಸ್ತೆ ಪ್ರಯಾಣಿಕರನ್ನು ದರೋಡೆ ಮಾಡಲು ಪ್ರಯತ್ನಿಸುವ ಬೈಕ್ ಸವಾರರು ಮತ್ತು ಇನ್ನಿತರ ದರೋಡೆಕೋರರನ್ನು ಕೊಲ್ಲಲು ಬ್ರೆಜಿಲ್ ಸರ್ಕಾರ ಅನುಮತಿಯನ್ನು ನೀಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳಲ್ಲಿ “ಬ್ರೆಜಿಲ್ ಸರ್ಕಾರದ ಹೊಸ ಆದೇಶದಿಂದಾಗಿ ಕಾರಿನ ಸವಾರರು ಬೈಕ್‌ನಲ್ಲಿ ಬರುವ ಎಲ್ಲಾ ದರೋಡೆಕೋರರನ್ನು ಕೊಲ್ಲುತ್ತಿದ್ದಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ವಿವಿಧ ವಿಡಿಯೋ ಕ್ಲಿಪ್‌ಗಳ ಕೊಲಾಜ್‌ ಆಗಿರುವುದನ್ನು ಗಮನಿಸಬಹುದಾಗಿದೆ. ಈ ಬಹುತೇಕ ಕ್ಲಿಪ್‌ಗಳಲ್ಲಿ ಕಾರಿನ ಸವಾರರು ಬೈಕ್ ಸವಾರರ ಮೇಲೆ ಕಾರು ಚಲಾಯಿಸಿ ಕೊಲ್ಲುವುದನ್ನು…

Read More