ಕಾಂಗ್ರೆಸ್ ಧ್ವಜಗಳನ್ನು ಹಿಡಿದುಕೊಂಡು ಬೃಹತ್ ಜನಸಮೂಹವು ಜಮಾಯಿಸಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. “ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಬ್ಬರದ ಚುನಾವಣಾ ಪ್ರಚಾರ ರ್ಯಾಲಿ ಇದು” ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ .
ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ಇತ್ತೀಚೆಗೆ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿಯವರು ರ್ಯಾಲಿ ನಡೆಸಿದ್ದರು. ಇದರ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗುತ್ತಿದೆ.
ಫ್ಯಾಕ್ಟ್ಚೆಕ್ :
ಈ ವಿಡಿಯೋ “ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ಮೇ 11ರಂದು ನಡೆದ ಪ್ರಿಯಾಂಕಾ ಗಾಂಧಿಯವರ ರ್ಯಾಲಿಗೆ ಸಂಬಂಧಿಸಿದ್ದು; ವಯನಾಡಿನಲ್ಲಿ ನಡೆದ ರ್ಯಾಲಿ ಅಲ್ಲ” ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡವು ಪತ್ತೆ ಹಚ್ಚಿದೆ.
ವೈರಲ್ ವಿಡಿಯೋದ ಕೆಲವು ಕೀಫ್ರೇಮ್ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೇ, ನಮಗೆ ಮರಾಠಿ ಸುದ್ದಿ ಔಟ್ಲೆಟ್ ಸಮಾಚಾರ್ ಫಸ್ಟ್ ಹಂಚಿಕೊಂಡ ಫೇಸ್ಬುಕ್ ಪೋಸ್ಟ್ ಲಭಿಸಿದೆ. ಇದನ್ನು ಮೇ 11ರಂದು ಹಂಚಿಕೊಳ್ಳಲಾಗಿದ್ದು, “ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ನಡೆದ ಪ್ರಿಯಾಂಕಾ ಗಾಂಧಿಯವರ ರ್ಯಾಲಿಯ ದೃಶ್ಯ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಸ್ವತಃ ಪ್ರಿಯಾಂಕಾ ಗಾಂಧಿಯವರೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಮೇ 11ರಂದು ಹಂಚಿಕೊಂಡಿದ್ದಾರೆ. ಮತ್ತು ಈ ವಿಡಿಯೋದ ಮೇಲೆ ʼಮಹಾರಾಷ್ಟ್ರದ ನಂದೂರ್ಬಾರ್ʼ ಎಂದು ಸ್ಥಳವನ್ನು ನಮೂದಿಸಲಾಗಿದೆ.
View this post on Instagram
ಪ್ರಿಯಾಂಕಾ ಗಾಂಧಿಯವರು ಮಹಾರಾಷ್ಟ್ರದಲ್ಲಿ ಮೇ 11ರಂದು ನಡೆಸಿದ ರ್ಯಾಲಿಯ ಕುರಿತು ಸಾಮ್ ಟಿವಿ , ಟೈಮ್ಸ್ ಆಫ್ ಇಂಡಿಯಾ ಮತ್ತು ಟಿವಿ9 ಮರಾಠಿ ಕೂಡ ವರದಿ ಮಾಡಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡೆಸಿದ ರ್ಯಾಲಿಯ ಹಳೆಯ ವಿಡಿಯೋವನ್ನು ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ನಡೆಸಿದ ರ್ಯಾಲಿ ಎಂದು ವೈರಲ್ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ? Fact Check : ಈ ಹೋಮಿಯೋಪತಿ ಔಷಧವು 48 ಗಂಟೆಗಳಲ್ಲಿ ಡೆಂಗ್ಯೂ ಗುಣಪಡಿಸುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.