ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸುತ್ತ ನಡೆಯುತ್ತಿರುವ ವಿವಾದದ ಮಧ್ಯೆ, ಸಲ್ಮಾನ್ ಖಾನ್ ಅವರ ಸಹೋದರರಾದ ಅರ್ಬಾಜ್ ಮತ್ತು ಸೊಹೈಲ್ ಖಾನ್ ಮತ್ತು ಅವರ ಸಹೋದರಿ ಅಲ್ವಿರಾ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಅವರೊಂದಿಗೆ ಪೋಸ್ ನೀಡುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್). ಅಂತಹ ಹೆಚ್ಚಿನ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್
ಈ ಚಿತ್ರವನ್ನು ಫ್ಯಾಕ್ಟ್ ಚೆಕ್ ನಡೆಸಿದಾಗ ಇದು ಮಾರ್ಫಿಂಗ್ ಆಗಿರುವುದು ಕಂಡುಬಂದಿದೆ. ರಿವರ್ಸ್ ಇಮೇಜ್ ಸರ್ಚ್ ಮೂಲಕ ಚಿತ್ರವನ್ನು ಹುಡುಕಿದಾಗ, ಖಾನ್ ಸಹೋದರರು ತಮ್ಮ ತಂದೆ ಸಲೀಮ್ ಖಾನ್ ಅವರೊಂದಿಗೆ ಪೋಸ್ ನೀಡುತ್ತಿರುವ ಮೂಲ ಚಿತ್ರವನ್ನು ಒಳಗೊಂಡ ಹಲವಾರು ವರದಿಗಳು ನಮ್ಮ ತಂಡಕ್ಕೆ ಲಭ್ಯವಾಗಿದೆ. (ಈ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು)
ಈ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ತಿಳಿಯಲು ಸಲ್ಮಾನ್ ಅವರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹುಡುಕಾಡಿದಾಗ, ಮೂಲ ಪೋಸ್ಟ್ ಅನ್ನು ನಾವು ಪತ್ತೆಹಚ್ಚಿದ್ದೇವೆ, ಅಲ್ಲಿ ಸಲ್ಮಾನ್ ಜೂನ್ 20, 2021 ರಂದು ವಿಶ್ವ ತಂದೆಯ ದಿನಾಚರಣೆಯ ಸಂದರ್ಭದಲ್ಲಿ ಮೂಲ ಚಿತ್ರವನ್ನು ಹಂಚಿಕೊಂಡಿದ್ದರು.
Happy Father's Day… pic.twitter.com/6eXzbXUChz
— Salman Khan (@BeingSalmanKhan) June 20, 2021