Fact Check | RSS ಸ್ಥಾಪಕ ಹೆಡ್ಗೆವಾರ್ ಕೊನೆಯ ಭಾಷಣ ಎಂಬ ವಿಡಿಯೋ ನಾಟಕವೊಂದರ ದೃಶ್ಯವಾಗಿದೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಡಾ. ಕೇಶವರಾಮ್ ಬಲಿರಾಮ್ ಹೆಡ್ಗೆವಾರ್ ಅವರ ಕೊನೆಯ ಭಾಷಣದ ವೀಡಿಯೊ ಕ್ಲಿಪ್ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕ್ಲಿಪ್‌ನಲ್ಲಿ  ಡಾ. ಕೇಶವರಾಮ್ ಬಲಿರಾಮ್ ಹೆಡ್ಗೆವಾರ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ವೇದಿಕೆಯನ್ನು ಉದ್ದೇಶಿಸಿ ಮಾತನಾಡುವುದನ್ನು ಕಾಣಬಹುದು ಮತ್ತು ಕೇಳಬಹುದಾಗಿದೆ. ಹೀಗಾಗಿ ವೈರಲ್‌ ವಿಡಿಯೋ ಹೆಚ್ಚು ಪ್ರಚಾರವನ್ನು ಪಡೆಯುವುದರೊಂದಿಗೆ ಸಾಕಷ್ಟು ಚರ್ಚೆಗೆ ಕೂಡ ಕಾರಣವಾಗಿದೆ.

ವೈರಲ್‌ ವಿಡಿಯೋದಲ್ಲಿ ಕೂಡ ಹೆಡ್ಗೆವಾರ್ ಅವರಂತೆಯೇ ಇರುವ ವ್ಯಕ್ತಿ ಭಾಷಣ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಹಲವರು ವೈರಲ್‌ ವಿಡಿಯೋವನ್ನು ನಿಜವೆಂದು ನಂಬಿದ್ದಾರೆ. ಹೀಗಾಗಿ ಹಲವು ಸಾರ್ವಜನಿಕರು ಕೂಡ ವೈರಲ್‌ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಈ ವಿಡಿಯೋವನ್ನು ನೋಡಿ ಇದು ನಕಲಿ ವಿಡಿಯೋ ಎಂದು ಕೂಡ ಹೇಳುತ್ತಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಚರ್ಚೆಯನ್ನು ಹುಟ್ಟು ಹಾಕಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧಿಕೃತ ವೆಬ್‌ಸೈಟ್‌ ಅನ್ನು ಪರಿಶೀಲನೆ ನಡೆಸಿದೆವು. ಇದರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ಡಾ. ಕೇಶವರಾಮ್ ಬಲಿರಾಮ್ ಹೆಡ್ಗೆವಾರ್ ಅವರು 1925 ರಲ್ಲಿ ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಸ್ಥಾಪಿಸಿದರು ಮತ್ತು 1940 ರಲ್ಲಿ ನಿಧನರಾದರು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

ವೈರಲ್ ವೀಡಿಯೊ ಕ್ಲಿಪ್ ಕಲರ್ ವಿಡಿಯೋ ಕ್ಲಿಪ್ ಆಗಿದೆ ಮತ್ತು ಭಾರತದಲ್ಲಿ ಮೊದಲ ಕಲರ್ ಟೆಲಿಕಾಸ್ಟ್ 1982 ರಲ್ಲಿ ಪ್ರಾರಂಭವಾಯಿತು. ವೈರಲ್ ಆಗುತ್ತಿರುವ ವೀಡಿಯೋ ಡಾ.ಹೆಡಗೇವಾರ್ ಅವರ ಜೀವಿತಾವಧಿಯಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ವೈರಲ್ ವೀಡಿಯೊದ ಮೂಲ ಮೂಲವನ್ನು ಹುಡುಕಲು, ನಾವು ಅದರ ಪ್ರಮುಖ ಫ್ರೇಮ್‌ಗಳನ್ನು Google ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಈ ವೈರಲ್‌ ವಿಡಿಯೋವನ್ನು ‘ರಾಕೇಶ್ ರೋಷನ್’ ಎಂಬ ಹೆಸರಿನ YouTube ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ. 

ಈ ವಿಡಿಯೋವಿನ ಡಿಸ್ಕ್ರಿಪ್ಷನ್‌ನಲ್ಲಿ ಇದು ಡಾ. ಹೆಡ್ಗೆವಾರ್ ಅವರ ಕೊನೆಯ ಭಾಷಣವನ್ನು ಆಧರಿಸಿದ ಸಂಘಟನೆಯ ತರಬೇತಿ ಅಭಿಯಾನವನ್ನು ಉದ್ದೇಶಿಸಿ ನಾಟಕದ ಒಂದು ಭಾಗವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಮೂರು ವರ್ಷಗಳ ಹಿಂದೆ ಹಂಚಿಕೊಳ್ಳಲಾದ ಮತ್ತೊಂದು YouTube ಚಾನಲ್‌ನಲ್ಲಿ ನಾವು  ದೀರ್ಘಾವಧಿಯ ತುಣುಕನ್ನು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಅವರ ನಿಜವಾದ ಕೊನೆಯ ವೀಡಿಯೊ ಎಂದು ಹಂಚಿಕೊಳ್ಳಲಾಗಿದ್ದರೂ, ಅದರಲ್ಲಿ ಕಂಡುಬರುವ ದೃಶ್ಯಗಳಲ್ಲಿ ನಾಟಕೀಯ ಪರಿಣಾಮವನ್ನು (ಕೆಮ್ಮು, ಮಾತನಾಡುವ ಶೈಲಿ ಇತ್ಯಾದಿ) ಸ್ಪಷ್ಟವಾಗಿ ಕಾಣಬಹುದಾಗಿದೆ.

ಈ ನಾಟಕದ ಸಂಪೂರ್ಣ ವೀಡಿಯೊವನ್ನು ನಾವು ಎಲ್ಲಿಯೂ ಕಂಡುಹಿಡಿಯಲಾಗಲಿಲ್ಲ, ಆದರೆ ವೈರಲ್ ಆಗುತ್ತಿರುವ ವೀಡಿಯೊ ನಾಟಕ ಅಥವಾ ನಾಟಕದ ವೀಡಿಯೊ ಎಂಬುದು ಸ್ಪಷ್ಟವಾಗಿದೆ. ವೈರಲ್ ವೀಡಿಯೊ ಕುರಿತು, ನಾವು ಕೆಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಬಳಿ ಮಾಹಿಯನ್ನು ಕೇಳಿದ್ದೇವು. ಆಗ ಹಲವರು “ಇದು ನಾಟಕದ ವಿಡಿಯೋ ಆಗಿರುವ ಸಾಧ್ಯತೆ ಇದೆ. ಒಂದು ವೇಳೆ ಇದು ನಿಜವಾದ ವಿಡಿಯೋ ಆಗಿದ್ದರೆ ಸಂಘದ ಪ್ರಮುಖರು ಈ ವಿಡಿಯೋಗಳನ್ನು ನಮಗೆ ವಿವಿಧ ಕಾರ್ಯಕ್ರಮಗಳಲ್ಲಿ ತೋರಿಸುತ್ತಿದ್ದರು” ಎಂದು ಮಾಹಿತಿಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವರಾಮ್ ಬಲಿರಾಮ್ ಹೆಡ್ಗೆವಾರ್ ಅವರ ಕೊನೆಯ ಭಾಷಣದ ವೀಡಿಯೊ ಕ್ಲಿಪ್ ಎಂಬ ವಿಡಿಯೋ ನಾಟಕವೊಂದರ ಕ್ಲಿಪ್‌ ಆಗಿದೆ. ಹಾಗಾಗಿ ಇದು ನಿಜವಾದ ವಿಡಿಯೋವಲ್ಲ. ಸಂಘ ಪರಿವಾರದ ಕೆಲವು ನಾಯಕರು ಕೂಡ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ವೈರಲ್‌ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: BRICS ನಾಯಕರ ಪೋಟೋ ವೇಳೆ ಪ್ರಧಾನಿ ಮೋದಿಯವರನ್ನು ಕಡೆಗಣಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *