Fact Check: BRICS ನಾಯಕರ ಪೋಟೋ ವೇಳೆ ಪ್ರಧಾನಿ ಮೋದಿಯವರನ್ನು ಕಡೆಗಣಿಸಲಾಗಿದೆ ಎಂಬುದು ಸುಳ್ಳು

ಪ್ರಧಾನಿ ಮೋದಿ

ರಷ್ಯಾದ ಕಜಾನ್ ನಲ್ಲಿ ನಡೆಯುತ್ತಿರುವ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 22 ರಿಂದ 23 ರವರೆಗೆ ರಷ್ಯಾಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ, ಶೃಂಗಸಭೆಯ ಕೊನೆಯ ದಿನದಂದು ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ಜಾಗತಿಕ ನಾಯಕರು ಫೋಟೋ ತೆಗೆಸಿಕೊಳ್ಳುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಆ ವಿಡಿಯೋದಲ್ಲಿ ಪ್ರಧಾನಿ ಮೋದಿ ಇಲ್ಲದಿರುವ ಕಾರಣಕ್ಕಾಗಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 2012ರ ಬ್ರಿಕ್ಸ್ ಗ್ರೂಪ್ ಫೋಟೋಗೆ ಹೋಲಿಸಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವೀಡಿಯೊವನ್ನು ಹಂಚಿಕೊಂಡ ಅನೇಕರು, ಪುಟಿನ್ -ಪೋಟೋ ತೆಗೆಸಿಕೊಳ್ಳಲು ಭಾರತೀಯ ಪ್ರಧಾನಿಯನ್ನು ಆಹ್ವಾನಿಸಲಿಲ್ಲ ಎಂದು ಹೇಳಿದ್ದಾರೆ, ಇದನ್ನು “ಅಂತರರಾಷ್ಟ್ರೀಯ ಅವಮಾನ” ಎಂದು ಕರೆದಿದ್ದಾರೆ. ಅಂತಹ ಒಂದು ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಮೋದಿ ಬ್ರಿಕ್ಸ್ ಫ್ಯಾಕ್ಟ್ ಚೆಕ್

ಫ್ಯಾಕ್ಟ್‌ ಚೆಕ್:

ವೈರಲ್ ವೀಡಿಯೊದಲ್ಲಿ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ನಿಯೋಗಗಳ ಮುಖ್ಯಸ್ಥರು ಫೋಟೋವಿಗೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅದಾಗಲೇ ಅಕ್ಟೋಬರ್ 24, 2024 ರಂದು ದೆಹಲಿಗೆ ಮರಳಿದ್ದರು ಮತ್ತು ಹಿಂದಿನ ದಿನ ಅಧಿಕೃತ ಗ್ರೂಪ್ ಫೋಟೋದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮೋದಿಯವರು ಫೋಟೋ ತೆಗೆಸಿಕೊಂಡಿದ್ದಾರೆ.

ವೈರಲ್ ವೀಡಿಯೊದಿಂದ ಕೆಲವು ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೆಜ್ ಸರ್ಚ್‌ನಲ್ಲಿ ಹುಡುಕಿದಾಗ, ಸುದ್ದಿ ಸಂಸ್ಥೆ ಎಎನ್ಐನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಕ್ಟೋಬರ್ 24 ರ ಪೋಸ್ಟ್ ಮಾಡಿದ ವರದಿ ಲಭ್ಯವಾಗಿದೆ. “ರಷ್ಯಾ: ಬ್ರಿಕ್ಸ್ ಪ್ಲಸ್ ಸ್ವರೂಪದಲ್ಲಿ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಕಜಾನ್ ಎಕ್ಸ್ಪೋ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಿಯೋಗಗಳ ಮುಖ್ಯಸ್ಥರೊಂದಿಗೆ ಇಎಎಂ ಡಾ. ಎಸ್. ಜೈಶಂಕರ್” ಎಂದು ಅಲ್ಲಿ ಉಲ್ಲೇಖಿಸಲಾಗಿದೆ.

ಶೃಂಗಸಭೆಯ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾಗಲು ಕಾರಣ ಈಗಾಗಲೇ ವರದಿಯಾಗಿದೆ, ಏಕೆಂದರೆ ಅವರು ನವದೆಹಲಿಗೆ ಮರಳಿದ್ದಾರೆ ಮತ್ತು ಕೊನೆಯ ದಿನದಂದು ಭಾಗವಹಿಸಿಲ್ಲ. ಅಕ್ಟೋಬರ್ 22, 2024 ರಿಂದ ಅಕ್ಟೋಬರ್ 23, 2024 ರವರೆಗೆ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಈಗಾಗಲೇ ಅಕ್ಟೋಬರ್ 18, 2024 ರ ಪತ್ರಿಕಾ ಪ್ರಕಟಣೆಯಲ್ಲಿ ಘೋಷಿಸಿತ್ತು.

ಅಕ್ಟೋಬರ್ 24, 2024 ರ ಮಧ್ಯರಾತ್ರಿ, ಎಎನ್ಐ 12.24 ಕ್ಕೆ ಪ್ರಧಾನಿ ಮೋದಿ ರಷ್ಯಾದಿಂದ ನವದೆಹಲಿಗೆ ಬಂದಿಳಿದಿದ್ದಾರೆ ಎಂದು ಪೋಸ್ಟ್ ಮಾಡಿದೆ. ಬ್ರಿಕ್ಸ್ 2024 ಶೃಂಗಸಭೆಯ ಕೊನೆಯ ದಿನವಾದ ಅಕ್ಟೋಬರ್ 24, 2024 ರಂದು ಮೋದಿ ಈಗಾಗಲೇ ಭಾರತಕ್ಕೆ ಮರಳಿದ್ದಾಗ ಈ ವೈರಲ್ ವೀಡಿಯೊವನ್ನು ತೆಗೆದುಕೊಳ್ಳಲಾಗಿದೆ.

ಬ್ರಿಕ್ಸ್ 2024 ಶೃಂಗಸಭೆಯ ಎರಡನೇ ದಿನದಂದು ಗ್ರೂಪ್ ಫೋಟೋದಲ್ಲಿ ಪ್ರಧಾನಿ ಮೋದಿ

ವೈರಲ್ ವೀಡಿಯೊದಲ್ಲಿ ಗ್ರೂಪ್ ಫೋಟೋಗೆ ಒಂದು ದಿನ ಮೊದಲು, ಬ್ರಿಕ್ಸ್ ನಾಯಕರು ಶೃಂಗಸಭೆಯ ಎರಡನೇ ದಿನದಂದು ಗ್ರೂಪ್ ಫೋಟೋವನ್ನು ತೆಗೆಸಿಕೊಂಡಿದ್ದರು. ಅಕ್ಟೋಬರ್ 23, 2024 ರಂದು ಈ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿ ಅವರು ಪುಟಿನ್ ಮತ್ತು ಕ್ಸಿ ಜಿನ್ಪಿಂಗ್ ಸೇರಿದಂತೆ ಇತರ ಬಿಆರ್‌ಸಿಐಎಸ್ ನಾಯಕರೊಂದಿಗೆ ಗ್ರೂಪ್ ಫೋಟೋದಲ್ಲಿ ಕಾಣಬಹುದು.

ಅಕ್ಟೋಬರ್ 23, 2024 ರಂದು, ಎಎನ್ಐ ಪ್ರಧಾನಿ ಮೋದಿ ಅವರೊಂದಿಗಿನ ವೀಡಿಯೊವನ್ನು ಪೋಸ್ಟ್ ಮಾಡಿದೆ, “#WATCH | ರಷ್ಯಾ: ಬ್ರಿಕ್ಸ್ ಶೃಂಗಸಭೆ ಪ್ರಾರಂಭವಾಗಲಿರುವ ಕಜಾನ್ ಎಕ್ಸ್ ಪೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರು ಕುಟುಂಬ ಫೋಟೋದಲ್ಲಿ. (ವೀಡಿಯೊ: ರಾಯಿಟರ್ಸ್ ಮೂಲಕ ಹೋಸ್ಟ್ ಬ್ರಾಡ್ಕಾಸ್ಟರ್)”


ಇದನ್ನು ಓದಿ: ರಾಜಸ್ಥಾನ-ಗುಜರಾತ್-ಮಹಾರಾಷ್ಟ್ರ ಹೆದ್ದಾರಿಯಲ್ಲಿರುವ 40 ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬುದಕ್ಕೆ ಆಧಾರವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *