Fact Check : ಇತ್ತೀಚೆಗೆ ಚೀನಾ-ತೈವಾನ್‌ ಉದ್ವಿಗ್ನತೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೈವಾನ್‌ನ ಗಡಿಯ ಸಮೀಪ ಸೈನಿಕರನ್ನೆಲ್ಲ ಒಟ್ಟುಗೂಡಲು ಕರೆ ನೀಡಿದ್ದಾರೆ. ಈ ಪ್ರಕಾರ ಸೈನಿಕರೆಲ್ಲ ಒಟ್ಟಾಗಿ ಸೇರಿ ಡ್ರಿಲ್‌ ಮುಗಿಸಿದ ನಂತರ ಕ್ಸಿ ಜಿನ್‌ಪಿಂಗ್‌ರು ಭಾಷಣದಲ್ಲಿ ಯುದ್ಧದ ಸಿದ್ಧತೆಯ ತಯಾರಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಒತ್ತಾಯದ ಮೇರೆಗೆ ಚೀನಾದ ಸೈನಿಕರೆಲ್ಲರೂ ಯುದ್ಧ ಸಿದ್ಧತೆಯ ತಯಾರಿಯನ್ನು ಪ್ರಾರಂಭಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಚೀನಾ ಏಕೆ ಹಿಂದುಳಿದಿದೆ!! ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸೇನೆಗೆ ಯುದ್ಧಕ್ಕೆ ಸಿದ್ಧರಾಗುವಂತೆ ಕರೆ ನೀಡಿದ್ದಾರೆ. ಚೀನಾ ಈಗ ತೈವಾನ್ ವಿರುದ್ಧ ಯುದ್ಧ ಮಾಡುವತ್ತ ಗಮನಹರಿಸಿರುವಂತಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಕೆಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋ ನಿಜಕ್ಕೂ ತೈವಾನ್‌ ಯುದ್ಧಕ್ಕೆ ಸಂಬಂಧಿಸಿದೆಯೇ ಎಂಬುದನ್ನು ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ನಿಜವನ್ನುತಿಳಿದುಕೊಳ್ಳಲು ನಮ್ಮ ಕನ್ನಡ ಪ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ನಾವು ವೈರಲ್ ವಿಡಿಯೋದ ವಿವಿಧ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದೆವು. ಈ ವೇಳೆ ನಮಗೆ 2018ರ ಜನವರಿ 4ರಂದು ದಿ ಗಾರ್ಡಿಯನ್‌ನ Youtube ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡುಬಂದಿದ್ದು, ಅದರಲ್ಲಿ ” ಕ್ಸಿ ಜಿನ್‌ಪಿಂಗ್‌ರಿಗೆ ಚೀನಾದ ಸೈನ್ಯವು ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ವಿವರಣೆಯ ಪ್ರಕಾರ, ಚೀನಾದ ಸೈನಿಕರು ಯುದ್ಧದ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಆಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬೀಜಿಂಗ್ ಬಳಿಯ ಹೆಬೈ ಪ್ರಾಂತ್ಯದಲ್ಲಿ 7,000 ಮಿಲಿಟರಿ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕ್ಸಿ ನಿಜವಾಗಿಯೂ ಯುದ್ಧದ ಗೆಲುವಿಗಾಗಿ, ಯುದ್ಧ ತರಬೇತಿಯ ಅಗತ್ಯತೆಯ ಕುರಿತು ಸೈನಿಕರಿಗೆ ಒತ್ತಾಯಿಸಿದ್ದರು.

2018ರ ಜನವರಿ 3ರಂದು ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ದಿ ಗಾರ್ಡಿಯನ್ ಮತ್ತು ಮೆಟ್ರೋದ ಮಾಧ್ಯಮ ವರದಿಗಳು ಲಭಿಸಿವೆ. ಈ ವರದಿಗಳ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ಆಯೋಜಿಸಿದ ಸಾಮೂಹಿಕ ಮಿಲಿಟರಿ ಡ್ರಿಲ್‌ನಲ್ಲಿ ಸಾವಿರಾರು ಸೈನಿಕರು ಭಾಗವಹಿಸಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಅಧ್ಯಕ್ಷ ಜಿನ್‌ಪಿಂಗ್‌ರು ಉತ್ತರ ಚೀನಾದ ಅಜ್ಞಾತ ಸ್ಥಳದಲ್ಲಿ ಸೈನಿಕರು ಒಗ್ಗಟ್ಟಿನಿಂದ ಮೆರವಣಿಗೆ ಮಾಡುವ ಮೊದಲೇ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಅಧ್ಯಕ್ಷ ಕ್ಸಿ ಕಾರ್ಯಕ್ರಮದ ಮುಂಚೂಣಿಯಲ್ಲಿ ನಿಂತಿರುವ ಸೈನಿಕರ ದೃಶ್ಯವನ್ನು ಚೀನಾದ ರಾಜ್ಯ ದೂರದರ್ಶನ ಸಿಸಿಟಿವಿಯಲ್ಲಿ  ಪ್ರಸಾರ ಮಾಡಲಾಗಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋ 2018ರದ್ದಾಗಿಯೇ ಹೊರತು ಇತ್ತೀಚಿನ ಚೀನಾ-ತೈವಾನ್ ಗಲಾಟೆಗೆ ಸಂಬಂಧಿಸಿಲ್ಲ. ಈ ವೈರಲ್‌ ವಿಡಿಯೋವನ್ನು ಇತ್ತೀಚಿನದ್ದು ಎಂದು ಯಾರೂ ಹಂಚಿಕೊಳ್ಳಬೇಡಿ.


ಇದನ್ನು ಓದಿ : 

Fact Check : ನೆತನ್ಯಾಹು ʼಭಯೋತ್ಪಾದಕʼ ಎಂಬ ಪೋಸ್ಟರ್ ಅನ್ನು ಕಿಂಗ್ ಚಾರ್ಲ್ಸ್ III ಅನಾವರಣಗೊಳಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *