Fact Check: ನೆಹರೂ ಅವರು ಸುಭಾಷ್‌ ಚಂದ್ರ ಬೋಸ್‌ ವಿರುದ್ಧ ಆಟ್ಲೀ ಅವರಿಗೆ ಪತ್ರ ಬರೆದಿದ್ದರು ಎಂಬುದು ಸುಳ್ಳು

ನೆಹರೂ

ಡಿಸೆಂಬರ್ 1945 ರಲ್ಲಿ, ಪಂಡಿತ್ ಜವಾಹರಲಾಲ್ ನೆಹರು “ಇಂಗ್ಲೆಂಡ್ ಪ್ರಧಾನ ಮಂತ್ರಿ ಕ್ಲೆಮೆಂಟ್ ಅಟ್ಲೀ” ಗೆ ಪತ್ರ ಬರೆದು “ಯುದ್ಧ ಅಪರಾಧಿ” ಸುಭಾಷ್ ಚಂದ್ರ ಬೋಸ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿ, ಅವರ ವಿರುದ್ಧ “ಸರಿಯಾದ” ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿ, ನೆಹರೂ ಅವರು ಆಟ್ಲೀ ಅವರಿಗೆ ಬರೆದಿರುವ ಪತ್ರ ಎನ್ನಲಾದ ಪೋಟೋ ಒಂದನ್ನು ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಪತ್ರವು 2016 ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರ್ಗೀಕೃತ ದಾಖಲೆಗಳ ಒಂದು ಭಾಗವಾಗಿದೆ ಎಂದು ಆರೋಪಿಸಲಾಗಿದೆ. ಮತ್ತು “ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಯುದ್ಧ ಅಪರಾಧಿ ಎಂದು ಹೇಳುವ ನೆಹರು ಅವರು ಬ್ರಿಟಿಷ್ ಪ್ರಧಾನಿಗೆ ಬರೆದ ಈ ಪತ್ರ, ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರನನ್ನು ಹೇಗೆ ಯುದ್ಧ ಅಪರಾಧಿ ಎಂದು ಪಿಎಂ ನೆಹರು ಕರೆಯುತ್ತಾರೆ ಎಂಬುದನ್ನು ವಿವರಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್:

 ಬಿಬಿಸಿ ನ್ಯೂಸ್‌ನಲ್ಲಿನ ಲೇಖನದ ಪ್ರಕಾರ, ಸುಭಾಸ್ ಚಂದ್ರ ಬೋಸ್ ಕುರಿತ ನೆಹರೂ ಪತ್ರವು ‘ನಕಲಿ’. ಎಂದು ತಿಳಿದುಬಂದಿದೆ. ಅಲ್ಲದೆ, ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಹೇಳಿದ್ದು, 1945ರಲ್ಲಿ ನೆಹರೂ ಅಟ್ಲೀ ಅವರಿಗೆ ನಿರ್ದೇಶಿಸಿ ನನ್ನಿಂದ ಪತ್ರ ಬರೆಸಿದ್ದರು ಎಂದು ಅಪರಿಚಿತ ವ್ಯಕ್ತಿಯೊಬ್ಬ ಖೋಸ್ಲಾ ಆಯೋಗಕ್ಕೆ 1970ರಲ್ಲಿ ನೀಡಿದ ಸಾಕ್ಷ್ಯ ಇದಾಗಿದೆ. ಆದರೆ ವೈರಲ್ ಪತ್ರ ಸಂಪೂರ್ಣವಾಗಿ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ‘ಅಟ್ಲೀ’ ಎಂಬ ಹೆಸರನ್ನು ಎರಡು ಸ್ಥಳಗಳಲ್ಲಿ ತಪ್ಪಾಗಿ ಬರೆಯಲಾಗಿದೆ ಎಂದು ನಾವು ಗಮನಿಸಿದ್ದೇವೆ. ಇದಲ್ಲದೆ, ಪತ್ರವು ಕ್ಲೆಮೆಂಟ್ ಅಟ್ಲೀಯನ್ನು ಇಂಗ್ಲೆಂಡ್‌ನ ಪ್ರಧಾನ ಮಂತ್ರಿ ಎಂದು ಸಂಬೋಧಿಸುತ್ತದೆ, ಆದರೆ ಅವರು ಯುನೈಟೆಡ್ ಕಿಂಗ್ಡಮ್‌ನ ಪ್ರಧಾನ ಮಂತ್ರಿಯಾಗಿದ್ದರು. ಕ್ಲೆಮೆಂಟ್ ಅಟ್ಲೀಗೆ ಬರೆಯಲಾಗಿದೆ ಎಂದು ಹೇಳಲಾದ ಈ ಪತ್ರವು ಆರಂಭದಲ್ಲಿಯೇ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸುತ್ತದೆ (“ಜವಾಹರಲಾಲ್ ನೆಹರೂ” ಅನ್ನು “ಜವಾಹರ್ಲಾಲ್” ಎಂದು) ತಪ್ಪಾಗಿ ಉಚ್ಚರಿಸಿದೆ. ಇಂಗ್ಲಿಷ್ ನಲ್ಲಿ ನಿಪುಣರಾಗಿದ್ದ ನೆಹರೂ ಅವರಿಂದ ಬಂದ ಅಧಿಕೃತ ಪತ್ರದಲ್ಲಿ ಈ ರೀತಿಯ ದೋಷವನ್ನು ಊಹಿಸುವುದು ಕಷ್ಟ.

ನಮ್ಮ ಹುಡುಕಾಟದ ವೇಳಿ ಬಿಸಿನೆಸ್‌ ಸ್ಟಾಂಡರ್ಡ್ಸ್‌ನ ವರದಿಯೊಂದು ಲಭ್ಯವಾಗಿದ್ದು, “ಬೋಸ್ ಅವರನ್ನು ಯುದ್ಧ ಅಪರಾಧಿ ಎಂದು ಕರೆದ ನೆಹರೂ ಪತ್ರ ನಕಲಿಯಾಗಿರಲು 5 ಕಾರಣಗಳು” ಎಂಬ ಲೇಖನದಲ್ಲಿ “ವೈರಲ್ ಪತ್ರವು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ವಾಟರ್ ಮಾರ್ಕ್ ಅನ್ನು ಹೊಂದಿಲ್ಲ. ಈ ಪತ್ರವನ್ನು ಸುಭಾಷ್ ಚಂದ್ರ ಬೋಸ್ ಅವರ ಸಾವಿನ ವಿವಾದಾತ್ಮಕ ವಿಷಯದ ಬಗ್ಗೆ ಭಾವನೆಗಳನ್ನು ಪ್ರಚೋದಿಸಲು ದುರುದ್ದೇಶಪೂರಿತ ಫೋರ್ಜರಿ ಮಾಡುವ ಕಳಪೆ ಪ್ರಯತ್ನ ಎಂದು ಪತ್ರದ ಕುರಿತ ಆರೋಪವನ್ನು ತಳ್ಳಿಹಾಕಲು ಐದು ಪ್ರಮುಖ ಕಾರಣಗಳನ್ನು ನೀಡಿದೆ.

ನೇತಾಜಿಯವರ ಸಾವಿನ ಬಗ್ಗೆ ತನಿಖೆ ನಡೆಸಲು 1970 ರಲ್ಲಿ ಸ್ಥಾಪಿಸಲಾದ ಖೋಸ್ಲಾ ಆಯೋಗಕ್ಕೆ ಸ್ಟೆನೋಗ್ರಾಫರ್ ಶ್ಯಾಮ್ ಲಾಲ್ ಜೈನ್, ನೆಹರು ಡಿಸೆಂಬರ್ 1945 ರಲ್ಲಿ ನಿರ್ದೇಶಿಸಿದ ಅಂತಹ ಪತ್ರವನ್ನು ಅವರು ಟೈಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೇಲ್ ಟುಡೆ ವರದಿಯು ಪ್ರಧಾನ ಮಂತ್ರಿಗಳ ಕಛೇರಿಯಿಂದ “ನೇತಾಜಿ ಸುಭಾಷ್ ಚಂದ್ರ ಬೋಸ್ 915/11/C/6/96-ಪೋಲ್ ಅವರ ಕಣ್ಮರೆ/ಮರಣ” ಎಂಬ ಡಿಕ್ಲಾಸಿಫೈಡ್ ಫೈಲ್‌ನಲ್ಲಿ ಜೈನ್‌ ಅವರ ಉಲ್ಲೇಖವನ್ನು ಕಂಡುಹಿಡಿದಿದೆ. ವಿಮಾನ ಅಪಘಾತದಲ್ಲಿ ನೇತಾಜಿ ಸಾವಿನ ಸಿದ್ಧಾಂತವನ್ನು ಒಪ್ಪುವ ಖೋಸ್ಲಾ ಆಯೋಗವು, ಅವರ ಸಾವಿನ ಕುರಿತಂತೆ ಇನ್ನೂ ತಿಳಿದಿಲ್ಲದ ಕಾರಣಗಳಿಗಾಗಿ ಜೈನ್ ಅವರ ಸಾಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. 

ಎರಡನೇ ಮಹಾಯುದ್ಧದ ಅಂತ್ಯದ ನಂತರ ನೇತಾಜಿ ಹೆಸರನ್ನು ಯುಕೆ ಎಂದಾದರೂ ಯುದ್ಧ ಅಪರಾಧಿ ಎಂದು ಪಟ್ಟಿ ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯುಕೆಯಲ್ಲಿರುವ ಭಾರತೀಯ ಹೈಕಮಿಷನ್, ಅವರ ಹೆಸರು ಎಂದಿಗೂ ಯುದ್ಧ ಅಪರಾಧಿಗಳ ಪಟ್ಟಿಯ ಭಾಗವಾಗಿಲ್ಲ, ಏಕೆಂದರೆ ಈ ಪಟ್ಟಿಯನ್ನು ಜಪಾನ್ ಮತ್ತು ಜರ್ಮನ್ ನಾಗರಿಕರಿಗೆ ಮಾತ್ರ ರಚಿಸಲಾಗಿತ್ತು ಎಂದಿದೆ.

ಇನ್ನೂ, ಎರಡನೆಯ ಮಹಾಯುದ್ಧವು ಸೆಪ್ಟೆಂಬರ್ 1945 ರಲ್ಲಿ ಕೊನೆಗೊಂಡಿತು ಮತ್ತು ಮಿತ್ರರಾಷ್ಟ್ರಗಳು ಯುರೋಪಿನಾದ್ಯಂತ ತಮ್ಮ ಪ್ರದೇಶಗಳನ್ನು ಗುರುತಿಸುವಲ್ಲಿ ನಿರತವಾಗಿದ್ದವು, ಇದು ಯುದ್ಧದ ನಂತರ, ಯಾವುದೇ ಮಿತ್ರರಾಷ್ಟ್ರಗಳು ಅಥವಾ ಆಕ್ಸಿಸ್(ಒಕ್ಕೂಟ) ಶಕ್ತಿಗಳು ಇಲ್ಲ ಎಂದು ಸೂಚಿಸುತ್ತದೆ. ಆದ್ದರಿಂದ, ಬೋಸ್ ರಷ್ಯಾವನ್ನು ಪ್ರವೇಶಿಸಲು ಅಥವಾ ರಷ್ಯನ್ನರು ಅವರಿಗೆ ಆಶ್ರಯ ನೀಡಲು ಯಾವುದೇ ಅವಕಾಶವಿರಲಿಲ್ಲ.

ಪತ್ರವು ಅಧಿಕೃತವಲ್ಲ ಎಂದು ಸೂಚಿಸುವ ಮತ್ತೊಂದು ಅಂಶವೆಂದರೆ, ಅದು ಜವಾಹರಲಾಲ್ ನೆಹರು ಅವರಿಂದ ನಿಜವಾದ ಸಹಿ ಮಾಡಲ್ಪಟ್ಟಿಲ್ಲ, ಮತ್ತು ಇತರ ನೆಹರೂ ಅವರ ಪತ್ರಗಳಂತೆ ಭಾರತದ ರಾಷ್ಟ್ರೀಯ ಪತ್ರಾಗಾರದ ಸ್ಟಾಂಪ್ ಅಥವಾ ವಾಟರ್ ಮಾರ್ಕ್ ಅನ್ನು ಹೊಂದಿಲ್ಲ.

ಆದ್ದರಿಂದ, ಸುಭಾಷ್‌ ಚಂದ್ರ ಭೋಸ್ ಅವರ ಸಾವಿನಂತಹ ಭಾವನಾತ್ಮಕ ವಿಷಯವನ್ನು ಇಟ್ಟುಕೊಂಡು ನೆಹರೂ ಅವರ ಕುರಿತು ದ್ವೇಷ ಹರಡಲು ಈ ಪತ್ರವನ್ನು ಕೆಲವು ಜವಹರಲಾಲ್‌ ನೆಹರು ದ್ವೇಷಿಗಳು ಹರಿಬಿಟ್ಟಿದ್ದಾರೆ.


ಇದನ್ನು ಓದಿ: ಜವಹರಲಾಲ್ ನೆಹರೂರವರ ಕುರಿತ ಸರಣಿ ಸುಳ್ಳುಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *