ನೆಹರೂ

Fact Check: ನೆಹರೂ ಅವರು ಸುಭಾಷ್‌ ಚಂದ್ರ ಬೋಸ್‌ ವಿರುದ್ಧ ಆಟ್ಲೀ ಅವರಿಗೆ ಪತ್ರ ಬರೆದಿದ್ದರು ಎಂಬುದು ಸುಳ್ಳು

ಡಿಸೆಂಬರ್ 1945 ರಲ್ಲಿ, ಪಂಡಿತ್ ಜವಾಹರಲಾಲ್ ನೆಹರು “ಇಂಗ್ಲೆಂಡ್ ಪ್ರಧಾನ ಮಂತ್ರಿ ಕ್ಲೆಮೆಂಟ್ ಅಟ್ಲೀ” ಗೆ ಪತ್ರ ಬರೆದು “ಯುದ್ಧ ಅಪರಾಧಿ” ಸುಭಾಷ್ ಚಂದ್ರ ಬೋಸ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿ, ಅವರ ವಿರುದ್ಧ “ಸರಿಯಾದ” ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿ, ನೆಹರೂ ಅವರು ಆಟ್ಲೀ ಅವರಿಗೆ ಬರೆದಿರುವ ಪತ್ರ ಎನ್ನಲಾದ ಪೋಟೋ ಒಂದನ್ನು ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪತ್ರವು 2016 ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರ್ಗೀಕೃತ…

Read More

Fact Check | ಟರ್ಕಿಯ ಮಹಿಳಾ ಉಗ್ರಗಾಮಿ ಎಂದು ತಪ್ಪಾಗಿ ವಿಡಿಯೋ ಗೇಮ್ ಫೋಟೊ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ “ಬುಧವಾರ ಟರ್ಕಿಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಅಲ್ಲಿ ಭಯೋತ್ಪಾದಕರು ಏರೋ ಸ್ಪೇಸ್ ಮತ್ತು ರಕ್ಷಣಾ ಕಂಪನಿ TUSAS ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಈ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.” ಎಂದು ಉಲ್ಲೇಖಿಸಲಾಗಿದೆ. ಅದರಲ್ಲಿ ಈ ಮಹಿಳೆಯ ಚಿತ್ರವನ್ನು ಹಂಚಿಕೊಂಡು ಈಕೆ ಖುರ್ದಿಷ್ ಮಹಿಳೆ ಮತ್ತು ಮುಸ್ಲಿಂ ಉಗ್ರಗಾಮಿ ಎಂದು ಹಂಚಿಕೊಳ್ಳಲಾಗುತ್ತಿದೆ. Woman terrorist known as Farah Karim Khurd…

Read More

Fact Check | ಪ್ರಸಾದ ವಿತರಿಸುತ್ತಿದ್ದ RSS ಕಾರ್ಯಕರ್ತರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬುದು ಸುಳ್ಳು

ದೇವಸ್ಥಾನದಲ್ಲಿ ಪ್ರಸಾದ ವಿತರಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದವರ(ಆರ್‌ಎಸ್‌ಎಸ್‌) ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಆರ್‌ಎಸ್ಎಸ್ ಕಾರ್ಯಕರ್ತರು ಶರದ್ ಪೂರ್ಣಿಮೆಯ ಆಚರಣೆ ಪ್ರಯುಕ್ತ ಪ್ರಸಾದವಾಗಿ ಖೀರ್ ವಿತರಿಸುತ್ತಿದ್ದಾಗ ನಸೀಬ್ ಎಂಬ ಮುಸ್ಲಿಂ ವ್ಯಕ್ತಿ ದೇವಾಸ್ಥಾನಕ್ಕೆ ತನ್ನ ಸಹಚರನೊಂದಿಗೆ ನುಗ್ಗಿ ದಾಳಿ ನಡೆಸಿದ್ದಾನೆ. ಈ ಘಟನೆ ಅಕ್ಟೋಬರ್ 17ರಂದು ರಾಜಸ್ಥಾನದ ಜೈಪುರದಲ್ಲಿ ನಡೆದಿದೆ” ಎಂದು ಆರೋಪಿಸಿ ಸುದರ್ಶನ್ ನ್ಯೂಸ್‌‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಅನ್ನು ಹಂಚಿಕೊಂಡಿದೆ. ಮುಸ್ಲಿಮರು ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಹಿಂದೂಗಳು…

Read More

Fact Check | ಪ್ರಧಾನಿ ಮೋದಿ ಅವರೊಂದಿಗೆ ಏಂಜೆಲಾ ಮರ್ಕೆಲ್‌, ಕ್ಸಿ ಜಿನ್‌ಪಿಂಗ್‌ ಹಸ್ತಲಾಘವ ಮಾಡಲು ನಿರಾಕರಿಸಿಲ್ಲ

ಸಾಮಾಜಿಕ ಜಾಲತಾಣದಲ್ಲಿ ಜರ್ಮನಿಯ ಮಾಜಿ ಚಾನ್ಸೆಲರ್‌ ಏಜೆಂಲಾ ಮರ್ಕೆಲ್‌ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಹಲವರು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿದೆ ಎಂದು ಬರೆದುಕೊಂಡು ವೈರಲ್‌ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. Nobody wants to shake hands with poor VishGuru…. pic.twitter.com/3EHHS3xlyV — GeetV (@geetv79) October 23, 2024 ವೈರಲ್…

Read More
ಸಾವು

Fact Check: ನಿದ್ರೆಯಿಂದ ಹಠಾತ್ ಎಚ್ಚರಗೊಳ್ಳುವುದರಿಂದ ಸಾವು ಸಂಭವಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ

ರಾತ್ರಿ ಗಾಢ ನಿದ್ರೆಯಿಂದ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವುದರಿಂದ ಸಾವು ಸಂಭವಿಸುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾತ್ರಿಯಲ್ಲಿ ಶೌಚಾಲಯ ಬಳಸಲು ಎಚ್ಚರವಾದ ನಂತರ ಅನೇಕ ಜನರು ಇದ್ದಕ್ಕಿದ್ದಂತೆ ಸಾಯುತ್ತಾರೆ. ಆದ್ದರಿಂದ ಇದನ್ನು ತಪ್ಪಿಸಲು, “ಮೂರೂವರೆ ನಿಮಿಷಗಳ ನಿಯಮ”ವನ್ನು ಅನುಸರಿಸಿ: ಅರ್ಧ ನಿಮಿಷ ಹಾಸಿಗೆಯಲ್ಲಿ ಇರಿ, ಅರ್ಧ ನಿಮಿಷ ಕುಳಿತುಕೊಳ್ಳಿ, ನಂತರ ಎರಡೂವರೆ ನಿಮಿಷಗಳ ಕಾಲ ಕುಳಿತ ನಂತರ ಶೌಚಾಲಯಕ್ಕೆ ಹೋಗಿ” ಎಂದು ಪ್ರತಿಪಾದಿಸುವ ಸುದ್ದಿ ವರದಿಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ರಾತ್ರಿಯಲ್ಲಿ ಇದ್ದಕ್ಕಿದ್ದಂತೆ…

Read More

Fact Check: ವಿಧಾನಸೌಧ ಸ್ವಚ್ಚಗೊಳಿಸುವ ವೇಳೆ ಹೊರಗೆ ಇಟ್ಟಿದ್ದ ಪೋಟೋವನ್ನು ಸಿದ್ದಗಂಗಾ ಶ್ರೀಗಳಿಗೆ ಕಾಂಗ್ರೆಸ್‌ ಅವಮಾನಿಸಿದೆ ಎಂದು ಹಂಚಿಕೆ

ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ, ತಮ್ಮ ಜನಪರ ಕೆಲಸಗಳ ಮೂಲಕ ನಡೆದಾಡುವ ದೇವರೆಂದು ಪ್ರಸಿದ್ಧರಾಗಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅವರ ವಿಧಾನಸೌಧದೊಳಗಿದ್ದ ಫೋಟೋಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಗೆ ಹಾಕಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಶಿವಕುಮಾರ ಸ್ವಾಮೀಜಿಯವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋವನ್ನು ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿತ ರಾಷ್ಟ್ರಧರ್ಮ ಎಂಬ ಪುಟವೊಂದು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದು…

Read More

Fact Check : ಹಿಂದೂ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವುದನ್ನು ಶರೀಯಾ ಕಾನೂನಿನ ಪ್ರಕಾರ ಶಿಕ್ಷೆ ಎಂದು ಹಂಚಿಕೆ

ಇಸ್ಲಾಮಿಕ್ ಶರೀಯಾ ಕಾನೂನುಗಳ ಅಡಿಯಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಶಿಕ್ಷೆ ನೀಡುತ್ತಿರುವ ದೃಶ್ಯಗಳು ಎಂದು ಆರೋಪಿಸಿ ಮಹಿಳೆಯೊಬ್ಬಳನ್ನು ಮರಕ್ಕೆ ಕಟ್ಟಿಹಾಕಿ ಪುರುಷನೊಬ್ಬ ಬರ್ಬರವಾಗಿ ಥಳಿಸುತ್ತಿರುವ ಮತ್ತು ಜನರ ಗುಂಪು ಸುತ್ತಲೂ ನಿಂತು ನೋಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊವನ್ನು ಹಂಚಿಕೊಳ್ಳುವಾಗ X ಬಳಕೆದಾರರು, “ಶರೀಯಾ ಕಾನೂನಿನ ಅಡಿಯಲ್ಲಿ, ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ, ಅದನ್ನು ಮದುವೆಗೆ ಮುಂಚಿತವಾಗಿ ಆಕೆ ನಡೆಸಿದ ಲೈಂಗಿಕ ಅಪರಾಧ ಎಂದು ಪರಿಗಣಿಸಿ ಆಕೆಗೆ ಶಿಕ್ಷೆ ವಿಧಿಸಲಾಗುತ್ತದೆ. ಶರೀಯಾ ಕಾನೂನು ಪಾಲಿಸುವ ಹೆಚ್ಚಿನ…

Read More

Fact Check | ವಕ್ಫ್ ತಿದ್ದುಪಡಿ ಮಸೂದೆ ಮೇಲೆ ಲೋಕಸಭೆಯಲ್ಲಿ ಯಾವುದೇ ಮತದಾನ ನಡೆದಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಟಕೀಯವಾಗಿ ಭಾಷಣವನ್ನು ಮಾಡುತ್ತಿದ್ದು, ತನ್ನ ಭಾಷಣದಲ್ಲಿ “ಕೇವಲ 24 ಮುಸ್ಲಿಂ ಸಂಸದರಿದ್ದರೂ ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ಅನ್ನು ಬೆಂಬಲಿಸಿ 232 ಮತಗಳು ಚಲಾವಣೆಯಾದವು ಮತ್ತು 208 ಹಿಂದೂ ಸಂಸದರು ಅದರ ಪರವಾಗಿ ಮತ ಚಲಾಯಿಸಿದ್ದಾರೆ, ಯಾರು ಈ 208 ಹಿಂದೂ ಸಂಸದರು” ಎಂದು ತನ್ನ ಭಾಷಣದಲ್ಲಿ ಪ್ರಶ್ನಿಸಿದ್ದಾನೆ. ಇದು ಹಲವು ಚರ್ಚೆಗೆ ಕೂಡ ಕಾರಣವಾಗಿದೆ.. 🛑🛑 232 votes in favor of WAQF when…

Read More

Fact Check : ಇತ್ತೀಚೆಗೆ ಚೀನಾ-ತೈವಾನ್‌ ಉದ್ವಿಗ್ನತೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೈವಾನ್‌ನ ಗಡಿಯ ಸಮೀಪ ಸೈನಿಕರನ್ನೆಲ್ಲ ಒಟ್ಟುಗೂಡಲು ಕರೆ ನೀಡಿದ್ದಾರೆ. ಈ ಪ್ರಕಾರ ಸೈನಿಕರೆಲ್ಲ ಒಟ್ಟಾಗಿ ಸೇರಿ ಡ್ರಿಲ್‌ ಮುಗಿಸಿದ ನಂತರ ಕ್ಸಿ ಜಿನ್‌ಪಿಂಗ್‌ರು ಭಾಷಣದಲ್ಲಿ ಯುದ್ಧದ ಸಿದ್ಧತೆಯ ತಯಾರಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಒತ್ತಾಯದ ಮೇರೆಗೆ ಚೀನಾದ ಸೈನಿಕರೆಲ್ಲರೂ ಯುದ್ಧ ಸಿದ್ಧತೆಯ ತಯಾರಿಯನ್ನು ಪ್ರಾರಂಭಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಚೀನಾ ಏಕೆ ಹಿಂದುಳಿದಿದೆ!! ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸೇನೆಗೆ ಯುದ್ಧಕ್ಕೆ…

Read More