Fact Check : ನೆತನ್ಯಾಹು ʼಭಯೋತ್ಪಾದಕʼ ಎಂಬ ಪೋಸ್ಟರ್ ಅನ್ನು ಕಿಂಗ್ ಚಾರ್ಲ್ಸ್ III ಅನಾವರಣಗೊಳಿಸಿಲ್ಲ

“ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹುರವರನ್ನು ಯುರೋಪ್‌ ʼಭಯೋತ್ಪಾದಕʼ ಎಂದು ಘೋಷಿಸಿದೆ” ಎಂಬ ಸುದ್ದಿಯನ್ನು 2024ರ ಅಕ್ಟೋಬರ್‌ 22ರಂದು ಕಿಂಗ್ ಚಾರ್ಲ್ಸ್ III ಅನಾವರಣಗೊಳಿಸಲಾದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ಪೋಸ್ಟರ್‌ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಸತ್ಯಾಂಶವನ್ನು ತಿಳಿಯೋಣ.

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಮೇ 2024ರಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ಲಭಿಸಿದೆ. ಅಸೋಸಿಯೇಟೆಡ್ ಪ್ರೆಸ್, ಇತರ ಹಲವಾರು ಮಾಧ್ಯಮ ಚಾನಲ್‌ಗಳು YouTubeನಲ್ಲಿ ಅದೇ ವಿಡಿಯೋವನ್ನು ಹಂಚಿಕೊಂಡಿವೆ.

ಈ ವಿಡಿಯೋದಲ್ಲಿ ಕಿಂಗ್ ಚಾರ್ಲ್ಸ್ III ತನ್ನ ಪಟ್ಟಾಭಿಷೇಕದ ನಂತರ ತನ್ನ ಮೊದಲ ಅಧಿಕೃತ ಭಾವಚಿತ್ರವನ್ನು ಅನಾವರಣಗೊಳಿಸುವುದನ್ನು ತೋರಿಸಲಾಗಿದೆ. ಈ ವಿಡಿಯೋವನ್ನು 2024ರ ಮೇ 14ರಂದು  ಲಂಡನ್ನಿನ ಬಕಿಂಗ್‌ ಹ್ಯಾಮ್ ಅರಮನೆಯಲ್ಲಿ ಅನಾವರಣಗೊಳಿಸಿದ್ದರು . Instagramನಲ್ಲಿ ರಾಜಮನೆತನದ ಅಧಿಕೃತ ಪುಟದಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು, ಇತರ ಸುದ್ದಿ ವರದಿಗಳು ಕಿಂಗ್ ಚಾರ್ಲ್ಸ್ IIIರ ಭಾವಚಿತ್ರವನ್ನು ಕೆಂಪು ಬಣ್ಣದಲ್ಲಿ ಅನಾವರಣಗೊಳಿಸಲಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.

ಮೂಲ ಫೋಟೊದಲ್ಲಿ ಕಿಂಗ್ ಚಾರ್ಲ್ಸ್ IIIರ ಫೋಟೊ ಅಳಿಸಿ ಆ ಜಾಗದಲ್ಲಿ ಬೆಂಜಮಿನ್ ನೆತನ್ಯಾಹುರನ್ನು ಭಯೋತ್ಪಾದಕ ಎಂಬ ಬರಹವನ್ನು ಮತ್ತು ಫೋಟೊವನ್ನು ಎಡಿಟ್‌ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ಇಷ್ಟೆಲ್ಲಾ ಹುಡುಕಾಟದ ನಂತರ ಯುರೋಪ್ ನೇತನ್ಯಾಹುರನ್ನು ಭಯೋತ್ಪಾದಕ ಎಂದು ಘೋಷಿಸಿದೆಯೇ? ಎಂಬುದನ್ನು ಕುರಿತು ಹುಡುಕಿದಾಗ, ಅಂತಹ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕಿಂಗ್ ಚಾರ್ಲ್ಸ್ IIIರವರ ಅನಾವರಣಗೊಳಿಸಿದ ವಿಡಿಯೋವನ್ನು ಎಡಿಟ್‌ ಮಾಡಿ ಇಸ್ರೇಲ್‌ ಪಿಎಂ ಬೆಂಜಮಿನ್ ನೆತನ್ಯಾಹುರವರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು  ಹಂಚಿಕೊಳ್ಳುವ ಮುನ್ನ ನಿಜವನ್ನು ತಿಳಿದುಕೊಳ್ಳಿ.


ಇದನ್ನು ಓದಿ :

Fact Check : ಬ್ಯಾಂಕಾಕ್ -ಕೋಲ್ಕತ್ತಾ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂವಿಗೆ ಥಳಿಸಿದ್ದಾನೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *