Fact Check : ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಾಯಿ ಪ್ರೇಮಿಯೊಬ್ಬ ಮೃತಪಟ್ಟಿದ್ದಾನೆ ಎಂದು 2020ರ ವಿಡಿಯೋ ಹಂಚಿಕೆ

“ಹಮಾಸ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಸತ್ತು ಬಿದ್ದಿರುವ ವ್ಯಕ್ತಿಯೊಬ್ಬನ ಮೇಲೆ ಹಲವಾರು ನಾಯಿಗಳು ಸುತ್ತುವರೆದಿರುವ ಹೃದಯವಿದ್ರಾವಕ ದೃಶ್ಯವೊಂದನ್ನು” ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

” ಹಮಾಸ್‌ ವಿರುದ್ಧ ಇಸ್ರೇಲ್‌ ದಾಳಿಯಲ್ಲಿ ನಾಯಿ ಪ್ರೇಮಿಯೊಬ್ಬ ಕೊಲ್ಲಲ್ಪಟ್ಟಿದ್ದಾನೆ. ಆ ಪ್ರೇಮಿಗೆ ನಾಯಿಗಳು ವಿದಾಯ ಹೇಳುತ್ತಿವೆ” ಎಂಬ ಶೀರ್ಷಿಕೆಯೊಂದಿಗೆ ದೃಶ್ಯವನ್ನು 2024ರ ಅಕ್ಟೋಬರ್‌ 21 ರಂದು ‘X’ ನಲ್ಲಿ ಹಂಚಿಕೊಳ್ಳಲಾಗಿದೆ.

ಈ ದೃಶ್ಯವನ್ನು ನಿಜವೆಂದು ನಂಬಿರುವ ಕೆಲವು ಫೇಸ್‌ಬುಕ್‌ ಬಳಕೆದಾರರು ವೈರಲ್ ಫೋಟೋದಲ್ಲಿ ಒಡೆದ ಹೃದಯದ ಚಿತ್ರಗಳೊಂದಿಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವೈರಲ್‌ ದೃಶ್ಯದ ಕುರಿತು ಫ್ಯಾಕ್ಟ್‌ ಚೆಕ್‌ನಲ್ಲಿ ಸತ್ಯವನ್ನು ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಜನ ಸಾಮಾನ್ಯರಲ್ಲಿ ವ್ಯಾಪಕವಾಗಿ ಚರ್ಚೆಯನ್ನು ಹುಟ್ಟು ಹಾಕಿರುವ ಹೃದಯವಿದ್ರಾವಕ ವೈರಲ್‌ ಚಿತ್ರವೊಂದರ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡವು ಮುಂದಾಯಿತು. ಈ ವೈರಲ್‌ ಪೋಸ್ಟ್‌ನ ಚಿತ್ರಗಳನ್ನು Google ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಿದಾಗ, 2020ರ ಅಕ್ಟೋಬರ್ 20ರಂದು ಕಟವಾದ ಅಲ್ ಜಜೀರಾದ ಅರೇಬಿಕ್ ವರದಿಯೊಂದು ನಮಗೆ ಲಭಿಸಿದೆ. ಈ ವರದಿಯು ವೈರಲ್ ಚಿತ್ರವನ್ನು ಹೊಂದಿದ್ದು, ಇಸ್ರೇಲ್-ಹಮಾಸ್ ಯುದ್ಧದಿಂದ ನಡೆದ ಘಟನೆಯಲ್ಲ ಎಂದು ಉಲ್ಲೇಖಿಸಿದೆ.

ಫೋಟೋದಲ್ಲಿ ಕಂಡುಬರುವ ವ್ಯಕ್ತಿ 2020ರಲ್ಲಿ ಇಬ್ಬ್ ಗವರ್ನರೇಟ್‌ನ ಬೀದಿಯಲ್ಲಿ ಸಾವನ್ನಪ್ಪಿದ್ದ ಯೆಮೆನ್ ಪ್ರಜೆ ಇಸ್ಮಾಯಿಲ್ ಹಾದೀ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾದೀಯವರು ಬೀದಿ ನಾಯಿಗಳನ್ನು ಅವರು ತುಂಬಾ ಪ್ರೀತಿಸುತ್ತಿದ್ದು, ಉದಾರತೆಗೆ ಹೆಸರುವಾಸಿಯಾಗಿದ್ದರು, ಏಕೆಂದರೆ ಅವರು ನಾಯಿಗಳಿಗೆ ಆಹಾರವನ್ನು ನೀಡಿ ನಾಯಿಗಳಿಗೆ ಪ್ರೀತಿಪಾತ್ರರಾಗಿದ್ದರು.

ಹಾದೀಯವರು ಅಕ್ಟೋಬರ್ 2020ರಲ್ಲಿ ಆಕಸ್ಮಿಕವಾಗಿ ಬೀದಿಯಲ್ಲಿಯೇ ಹೃದಯಘಾತದಿಂದ ಮರಣ ಹೊಂದಿದ್ದಾರೆ. ಸತ್ತು ಬಿದ್ದಿರುವ ಮಾಲಕನನ್ನು ನೋಡಿದ ಬೀದಿ ನಾಯಿಗಳು ಅವರ ಸುತ್ತಲೂ ಭಾವುಕವಾಗಿ ಒಟ್ಟುಗೂಡಿ ಕಣ್ಣಿರಿನ ವಿದಾಯ ಹೇಳುತ್ತಿರುವ ಈ ಹೃದಯವಿದ್ರಾವಕ ಘಟನೆಯನ್ನು ಸೆರೆಹಿಡಿಯಲಾಗಿದೆ” ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ವೆಬ್ ಪೋರ್ಟಲ್ ‘ಅಲ್ವತನ್ ವಾಯ್ಸ್’ ವರದಿಯ ಪ್ರಕಾರ, ವ್ಯಕ್ತಿಯು ಬೀದಿಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇವನು ಪ್ರತಿನಿತ್ಯವೂ ರೆಸ್ಟೋರೆಂಟ್‌ಗಳಿಂದ ಉಳಿದ ಆಹಾರವನ್ನು ಸಂಗ್ರಹಿಸಿ  ಬೀದಿನಾಯಿಗಳಿಗೆ ತಿನ್ನಿಸುತ್ತಿದ್ದರು ಎಂದು ಉಲ್ಲೇಖವಾಗಿದೆ.

ಅನೇಕ ಯೆಮೆನ್ ಪತ್ರಕರ್ತರು ಮತ್ತು ಕಾರ್ಯಕರ್ತರು  ಸಾಮಾಜಿಕ ಮಾಧ್ಯಮಗಳಲ್ಲಿ ಈ ದೃಶ್ಯವನ್ನು ಹಂಚಿಕೊಂಡು, ನಾಯಿ-ಪ್ರೇಮಿ  ಇಸ್ಮಾಯಿಲ್‌ ಹಾದೀಯವರ ಸಾವಿಗೆ ಸಂತಾಪವನ್ನು ಸೂಚಿಸಿದ್ದರು. ಕೆಲವರು ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ  ಈ ದೃಶ್ಯವು 2020ರ ಅಕ್ಟೋಬರ್‌ 20ರಂದು ಯೆಮೆನ್‌ನಲ್ಲಿ ಹೃದಯಾಘಾತದಿಂದ ಸತ್ತ  ಯೆಮೆನ್ ಪ್ರಜೆ ಇಸ್ಮಾಯಿಲ್ ಹಾದೀ ಅವರದ್ದಾಗಿದೆಯೇ ಹೊರತು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿಲ್ಲ.


ಇದನ್ನು ಓದಿ:

Fact Check : 2024ರ ಯುಎಸ್‌ ಚುನಾವಣೆಗೂ ಮುಂಚೆ ಸ್ನೂಪ್ ಡಾಗ್ ಟ್ರಂಪ್‌ರನ್ನು ಟೀಕಿಸಿದ್ದಾರೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *