Fact Check : ಚೀನಾದ ರೈಲ್ವೆ ಮಾರ್ಗದ ವಿಡಿಯೋವನ್ನು, ದೇವಪ್ರಯಾಗ ಮತ್ತು ಶ್ರೀನಗರದ ರೈಲು ಮಾರ್ಗ ಎಂದು ತಪ್ಪಾಗಿ ಹಂಚಿಕೆ

ಉತ್ತರಾಖಂಡದ ದೇವಪ್ರಯಾಗ ಮತ್ತು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಡುವೆ ನದಿಯೊಂದರ ಪಕ್ಕದಲ್ಲಿ ಪರ್ವತವಿದೆ. ಆ ಪ್ರದೇಶದ ರೈಲು ಮಾರ್ಗದ ಮೂಲಕ ರೈಲೊಂದು ವೇಗವಾಗಿ ಚಲಿಸುತ್ತಿದೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋದ ಕೆಲವು ದೃಶ್ಯಗಳನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡು ರಿವರ್ಸ್ ಇಮೇಜ್  ಬಳಸಿ ಹುಡುಕಿದಾಗ, ಇದು ಚೀನಾದ ಟಿಕ್‌ಟಾಕ್‌ ವಿಡಿಯೋ ಎಂದು ತಿಳಿದುಬಂದಿದೆ. ಡೌಯಿನ್‌ನಲ್ಲಿ ಒಂದೇ ರೀತಿಯ ವಿಡಿಯೋವನ್ನು ಅನೇಕ ಬಾರಿ ಹಂಚಿಕೊಳ್ಳಲಾಗಿದೆ.

“ಚೀನಾದ ಹುನಾನ್ ಪ್ರಾಂತ್ಯದ ಯಾನ್ಬೋಡು ಟೌನ್, ಸಿಲಿಯಲ್ಲಿರುವ ಕಡಿದಾದ ಬೆಟ್ಟಗಳ ಮೂಲಕ ರೈಲು ಹಾದುಹೋಗುತ್ತದೆ” ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅದೇ ವಿಡಿಯೋವನ್ನು  ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

 

ಚೀನಾದ ಹುನಾನ್ ಪ್ರಾಂತ್ಯದ ಪರ್ವತ ಪ್ರದೇಶದ ವೈರಲ್ ವಿಡಿಯೋ ಮತ್ತು ಗೂಗಲ್ ಅರ್ಥ್ ಚಿತ್ರಣದ ನಡುವಿನ ಹೋಲಿಕೆಗಳು ಒಂದನ್ನೊಂದು ಹೋಲುತ್ತವೆ.  ಆದ್ದರಿಂದ ಹುನಾನ್ ಪ್ರಾಂತ್ಯದ ಸಿಲಿಯಿಂದ ಈ ವೈರಲ್‌ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ. 

ಭಾರತದ ರೈಲ್ವೇಗಳ ಮಾಹಿತಿಯನ್ನು ಹುಡುಕಿದಾಗ, ಉತ್ತರಾಖಂಡದಲ್ಲಿ ಋಷಿಕೇಶ-ಕರ್ಣಪ್ರಯಾಗ ರೈಲ್ವೆ ಲೈನ್ ಯೋಜನೆಯು ನಿರ್ಮಾಣ ಹಂತದಲ್ಲಿದ್ದು, 12 ನಿಲ್ದಾಣಗಳೊಂದಿಗೆ 125.20 ಕಿಲೋಮೀಟರ್‌ಗಳನ್ನು ವ್ಯಾಪಿಸಿದೆ. ಆದರೆ ಟ್ರ್ಯಾಕ್ ಇನ್ನೂ ಪೂರ್ಣಗೊಂಡಿಲ್ಲ, ಡಿಸೆಂಬರ್ 2025ಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದ ರೈಲ್ವೆ ಮಾರ್ಗದ ವಿಡಿಯೋವನ್ನು, ದೇವಪ್ರಯಾಗ ಮತ್ತು ಶ್ರೀನಗರ ನಡುವಿನ ರೈಲು ಮಾರ್ಗ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ :

Fact Check : ಗಂಗಾಸ್ನಾನ ಮಾಡುವಾಗ ದಲಿತ ಯುವಕರ ಮೇಲೆ ಹಲ್ಲೆ ಎಂದು ತಪ್ಪಾಗಿ ಮಧ್ಯಪ್ರದೇಶದ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *