Fact Check : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೆಎಲ್ ರಾಹುಲ್‌ನನ್ನು ಹೆಗಲ ಮೇಲೆ ಎತ್ತಿಕೊಂಡಿರುವ ದೃಶ್ಯ ಎಡಿಟೆಡ್‌ ಆಗಿದೆ

ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್‌ಗಳಿಂದ ಸೋತ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರವರು ಕೆಎಲ್ ರಾಹುಲ್‌ನನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋದ ಕೆಲವು ಚಿತ್ರಗಳನ್ನು ಸ್ಕ್ರೀನ್‌ಶಾಟ್‌ ತೆಗೆದು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2013ರ ನವೆಂಬರ್ 16ರಂದು ಪ್ರಕಟವಾದ NDTV ಯ ವರದಿಯು ಮೂಲ ಚಿತ್ರವನ್ನು ಹಂಚಿಕೊಂಡಿದೆ. ಕ್ರಿಕೆಟಿನ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದಾಗ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಎತ್ತಿಕೊಂಡು ಹೋಗುತ್ತಿರುವ ಚಿತ್ರವನ್ನು ತೋರಿಸುತ್ತದೆ.

ಫೋಟೋ ಎಡಿಟಿಂಗ್ ಸಾಫ್ಟ್‌ವೇರನ್ನು ಬಳಸಿಕೊಂಡು ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಜಯ್ ಶಾ ಅವರ ಮುಖಗಳನ್ನು ಮೂಲ ಚಿತ್ರದ ಮೇಲೆ ಅಂಟಿಸಲಾಗಿದೆ ಎಂದು ಸ್ಪಷ್ಟವಾಗಿ ಗುರುತಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ,  ಎಂ.ಎಸ್‌.ಧೋನಿ ಮತ್ತು ವಿರಾಟ್‌ ಕೊಹ್ಲಿ ಸಚಿನ್ ತೆಂಡೂಲ್ಕರ್‌ರವರನ್ನು ಎತ್ತಿಕೊಂಡಿರುವ ದೃಶ್ಯವನ್ನು, KL ರಾಹುಲ್‌ರನ್ನು ಕೊಹ್ಲಿ ಮತ್ತು ಶರ್ಮಾ ಎತ್ತಿಕೊಂಡಿದ್ದಾರೆ ಎಂದು ತಪ್ಪಾಗಿ  ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ :

Fact Check : ಚೀನಾದ ರೈಲ್ವೆ ಮಾರ್ಗದ ವಿಡಿಯೋವನ್ನು, ದೇವಪ್ರಯಾಗ ಮತ್ತು ಶ್ರೀನಗರದ ರೈಲು ಮಾರ್ಗ ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *