Fact Check: ತಾಯಿಯೇ ಮಗನನ್ನು ಮದುವೆಯಾಗಿದ್ದಾರೆ ಎಂದು ನಕಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಮದುವೆ

ಇತ್ತೀಚೆಗೆ ತಾಯಿಯೇ ತನ್ನ ಮಗನನ್ನು ಮದುವೆ ಆಗಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಂಡು ಹಿಂದೂ ಸಮಾಜ ಎತ್ತ  ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಅನೇಕರು “ಇದನ್ನು ಸುಸಂಸ್ಕೃತ ಮತ್ತು ಸನಾತನಿಗಳು ತಮ್ಮ ಸ್ವಂತ ಮಗನನ್ನು ಮದುವೆಯಾದರು ಎಂದು ಕರೆಯುತ್ತಾರೆ, ಏಕೆಂದರೆ ತಂದೆ ಇಲ್ಲ. ಅಲ್ಲದೇ ಯಾವ ವಯಸ್ಸಿನಲ್ಲಿ ಮದುವೆ ಆಗಬಹುದು ಎಂಬುದನ್ನು ಜಗತ್ತಿಗೆ ತಿಳಿಯುವಂತೆ ವಿಡಿಯೋ ಕೂಡ ಮಾಡಿ ತೋರಿಸಿದ್ದಾರೆ. ಇದು ಸ್ಕ್ರಿಪ್ಟ್ ಆಗಿದೆಯೋ ಅಥವಾ ನಿಜವೋ ಗೊತ್ತಿಲ್ಲ ಆದರೆ ಇಬ್ಬರೂ ಸನಾತನಿಗಳು, ಅಲ್ಲವೇ ಭಕ್ತರೇ?” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್:

ವೈರಲ್ ವಿಡಿಯೋ ಪೂರ್ವನಿಯೋಜಿತ (ಸ್ಕ್ರಿಪ್ಟೆಡ್‌) ಆಗಿದ್ದು, ನಿಜವಾಗಿ ನಡೆದ ಘಟನೆಯಲ್ಲ ಎಂದು ತಿಳಿದು ಬಂದಿದೆ.

ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಾವು ಅಂತರ್ಜಾಲದಲ್ಲಿ ಕೀವರ್ಡ್‌ ಹುಡುಕಾಟವನ್ನು ನಡೆಸಿದಾಗ, ಇತ್ತೀಚೆಗೆ ಈ ರೀತಿಯ ಯಾವುದೇ ಘಟನೆ ನಡೆದಿರುವ ಕುರಿತು ಯಾವ ಸುದ್ದಿ ಮಾಧ್ಯಮಗಳಿಂದ ವರದಿಯಾಗಿಲ್ಲ.

ನಂತರ ನಮ್ಮ ತಂಡ ವೈರಲ್ ವಿಡಿಯೋದ ಕೆಲವು ಕೀಫ್ರೆಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅಕ್ಟೋಬರ್ 10 ರಂದು ಪ್ರಕಾಶ್‌ ಎಂಟರ್ಟೈನ್ಮೆಂಟ್‌ (Prakash Entertainment) ಎಂಬ ಖಾತೆಯಿಂದ ಮೊದಲು ಹಂಚಿಕೊಳ್ಳಲಾಗಿರುವುದು ಕಂಡು ಬಂದಿದೆ. ಈ ಖಾತೆಯೂ ಇದೇ ರೀತಿಯ ಅನೇಕ ಸ್ಕ್ರಿಪ್ಟೆಡ್‌ ವಿಡಿಯೋಗಳನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.

ಈ ವೈರಲ್ ವಿಡಿಯೋವನ್ನು 24 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 25 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವಿಗೆ ಪ್ರತಿಕ್ರಯಿಸಿದ್ದಾರೆ ಮತ್ತು 37 ಸಾವಿರಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದಾರೆ. ಅನೇಕರು ಈ ವಿಡಿಯೋ ನಕಲಿ, ಇಂತಹ ವಿಡಿಯೋವನ್ನು ಹಂಚಿಕೊಂಡು ಸಮಾಜದ ಸ್ವಸ್ತ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಖಾತೆಯಲ್ಲಿ ತಂದೆಯೇ ಮಗಳನ್ನು ಮದುವೆಯಾಗಿರುವಂತಹ ನಕಲಿ ವಿಡಿಯೋಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಬಿಹಾರ ಮೂಲದ ಪ್ರಕಾಶ್‌ ಎಂಬುವವರು ಈ ಖಾತೆಯನ್ನು ನಡೆಸುತ್ತಿದ್ದು ಇನ್ಸ್ಟಾಗ್ರಾಮ್‌ನಲ್ಲಿ ಸಹ @prakash_badal9 ಎಂಬ ಹೆಸರಿನಲ್ಲಿ ಖಾತೆಯನ್ನು ಹೊಂದಿದ್ದಾರೆ. ಮತ್ತು ಅಲ್ಲಿಯೂ ಸಹ ಇಂತಹ ನಕಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಆದ್ದರಿಂದ ತಾಯಿಯೇ ಮಗನನ್ನು ಮದುವೆಯಾಗಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ನಕಲಿಯಾಗಿದ್ದು, ಮನರಂಜನೆಗೋಸ್ಕರ ಇಂತಹ ಸ್ಕ್ರಿಪ್ಟೆಡ್‌ ವಿಡಿಯೋವನ್ನು ಹರಿಬಿಡಲಾಗಿದೆ.


ಇದನ್ನು ಓದಿ: ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ವಿಚ್ಛೇದನ ನೀಡಿ ನಿಮ್ರತ್ ಕೌರ್ ಅವರನ್ನು ಮದುವೆ ಆಗಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *