Fact Check: ಉದ್ಧವ್ ಠಾಕ್ರೆ ಅವರು ಉರ್ದು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಉರ್ದುವಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದರು ಎಂಬ ಪೋಸ್ಟ್‌ರ್‌ ಒಂದು ವೈರಲ್ ಆಗುತ್ತಿದೆ.

ಅಕ್ಟೋಬರ್ 3, 2024 ರಂದು, ಕೇಂದ್ರ ಸಚಿವ ಸಂಪುಟವು ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಸೇರಿದಂತೆ ಒಟ್ಟು ಐದು ಹೊಸ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಅಂಗೀಕರಿಸಿದೆ. ಆದರೆ ಉರ್ದು ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ನೀಡಿಲ್ಲ.

ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಅವರು ಅಕ್ಟೋಬರ್ 4 ರಂದು ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದರು ಮತ್ತು ಇದು ಅನೇಕರ ಪರಿಶ್ರಮದ ಫಲ ಎಂದು ಹೇಳಿದ್ದಾರೆ.

ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವ ಬೇಡಿಕೆಯು ದೀರ್ಘಕಾಲದಿಂದ ಬಾಕಿ ಉಳಿದಿತ್ತು ಮತ್ತು ಮಹಾರಾಷ್ಟ್ರದ ಮುಂಬರುವ ಚುನಾವಣೆಗೆ ಮುಂಚಿತವಾಗಿ ಮರಾಠಿಯನ್ನು ಶ್ರಾಸ್ತ್ರೀಯ ಭಾಷೆಯಾಗಿ ಅಂಗೀಕರಿಸಿದ್ದು, ಚುನಾವಣಾ ರಾಜಕಾರಣದ ಭಾಗವಾಗಿದೆ.

ಪಸ್ತುತ, ಮರಾಠಿ ಚಾನೆಲ್ ಎಬಿಪಿ ಮಾಜಾದ ಸಾಮಾಜಿಕ ಮಾಧ್ಯಮ ಪೋಸ್ಟ್‌ ರೀತಿ ಕಾಣುವಂತೆ ವಿನ್ಯಾಸಗೊಳಿಸಲಾದ ಪೋಸ್ಟರ್‌ ಒಂದರಲ್ಲಿ ಉದ್ಧವ್‌ ಠಾಕ್ರೆ ಅವರ ಫೋಟೋವನ್ನು ಮರಾಠಿಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. “ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಂತೆ ಉರ್ದು ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ~ ಉದ್ಧವ್ ಠಾಕ್ರೆ”.

ವೈರಲ್ ಪೋಸ್ಟ್‌ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ, ಮತ್ತು ಆರ್ಕೈವ್ ಗಾಗಿ ಇಲ್ಲಿ.

ಫ್ಯಾಕ್ಟ್ ಚೆಕ್:

ವೈರಲ್ ಪೋಟೋ ನಕಲಿಯಾಗಿದ್ದು, ಶಿವಸೇನೆ (ಯುಬಿಟಿ) ಮುಖ್ಯಸ್ಥರಾಗಿರುವ ಉದ್ಧವ್ ಠಾಕ್ರೆ ಅವರು ಉರ್ದು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟಿರುವ ಕುರಿತು ಎಲ್ಲಿಯೂ ವರದಿಯಾಗಿಲ್ಲ. ಮತ್ತು ಎಬಿಪಿ ಮಜಾ ನ್ಯೂಸ್‌ ಸಹ ಅಂತಹ ಪೋಸ್ಟ್ ಮಾಡಿಲ್ಲ.

ವೈರಲ್ ಪೋಸ್ಟ್‌ಗಳಿಗಾಗಿ ನಾವು ಮೊದಲು ಎಬಿಪಿ ಮಜಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹುಡುಕಾಟ ನಡೆಸಿದಾಗ, ವೈರಲ್‌ ಪೋಟೋವಿಗೆ ಹೊಂದಿಕೆಯಾಗುವ ಯಾವ ಪೋಸ್ಟ್‌ ಸಹ ದೊರಕಿಲಿಲ್ಲ.

ಹೆಚ್ಚಿನ ಹುಡುಕಾಟದಿಂದ ವೈರಲ್ ಪೋಟೋವನ್ನೇ ಹೊಲುವ ಅದೇ ಸ್ವರೂಪ, ಬಣ್ಣಗಳನ್ನು ಒಳಗೊಂಡ ಮೇ 2024 ರಲ್ಲಿ ಎಬಿಪಿ ಮಜಾ ಪೋಸ್ಟ್ ಮಾಡಿದ ಉದ್ಧವ್ ಠಾಕ್ರೆ ಅವರ ಫೋಟೋ ನಮಗೆ ಲಭ್ಯವಾಯಿತು.

ಈ ಪೋಟೋದಲ್ಲಿ ವೈರಲ್ ಹೇಳಿಕೆಗಿಂತ ವಿಭಿನ್ನ ಶೀರ್ಷಿಕೆಯನ್ನು ಹೊಂದಿತ್ತು. ಎಬಿಪಿ ಮಜಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸ್ವರೂಪವನ್ನು ಬಳಸಿಕೊಂಡು ವೈರಲ್ ಪೋಟೋವನ್ನು ಅನ್ನು ಎಡಿಟ್‌ ಮಾಡಲಾಗಿದೆ ಎಂದು ಇದು ತೋರಿಸುತ್ತದೆ.

ಮೇ 18, 2024 ರಲ್ಲಿ ಬೇರೊಂದು ಹೇಳಿಕೆಯೊಂದಿಗೆ ಮೂಲ ಪೋಟೋವನ್ನು ಕೆಳಗಿನ ಟ್ವೀಟ್‌ನಿಂದ ತೆಗೆದುಕೊಳ್ಳಲಾಗಿದೆ.

ಆದ್ದರಿಂದ ಉರ್ದುವಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವಂತೆ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ ಎನ್ನಲು ಅವರ ಯಾವ ರ್ಯಾಲಿ, ಭಾಷಣ, ಹೇಳಿಕೆಗಳಲ್ಲಿಯೂ ಇಂತಹ ಮಾತು ಆಡಿರುವುದು ವರದಿಯಾಗಿಲ್ಲ.


ಇದನ್ನು ಓದಿ: ರಾಜಸ್ತಾನದಲ್ಲಿ RSS ಕಾರ್ಯಕರ್ತನ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *