Fact Check: ಹಮಾಸ್‌ ಮುಖ್ಯಸ್ಥನ ಸಾವಿನ ಗಾಜಾ ಜನರ ಪ್ರತಿಕ್ರಿಯೆ ಎಂದು ಸಹೋದರರನ್ನು ಕಳೆದುಕೊಂಡು ವ್ಯಕ್ತಿಯೊಬ್ಬ ಅಳುತ್ತಿರುವ ವಿಡಿಯೋ ವೈರಲ್

ಹಮಾಸ್‌

ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ತೀವ್ರ ಕಾರ್ಯಾಚರಣೆಯ ನಂತರ, ಇಸ್ರೇಲಿ ಪಡೆಗಳು ಅಕ್ಟೋಬರ್ 17 ರಂದು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಅವರನ್ನು ಕೊಂದು ಹಾಕಿವೆ. ತೀವ್ರವಾಗಿ ಗಾಯಗೊಂಡ ಸಿನ್ವರ್ ಮಿನಿ ಡ್ರೋನ್ ಮೇಲೆ ಕೋಲು ಎಸೆಯಲು ಪ್ರಯತ್ನಿಸುತ್ತಿರುವ ತುಣುಕನ್ನು ಇದು ಅವರ ಕೊನೆಯ ಕ್ಷಣಗಳು ಎಂದು ಇಸ್ರೇಲ್ ಮಿಲಿಟರಿ ಬಿಡುಗಡೆ ಮಾಡಿತ್ತು.

ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್‌ ಮುಖ್ಯಸ್ಥ ಸಿನ್ವರ್‌ಗೆ ಸಂಬಂಧಿಸಿದಂತೆ ವಿಡಿಯೋ ಒಂದು ಹರಿದಾಡುತ್ತಿದ್ದು. ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಸಿನ್ವರ್ ಅವರ ಸಾವಿನಿಂದಾಗಿ ವ್ಯಕ್ತಿಯೊಬ್ಬರು ಆಘಾತದಿಂದ ಕಿರುಚುತ್ತಿರುವುದನ್ನು ಮತ್ತು ಅಳುತ್ತಿರುವುದನ್ನು ತೋರಿಸುತ್ತದೆ. “ಈ ವ್ಯಕ್ತಿ ಅಕ್ಟೋಬರ್ 7 ರಂದು ಗಾಜಾದ ಬೀದಿಗಳಲ್ಲಿ ನಗುತ್ತಿದ್ದರು ಮತ್ತು ನೃತ್ಯ ಮಾಡುತ್ತಿದ್ದರು ಮತ್ತು ಇಂದು ಯಾಹ್ಯಾ ಸಿನ್ವರ್ ಅವರನ್ನು ಕೊಂದುಹಾಕಿದ ನಂತರ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

 

“ಯಾಹ್ಯಾ ಸಿನ್ವರ್ ಅವರ ನಿರ್ಮೂಲನೆಯು ಅನೇಕ ಗಾಜಾ ನಿವಾಸಿಗಳ ಮೇಲೆ ಗಮನಾರ್ಹ ಮಾನಸಿಕ ಆಘಾತಕ್ಕೆ ಕಾರಣವಾಗಿದೆ” ಎಂಬ ಶೀರ್ಷಿಕೆಗಳೊಂದಿಗೆ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಯಾಹ್ಯಾ ಸಿನ್ವರ್ ಸಾವಿನ ಫ್ಯಾಕ್ಟ್ ಚೆಕ್

ಫ್ಯಾಕ್ಟ್‌ ಚೆಕ್:

ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ವಾಸ್ತವವಾಗಿ “ದುಡಿ ಡೊಲೆವ್” ಎಂಬ ಖಾತೆಯಿಂದ ಮತ್ತೊಂದು ಪೋಸ್ಟ್ ನಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಗಮನಿಸಿದ್ದೇವೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಅದೇ ಖಾತೆಯ ವಾಟರ್ ಮಾರ್ಕ್ ಕೂಡ ಇದೆ. ಈ ಖಾತೆಯು ಅಕ್ಟೋಬರ್ 7 ರಂದು ವೀಡಿಯೊವನ್ನು ಹಂಚಿಕೊಂಡಿತ್ತು, ಆದರೆ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಜನರ ಬಗ್ಗೆ ಯಾವುದೇ ವಿವರಗಳಿಲ್ಲ.

ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್‌ ಸರ್ಚ್‌ನಲ್ಲಿ  ಹುಡುಕಿದಾಗ, ಅಕ್ಟೋಬರ್ 7 ರಂದು ಹಂಚಿಕೊಂಡ ಅದೇ ವಿಡಿಯೋವನ್ನು ಒಳಗೊಂಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ನಾವು ನೋಡಿದ್ದೇವೆ. ವೈರಲ್ ವಿಡಿಯೋ ಸಿನ್ವರ್ ಅವರ ಸಾವಿಗೆ ಮುಂಚಿತವಾಗಿದೆ ಎಂದು ಎರಡೂ ಪೋಸ್ಟ್‌ಗಳಿಂದ ಸ್ಪಷ್ಟವಾಗಿದೆ.

ಅರೇಬಿಕ್ ಕೀವರ್ಡ್‌ಗಳೊಂದಿಗೆ ನಂತರದ ಹುಡುಕಾಟಗಳು ಜೋರ್ಡಾನ್ ಸುದ್ದಿ ಚಾನೆಲ್ ರೋಯಾ ನ್ಯೂಸ್‌ನ ಪರಿಶೀಲಿಸಿದ ಇನ್ಸ್ಟಾಗ್ರಾಮ್ ಖಾತೆಗೆ ನಮ್ಮನ್ನು ಕರೆದೊಯ್ದವು. ಇದು ಅಕ್ಟೋಬರ್ 7 ರಂದು ವೀಡಿಯೊವನ್ನು ಹಂಚಿಕೊಂಡಿದೆ. “ಈ ಯುವಕ ತನ್ನ 11 ಸಹೋದರರನ್ನು ಹುತಾತ್ಮನಾಗಿ ಕಳೆದುಕೊಂಡಿದ್ದಾನೆ ಮತ್ತು ಇಂದು ಅವನು ಇನ್ನೊಬ್ಬನನ್ನು ಸಮಾಧಿ ಮಾಡುತ್ತಿದ್ದಾನೆ” ಎಂದು ಅರೇಬಿಕ್ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿದೆ.

ಯಾಹ್ಯಾ ಸಿನ್ವರ್ ಸಾವಿನ ಫ್ಯಾಕ್ಟ್ ಚೆಕ್

ಈ ಪೋಸ್ಟ್ ಈ ವೀಡಿಯೊವನ್ನು ಹೊಸ್ಸಾಮ್ ಶಬ್ಬತ್ ಗೆ ಕ್ರೆಡಿಟ್ ಮಾಡಿದೆ. ಶಬ್ಬತ್ ಉತ್ತರ ಗಾಝಾದಿಂದ ವರದಿ ಮಾಡುವ ಅಲ್ ಜಜೀರಾ ಪತ್ರಕರ್ತ ಎಂದು ಹುಡುಕಾಟದಿಂದ ತಿಳಿದುಬಂದಿದೆ. ಶಬ್ಬತ್ ಅಕ್ಟೋಬರ್ 7 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಈ ಯುವಕ ತನ್ನ ಸಹೋದರರಿಂದ 11 ಹುತಾತ್ಮರನ್ನು ಕಳೆದುಕೊಂಡಿದ್ದಾನೆ, ಮತ್ತು ಇಂದು ಅವನು ಇನ್ನೊಬ್ಬ ಸಹೋದರನಿಗೆ ವಿದಾಯ ಹೇಳುತ್ತಾನೆ” ಎಂದು ಬರೆದಿದ್ದಾರೆ.

ಈ ವರ್ಷದ ಅಕ್ಟೋಬರ್ 7 ರಂದು ಇಸ್ರೇಲ್ ಗಾಜಾ ಮತ್ತು ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿತು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಇಸ್ರೇಲ್ ಸೇನೆಯು ಮಧ್ಯ ಗಾಝಾನ್ ನಗರ ದೇರ್ ಅಲ್ ಬಾಲಾಹ್‌ನಲ್ಲಿನ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 26 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ.

ಹೀಗಾಗಿ, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಅವರ ಸಾವಿಗೆ ಗಾಝಾನ್ನರ ಪ್ರತಿಕ್ರಿಯೆಯನ್ನು ಈ ವೀಡಿಯೊ ತೋರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.



ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *