Fact Check | ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ವ್ಯಕ್ತಿಗಳ ಈ ಚಿತ್ರಗಳು ನಿಜವಲ್ಲ

” ಉದ್ದನೆಯ ಕುತ್ತಿಗೆಯ ಕೆಲವು ಜನರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ, ಇದು 1860 ರಲ್ಲಿ ತೆಗೆದ ಕೆಲವು ಕುಟುಂಬಗಳ ಚಿತ್ರ ಎಂದು ಹೇಳಲಾಗುತ್ತಿದೆ, ಈ ಚಿತ್ರದಲ್ಲಿರುವ ಮನುಷ್ಯರ ಕುತ್ತಿಗೆ 4 ರಿಂದ 5 ಅಡಿಗಳಷ್ಟು ಎತ್ತರವಿತ್ತು ಎಂದು ಹಂಚಿಕೊಳ್ಳಲಾಗುತ್ತಿದೆ. ಕೆಲ ಬಳಕೆದಾರರು “ಇದು ಆಫ್ರಿಕಾ ಸೇರಿದಂತೆ ಇನ್ನೀತರೆ ವಿವಿಧ ರಾಷ್ಟ್ರಗಳಲ್ಲಿದ್ದ  ಬುಡಕಟ್ಟು ಸಮುದಾಯದ ಜನರ ಚಿತ್ರವಾಗಿದೆ. ಈ ಹಿಂದೆ ದೈತ್ಯ ಮನುಷ್ಯರು ಇದ್ದರು, ಎಂಬುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ ಎಂದು ಫೋಟೋವನ್ನು ಶೇರ್‌ ಮಾಡುತ್ತಿದ್ದಾರೆ.

ಇನ್ನೂ ಹಲವು ಮಂದಿ ಈ ಮನುಷ್ಯರ ಈ ಗ್ರಹದವರಲ್ಲ, ಇವರು ಏಲಿಯನ್‌ಗಳು, ಈ ಹಿಂದೆ ಈ ಏಲಿಯನ್ಸ್‌ಗಳಿಗೂ ಮನುಷ್ಯರಿಗೂ ಸಂಪರ್ಕ ಇತ್ತು ಎಂದು ಬರೆದುಕೊಂಡು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಇಲ್ಲ ಇದು ಸುಳ್ಳು ಫೋಟೋ ಎಡಿಟೆಡ್‌ ಆಗಿದೆ ಎಂದು ಹಲವರು ಪ್ರತಿಪಾದಿಸಿದ್ದಾರೆ. ಹೀಗೆ ಈ ಫೋಟೋ ಕುರಿತು ವಿವಿಧ ರೀತಿಯ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿದೆ. ಹೀಗಾಗಿ ಈ ವೈರಲ್‌ ಫೋಟೋ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದೆವು, ಇದರಲ್ಲಿ ಮಾನವ ದೇಹದ ಕೆಲವು ಭಾಗಗಳು ಅಪೂರ್ಣ ಮತ್ತು ವಿಚಿತ್ರವಾಗಿವೆ ಎಂದು ನಾವು ಕಂಡುಕೊಂಡಿದ್ದೇವೆ. ಮೊದಲ ಚಿತ್ರದಲ್ಲಿ, ಮಹಿಳೆಯ ಮುಖವು ವಕ್ರವಾಗಿದೆ ಮತ್ತು ಕುತ್ತಿಗೆ ತುಂಬಾ ಉದ್ದನೆಯವಾಗಿ ವಿಚಿತ್ರವಾಗಿ ಕಾಣುತ್ತದೆ, ಆದರೆ ಮಧ್ಯದಲ್ಲಿರುವ ವ್ಯಕ್ತಿಯ ಕೈಗಳ ಬೆರಳುಗಳು ಚಿಕ್ಕದಾಗಿರುತ್ತವೆ. ಅಷ್ಟೇ ಅಲ್ಲ ಪಕ್ಕದಲ್ಲಿ ನಿಂತಿರುವ ಮಗುವಿನ ಕಣ್ಣುಗಳು ವಿಚಿತ್ರವಾಗಿರುವಂತೆ ಭಾಸವಾಗುತ್ತವೆ. ಹೀಗಾಗಿ ನಾವು ಫೋಟೋವನ್ನು AI ಯಿಂದ ನಿರ್ಮಿಸಿರಬಹುದು ಎಂದು ಶಂಕಿಸಿದೆವು. ನಾವು ಹೈವ್ ಮಾಡರೇಶನ್ ಸಹಾಯದಿಂದ ಫೋಟೋಗಳನ್ನು ಹುಡುಕಿದೆವು. ಈ ಉಪಕರಣವು ವೈರಲ್‌ ಚಿತ್ರವನ್ನು 99 ಪ್ರತಿಶತ AIನಿಂದ ನಿರ್ಮಿಸಲಾಗಿದೆ ಎಂಬುದನ್ನು ಸ್ಪಷ್ಟ ಪಡಿಸಿದೆ.

ಕೇವಲ ಇದೊಂದೇ ಚಿತ್ರವಲ್ಲ ವೈರಲ್‌ ಚಿತ್ರಗಳಿಗೆ ಹೋಲಿಕೆಯಾಗುವ ಎಲ್ಲಾ ಚಿತ್ರಗಳನ್ನು ಕೂಡ ನಾವು  AI ಪರಿಕರದಿಂದ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಈ ಎಲ್ಲಾ ಚಿತ್ರಗಳನ್ನು AI ಬಳಸಿಯೇ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವಿವಿಧ ಸುದ್ದಿ ಸಂಸ್ಥೆಗಳ ವರದಿಗಳನ್ನು ಕೂಡ ಪರಿಶೀಲನೆ ನಡೆಸಿದೆವು. ಆದರೆ ನಮಗೆಯಾವುದೇ ರೀತಿಯಾದ ನಂಬಿಕೆ ಅರ್ಹವಾದ ಸುದ್ದಿಗಳು ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ರೀತಿ ಉದ್ದನೆಯ ಕತ್ತಿನ ಮನುಷ್ಯರು 1880 ರವರೆಗೆ ಬದುಕಿದ್ದರು ಎಂಬುದಕ್ಕೆ ಯಾವುದೇ ರೀತಿಯಾದ ಪುರಾವೆಗಳು ಇಲ್ಲ. ಈ ಕುರಿತು ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಸುಳ್ಳು ಮಾಹಿತಿಯಿಂದ ಕೂಡಿದೆ. ಹಾಗಾಗಿ ಈ ವೈರಲ್‌ ಸುದ್ದಿಯನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿದೆ ಎಂಬುದು ಸುಳ್ಳು ಸುದ್ದಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *