Fact Check : ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ವಿಡಿಯೋ ಗೇಮ್ ದೃಶ್ಯ ಹಂಚಿಕೆ

ಇಸ್ರೇಲ್-ಲೆಬನಾನ್ ನಡುವೆ ಸಂಘರ್ಷ ಮತ್ತೆ ಮುಂದುವರಿದಿದೆ. ಇಸ್ರೇಲ್ ಇರಾನ್ ಮೇಲೆ ದಾಳಿಯನ್ನು ನಡೆಸಲು  ಸಿದ್ಧತೆಯನ್ನು ನಡೆಸುತ್ತಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಮಿಲಿಟರಿ ವಾಹನಗಳ ಬೆಂಗಾವಲು ಪಡೆ – ಶಸ್ತ್ರಸಜ್ಜಿತ ಕಾರುಗಳು, ಟ್ರಕ್‌ಗಳು ಮತ್ತು ಟ್ಯಾಂಕ್‌ಗಳು ಅಂಕುಡೊಂಕಾದ ರಸ್ತೆಗಳ ಮೂಲಕ ಸಾಗುತ್ತಿವೆ. ಇಸ್ರೇಲ್‌ನ ಧ್ವಜಗಳು ರಸ್ತೆಬದಿಗಳ ಸ್ಥಳದಲ್ಲಿ ಕಂಡುಬಂದಿದ್ದು, “ಇಸ್ರೇಲ್ ಇರಾನ್‌ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

Israel GTA V

ಫ್ಯಾಕ್ಟ್‌ ಚೆಕ್‌ :

ಈ ವೈರಲ್ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು, ಮೊದಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ  ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬ ಅನುಮಾನ ಉಂಟಾಯಿತು. ಈ ಕುರಿತು ಅಂತರ್ಜಾಲದಲ್ಲಿ ಹುಡುಕಿದಾಗ “ಡೈಯರ್ ಗೇಮಿಂಗ್” ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ದೊರೆಯಿತು. ಇದು ವಾಟರ್‌ಮಾರ್ಕ್‌ನಿಂದ ಕೂಡಿದ ವಿಡಿಯೋವಾಗಿದೆ. ಆದ್ದರಿಂದ ಈ ವಿಡಿಯೋ ಕುರಿತು ಮತ್ತಷ್ಟು ಹುಡುಕಿದಾಗ,  ಇದು ಇರಾಕ್‌ನ ಅಬ್ರಿಲ್‌ನಲ್ಲಿ ನಡೆದ ವಿಡಿಯೋ ಗೇಮ್ ಆಟದ ವಿಡಿಯೋ ಆಗಿದ್ದು, ಈ ಆಟವನ್ನು ಓಮರ್ ಅಬ್ದುಲ್ಲಾ ಮೊಹಿಯುದ್ದೀನ್‌ ಎಂಬಾತ ರಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಆಟದ ವೈರಲ್‌ ವಿಡಿಯೋವನ್ನು ಸೆಪ್ಟೆಂಬರ್ 9 ರಂದು ಹಂಚಿಕೊಳ್ಳಲಾಗಿದೆ. ಆದರೆ, ಈ ವಿಡಿಯೋವನ್ನುಯಾವ ವಿಡಿಯೋ ಗೇಮ್‌ನಿಂದ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿಲ್ಲ. Israel GTA V

ನಮಗೆ ದೊರೆತಂತಹ ಎಲ್ಲ ಸುಳಿವುಗಳನ್ನು ಆಧಾರವಾಗಿಟ್ಟುಕೊಂಡು, ಇಸ್ರೇಲ್‌ ಎಂಬ  ಕೀವರ್ಡ್ ಬಳಸಿ Googleನಲ್ಲಿ ಹುಡುಕಿದಾಗ ಇಸ್ರೇಲ್‌ಗೆ ಸಂಬಂಧಿಸಿದ ಸೈನಿಕ ಪಡೆಯ ಕುರಿತು ಹಲವಾರು ಆಟಗಳ ವಿಡಿಯೋಗಳು ದೊರೆತಿವೆ. “ಗೇಮ್ ಲವರ್ಜ್” ಎಂಬ ಹೆಸರಿನ YouTube ಚಾನಲ್‌, ಅಗಸ್ಟ್ 2 ರಂದು ವೈರಲ್‌ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ವೈರಲ್ ವಿಡಿಯೋದ ದೃಶ್ಯಗಳು ಕಂಡುಬಂದಿವೆ. ಇಸ್ರೇಲ್‌ನ ಸೇನಾ ಟ್ಯಾಂಕ್ ಬೆಂಗಾವಲು ಪಡೆಯ ಮೇಲೆ ಇರಾನಿನ ಫೈಟರ್ ಜೆಟ್‌ಗಳು, ಟ್ಯಾಂಕ್‌ಗಳು ಮತ್ತು ಹೆಲಿಕಾಪ್ಟರ್‌ಗಳು ದಾಳಿಯನ್ನು ನಡೆಸಿವೆ. “ಇರಾನ್ ಇಸ್ರೇಲ್ ಯುದ್ಧ – GTA 5” ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆದು ಹಂಚಿಕೊಳ್ಳಲಾಗಿತ್ತು.

ಈ ವಿಡಿಯೋದ ಮಾಹಿತಿಯ ಪ್ರಕಾರ, ಈ ಯೂಟ್ಯೂಬ್ ಖಾತೆಯು ಅದ್ನಾನ್ ಮಜೀದ್ ಅವರಿಗೆ ಸೇರಿದ್ದು, ಅವರು ತಮ್ಮ ಸ್ಥಳವನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳಿದ್ದಾರೆ. “ಈ ಚಾನಲ್‌ನಲ್ಲಿ ನೀವು GTAV(Grand Theft Auto V) ಯ ವಿಡಿಯೋ ಗೇಮ್‌ ಕುರಿತು ಎಲ್ಲವನ್ನೂ ಕಲಿಯಬಹುದು. ನಾನು GTAVವಿಡಿಯೋಗೇಮ್‌ನ್ನು ಮಾತ್ರ ಪ್ಲೇ ಮಾಡುತ್ತೇನೆ ಮತ್ತು ನಿಮ್ಮೊಂದಿಗೆ GTAV ವಿಡಿಯೋ ಗೇಮ್‌ಗಳನ್ನು ಮಾತ್ರ ಹಂಚಿಕೊಳ್ಳುತ್ತೇನೆ.” ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ಚಾನೆಲ್‌ ಹಲವಾರು GTAV ವಿಡಿಯೋ ಗೇಮ್‌ಗಳನ್ನು ಹಂಚಿಕೊಂಡಿದ್ದು,  ಅವುಗಳಲ್ಲಿ ಒಂದು ವಿಡಿಯೋವನ್ನು “ಇರಾನ್ ಇಸ್ರೇಲ್ ಮಿಲಿಟರಿ ಬೆಂಗಾವಲು ದಾಳಿ| ಇಸ್ರೇಲ್ ಗಾಜಾಕ್ಕೆ ಟ್ಯಾಂಕ್‌ಗಳನ್ನು ಕಳುಹಿಸುತ್ತದೆ – GTAV5” ಎಂದು  ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

GTAV ವಿಡಿಯೋ ಗೇಮ್‌ 2013 ರ ಮುಕ್ತ-ಪ್ರಪಂಚದ ಸಾಹಸ-ಸಾಹಸ ಆಟವಾಗಿದೆ. ಆಟಗಾರರಿಗಾಗಿ ವಿವಿಧ ಆಟಗಳನ್ನು ವರ್ಷಗಳುದ್ದಕ್ಕೂ ಏರ್ಪಡಿಸಲಾಗುತ್ತದೆ.  FiveM ಮತ್ತು 5MODS ನಂತಹ ಮಾಡ್ ಸೇವೆಗಳನ್ನು ಆಟಗಾರರು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಾರೆ. ಈ ಹಿಂದೆ ಆಟದ ವಿಡಿಯೋಗಳನ್ನು ಯುದ್ಧದ ಗೇಮ್‌ಗಳಂತೆ ನಕಲು ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2013ರ GTAV ವಿಡಿಯೋ ಗೇಮ್‌ಗಳನ್ನು, ಇಸ್ರೇಲ್‌ ಇರಾನಿನ ಮೇಲೆ ದಾಳಿ ನಡೆಸಲು ಸಿದ್ದವಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ :

Fact Check: ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *