Fact Check : ರತನ್‌ ಟಾಟಾ ಕಾಣಿಸಿಕೊಂಡ ಅಂತಿಮ ವಿಡಿಯೋ ಎಂದು ಜೂನ್ ತಿಂಗಳ ವಿಡಿಯೋ ಹಂಚಿಕೆ

ರತನ್ ಟಾಟಾ ವಾಕರ್ ಸಹಾಯದಿಂದ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಇದು ರತನ್ ಟಾಟಾರವರ ಅಂತಿಮ ವಿಡಿಯೋ, ಈ ವಿಡಿಯೋ ನಂತರ ಯಾರೂ ಅವರನ್ನು ನೋಡಿಲ್ಲ!”  ಎಂದು ಅವರ ಸಾವಿನ ನಂತರ ಅನೇಕ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು, Googleನಲ್ಲಿ ಹುಡುಕಾಟ ನಡೆಸಿದಾಗ, 2024ರ ಜೂನ್ 21ರ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪಲ್ಲವ್ ಪಾಲಿವಾಲ್ ಎಂಬ ಹೆಸರು ಕಂಡುಬಂದಿದೆ. ಆ ಹೆಸರನ್ನು ಕೀವರ್ಡ್‌ನ್ನಾಗಿ ಬಳಸಿಕೊಂಡು Googleನಲ್ಲಿ ಹುಡುಕಿದಾಗ, ಅವರ Instagram ಖಾತೆಯಲ್ಲಿ ವಿಡಿಯೋ ಲಭಿಸಿದೆ. ಇದರಲ್ಲಿ ಪಲ್ಲವ್‌ ಪಾಲಿವಾಲ್‌ರು ಫೋಟೋ ಜರ್ನಲಿಸ್ಟ್ ಎಂದು ಖಚಿತವಾಗಿ ತಿಳಿದುಬಂದಿದೆ. ಅಕ್ಟೋಬರ್ 10 ರಂದು “ನಾವು ರತನ್ ಟಾಟಾರನ್ನು ಕೊನೆಯ ಬಾರಿ ನೋಡಿದ್ದೇವೆ.” ಎಂದು ಬರೆದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ವೈರಲ್‌ ವಿಡಿಯೋ ಕುರಿತು ಮತ್ತಷ್ಟು ಹುಡುಕಿದಾಗ, ರತನ್ ಟಾಟಾರ ಮತ್ತೊಂದು ವಿಡಿಯೋ ಲಭಿಸಿದೆ. 2024ರ ಅಕ್ಟೋಬರ್ 2ರಂದು IANS ಎಂಬ ಸುದ್ದಿ ಸಂಸ್ಥೆಯು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ  ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಮಿಷನ್‌ 10 ವರ್ಷಗಳನ್ನು ಪೂರ್ಣಗೊಳಿಸಿದೆ ಎಂದು ಟಾಟಾರವರು  ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾರ ಸಾವಿಗೂ ಮುನ್ನ ವಿಮಾನ ನಿಲ್ದಾಣದಿಂದ ಹೊಗಡೆ ಬರುತ್ತಿದ್ದಾರೆ ಎಂಬ ವೈರಲ್‌ ವಿಡಿಯೋ ಸುಳ್ಳುಮಾಹಿತಿಗಳಿಂದ ಕೂಡಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಮೊದಲು ಸತ್ಯವನ್ನು ತಿಳಿದುಕೊಳ್ಳಿ.


ಇದನ್ನು ಓದಿ :

Fact Check : ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *