Fact Check : ಗಾಜಾ ಪತ್ರಕರ್ತನ ಮೃತ ದೇಹ ಎಂದು ಎಡಿಟೆಡ್‌ ಪೋಟೊ ಹಂಚಿಕೊಳ್ಳಲಾಗುತ್ತಿದೆ

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ನಡುವೆ ಗಾಜಾದ ಪತ್ರಕರ್ತನ ಮೃತ ದೇಹದ ಚಿತ್ರವೊಂದು ದೊರೆತಿದೆ ಎಂದು ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಕೊನೆಯೂಸಿರು ಕೂಡ ಗಾಜಾದಲ್ಲಿ ತುಳಿತಕ್ಕೊಳಗಾದವರ ಧ್ವನಿಯನ್ನು ಎತ್ತಿಹಿಡಿದಂತೆ ಇತ್ತು.” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರು ಪೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ಪೋಟೊ AI (Artificial intelligence) ನಿಂದ ರಚಿಸಲ್ಪಟ್ಟಿದೆ. ಈ ವೈರಲ್‌ ಪೋಟೊವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  ಪೋಟೊದಲ್ಲಿ ಮನುಷ್ಯ ಧರಿಸಿರುವ ಉಡುಪಿನ ಮೇಲೆ “ಪ್ರೆಸ್” ಎಂಬ ಪದವು ವಿರೂಪಗೊಂಡಂತೆ ಕಾಣುತ್ತದೆ ಮತ್ತು ಬೆರಳುಗಳ ಆಕಾರಗಳಲ್ಲಿ ಅಸಂಗತಿಗಳು ಕಂಡುಬರುತ್ತಿವೆ. ಈ ಪೋಟೊವನ್ನು ಬದಲಾಯಿಸಿರಬಹುದು ಎಂಬ ಅನುಮಾನ ಉಂಟಾಯಿತು. ಹಾಗಾಗಿ AI ಇಮೇಜ್ ಡಿಟೆಕ್ಟರ್ ಸಾಧನಗಳನ್ನು ಉಪಯೋಗಿಸಿ ಚಿತ್ರವನ್ನು ರನ್ ಮಾಡಿದಾಗ, ಹೈವ್ ಮಾಡರೇಶನ್ ಮತ್ತು ಹಗ್ಗಿಂಗ್ ಫೇಸ್‌ನಿಂದ ಚಿತ್ರವನ್ನು ನಕಲು ಮಾಡಲಾಗಿದೆ ಎಂದು ದೃಢವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗಾಜಾದಲ್ಲಿ ಪತ್ರಕರ್ತ ಸಾವನ್ನಪ್ಪಿದ್ದಾನೆ ಎಂದು AIರಚಿತ ಪೋಟೊವನ್ನು ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ರತನ್‌ ಟಾಟಾ ಕಾಣಿಸಿಕೊಂಡ ಅಂತಿಮ ವಿಡಿಯೋ ಎಂದು ಜೂನ್ ತಿಂಗಳ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *