Fact Check: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಜಾಗೃತಿಗಾಗಿ ಮಾಡಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಮುಸ್ಲಿಂ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ತುಣುಕೊಂದು(ರೀಲ್‌) ಹರಿದಾಡುತ್ತಿದ್ದು, ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ದಂಪತಿಗಳ ನಡುವೆ ಬರುವ ಇನ್ನೊಬ್ಬ ವ್ಯಕ್ತಿ ತನ್ನ ಅಂಗಿಯನ್ನು ತೆಗೆದು ಸ್ನಾಯುಗಳನ್ನು ಪ್ರದರ್ಶಿಸುತ್ತಾನೆ. ಇದರಿಂದ ಕೋಪಗೊಂಡ ಮಹಿಳೆ ಅರೆಬೆತ್ತಲಾದ ಪುರುಷನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ, ಅವನನ್ನು ಬಹುತೇಕ ಓಡಿಸುತ್ತಾಳೆ. ಈ ವೀಡಿಯೊವನ್ನು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಹಂಚಿಕೊಳ್ಳುವವರು ಅಂಗಿ ಇಲ್ಲದ ಪುರುಷ ಮುಸ್ಲಿಂ ಮತ್ತು ಮಹಿಳೆ ಹಿಂದೂ ಎಂದು ಪ್ರತಿಪಾದಿಸಲಾಗುತ್ತಿದೆ.

ಲೀರ್ ಬೈಸೆಪ್ಸ್

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡು “ಅಬ್ದುಲ್” ತನ್ನ ದೇಹವನ್ನು “ಹಿಂದೂ ಮಹಿಳೆಗೆ” ತೋರಿಸಲು ತನ್ನ ಅಂಗಿಯನ್ನು ತೆಗೆದುಹಾಕಿದ್ದಾರೆ ಮತ್ತು ಧೈರ್ಯಶಾಲಿ ಹಿಂದೂ ಮಹಿಳೆಯಿಂದ ಚೆನ್ನಾಗಿ ಪಾಠಕಲಿತಿದ್ದಾನೆ ಎಂದು ಬರೆದಿದ್ದಾರೆ. ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಬಿತ್ತುವ ಸಲುವಾಗಿ ಉದ್ದೇಶಪೂರ್ವಕವಾಗಿ ವಿಡಿಯೋದಲ್ಲಿರುವ ಯುವಕ ಮುಸ್ಲಿಂ ಎಂದು ಆರೋಪಿಸಲಾಗುತ್ತಿದೆ.

ವೈರಲ್ ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

 

ಫ್ಯಾಕ್ಟ್‌ ಚೆಕ್:

ಈ ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ವಿಡಿಯೋಗೆ ನೀಡಿರುವ ಪ್ರತಿಕ್ರಿಯೆಗಳನ್ನು ಗಮನಿಸಿದಾಗ, ವೈರಲ್ ಆದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅನೇಕರು, ಇದು “ತಮನ್ನಾ ಕೊಹ್ಲಿ 786787” ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ಹೇಳಿದ್ದಾರೆ. ನಾವು ಇನ್ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ ಸೆಪ್ಟೆಂಬರ್ 19 ರಂದು “ರೀಲ್ಸ್” ಮತ್ತು “ಮನರಂಜನೆ” ನಂತಹ ಹ್ಯಾಶ್ಟಾಗ್‌ಗಳೊಂದಿಗೆ ಹಂಚಿಕೊಳ್ಳಲಾದ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ.

ಲೀರ್ ಬೈಸೆಪ್ಸ್

ವಿಡಿಯೊದಲ್ಲಿರುವ ಮಹಿಳೆ ತಮನ್ನಾ ಕೊಹ್ಲಿ, ಎಂಟು ಸಾವಿರಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ವಿಡಿಯೊ ಸೃಷ್ಟಿಕರ್ತೆ(ಕಂಟೆಂಟ್‌ ಕ್ರಿಯೇಟರ್) ಎಂದು ಪ್ರೊಫೈಲ್ ಸೂಚಿಸುತ್ತದೆ. ಖಾತೆಯಲ್ಲಿ, ವಿಭಿನ್ನ ಪುರುಷರು ತಮ್ಮ ಸ್ನಾಯುಗಳನ್ನು ಬಗ್ಗಿಸಿ ನಂತರ ಕೊಹ್ಲಿಯಿಂದ ಥಳಿಸಲ್ಪಡುವುದನ್ನು ತೋರಿಸುವ ಇದೇ ರೀತಿಯ ಹಲವಾರು ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ

ಇದಲ್ಲದೆ, ವೈರಲ್ ವೀಡಿಯೊದಲ್ಲಿರುವ ಇಬ್ಬರು ಪುರುಷರು ಖಾತೆ ಹಂಚಿಕೊಂಡ ಇತರ ವೀಡಿಯೊಗಳಲ್ಲಿಯೂ ನಟಿಸುವುದನ್ನು ಕಾಣಬಹುದು.

ಲೀರ್ ಬೈಸೆಪ್ಸ್ವಿಡಿಯೊವನ್ನು ಸಂಪೂರ್ಣವಾಗಿ ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು “ಸಾರ್ವಜನಿಕ ಜಾಗೃತಿಗಾಗಿ” ಅವರು ಅದನ್ನು ರಚಿಸಿದ್ದಾರೆ ಎಂದು ತಮನ್ನಾ ಕೊಹ್ಲಿಯವರ ಇತರ ವಿಡಿಯೋಗಳಿಂದ ಧೃಡಪಟ್ಟಿದೆ. ಇದರಲ್ಲಿ ಯಾವುದೇ ಹಿಂದೂ-ಮುಸ್ಲಿಂ ಕೋನವಿಲ್ಲ ಎಂಬುದು ಸ್ಪಷ್ಟವಾಗಿದೆ.

ಹೀಗಾಗಿ, ಈ ವಿಡಿಯೊದಲ್ಲಿ ಮುಸ್ಲಿಂ ಪುರುಷನು ಬೀದಿಯಲ್ಲಿ ಹಿಂದೂ ಮಹಿಳೆಗೆ ಕಿರುಕುಳ ನೀಡುವುದನ್ನು ತೋರಿಸುವುದಿಲ್ಲ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ.



ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *