Fact Check : ರತನ್ ಟಾಟಾ ಅವರ ನಾಯಿ ʼಗೋವಾʼ ಜೀವಂತವಾಗಿಲ್ಲ ಎಂಬುದು ಸುಳ್ಳು

ರತನ್ ಟಾಟಾ ಅವರ ನಾಯಿ ‘ಗೋವಾ’ ಸಾವನ್ನಪ್ಪಿದೆ. ಗೋವಾ ಮೂರು ದಿನಗಳಿಂದ ಏನನ್ನೂ ತಿಂದಿಲ್ಲ ಮತ್ತು ತನ್ನ ಮಾಲೀಕ ರತನ್ ಟಾಟಾ ನಿಧನಕ್ಕೆ ಶೋಕವನ್ನು ವ್ಯಕ್ತಪಡಿಸುತ್ತಿದೆ ಎಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್ ಪೋಸ್ಟ್‌ಗಳನ್ನು ಕುರಿತು ನಿಜವನ್ನು ತಿಳಿದುಕೊಳ್ಳಲು, ಪೋಸ್ಟ್‌ಗಳ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2024ರ  ಅಕ್ಟೋಬರ್ 15ರಂದು ಹಿರಿಯ ಮುಂಬೈ ಪೊಲೀಸ್ ಅಧಿಕಾರಿ ಸುಧೀರ್ ಕುಡಾಲ್ಕರ್ ಅವರ Instagramನ ಪೋಸ್ಟ್‌ರ್‌ ಲಭಿಸಿದೆ. ಅವರು ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಅವುಗಳ ರಕ್ಷಣೆಗೆ ಹೆಸರುವಾಸಿಯಾಗಿದ್ದಾರೆ. ಪೋಸ್ಟ್‌ನಲ್ಲಿ “ದಿವಂಗತ ರತನ್ ಟಾಟಾರವರ ಸಾಕು ನಾಯಿ ʼಗೋವಾʼದ ಸಾವಿನ ಕುರಿತು ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ನಾನು ಗೋವಾ ಕುರಿತು ಟಾಟಾರವರ ಆಪ್ತ ಸಹಾಯಕರಾದ ಶಾಂತನು ನಾಯ್ಡು ಅವರೊಂದಿಗೆ ಚರ್ಚಿಸಿದಾಗ, ʼಗೋವಾʼ ಆರೋಗ್ಯವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ಆದ್ದರಿಂದ ಇಂತಹ ವೈರಲ್‌ ವದಂತಿಗಳನ್ನು ನಂಬಬೇಡಿ.

ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾ ಅವರ ನಾಯಿ ʼಗೋವಾʼ ಜೀವಂತವಾಗಿದೆ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಆದ್ದರಿಂದ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೊದಲು ನಿಜವನ್ನು ತಿಳಿದು ಹಂಚಿಕೊಳ್ಳಿ.


ಇದನ್ನು ಓದಿ :

Fact Check : ಪ್ರಧಾನಿ ಮೋದಿ ತಮ್ಮದೇ ಟೀಕೆಯ ವಿಡಿಯೋವನ್ನು ವೀಕ್ಷಿಸಿದ್ದಾರೆ ಎಂದು ಎಡಿಟೆಡ್‌ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *