ಸರ್ಕಾರದ ಹಿರಿಯ ಸಚಿವರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಹಿಳೆಯೊಬ್ಬಳು ಟೀಕಿಸಿದ್ದಾಳೆ. ಈ ವಿಡಿಯೋವನ್ನು ಮೋದಿ ವೀಕ್ಷಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವಿಡಿಯೋ ಕುರಿತು ನಿಜ ತಿಳಿದುಕೊಳ್ಳಲು, ವಿಡಿಯೋದ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಉನ್ನತ ಮಟ್ಟದ ಸಭೆಗಳ ಅಧ್ಯಕ್ಷತೆಯಲ್ಲಿ ಪ್ರಧಾನಿ ಮೋದಿಯವರ ಎರಡು ವಿಡಿಯೋಗಳು ಲಭಿಸಿವೆ. ಕೋವಿಡ್-ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪಿಎಂ ಮೋದಿಯವರು ಮಾರ್ಚ್ 2023ರಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ವಿಡಿಯೋದ ಮೂಲ ದೃಶ್ಯದಲ್ಲಿ ಕಾಣಬಹುದು.
2023ರ ಮಾರ್ಚ್ 23ರಂದು ಟೈಮ್ಸ್ ಆಫ್ ಇಂಡಿಯಾ ವಿಡಿಯೋವನ್ನು ಹಂಚಿಕೊಂಡಿದೆ. 2023 ಮಾರ್ಚ್ 22 ರಂದು ನ್ಯೂಸ್ವೈರ್ ಎಎನ್ಐ ಇದೇ ಘಟನೆಯ ಕುರಿತು ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ.
ಮೇಲಿನ ಎರಡೂ ಚಿತ್ರಗಳ ಹೋಲಿಕೆಯಲ್ಲಿ, ಪರದೆಯ ಮೇಲಿನ ದೃಶ್ಯವನ್ನು ಮಾತ್ರವಲ್ಲ, ಸಂಪೂರ್ಣವಾಗಿ ವಿಡಿಯೋ ಫ್ರೇಮ್ನ್ನು ಎಡಿಟಿಂಗ್ ಸಾಫ್ಟ್ವೇರ್ ಬಳಸಿ ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಈ ವಿಡಿಯೋ ಕುರಿತು ಮತ್ತಷ್ಟು ತಿಳಿಯಲು, ವಿಡಿಯೋದಲ್ಲಿರುವ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರ ದೃಶ್ಯಗಳನ್ನು ಹೊಂದಿರುವ ಮತ್ತೊಂದು ವಿಡಿಯೋ ಲಭಿಸಿದೆ. 2023ರ ಜೂನ್ 26 ರಂದು ಪ್ರಕಟವಾದ ವಿಡಿಯೋದಲ್ಲಿ ಪ್ರಧಾನಿ ಮೋದಿ ಯುಎಸ್ ಮತ್ತು ಈಜಿಪ್ಟ್ ಭೇಟಿಯ ನಂತರ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯೊಬ್ಬಳು ಪ್ರಧಾನಿ ಮೋದಿಯವರನ್ನು ಟೀಕಿಸಿದ್ದು, ಆ ವಿಡಿಯೋವನ್ನು ಸ್ವತಃ ಮೋದಿಯವರೇ ವೀಕ್ಷಿಸಿದ್ದಾರೆ ಎಂದು ಎಡಿಟೆಡ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check : ರತನ್ ಟಾಟಾ ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.