Fact Check : ಅನಿರುದ್ದ್‌ ಆಚಾರ್ಯರು ಸಲ್ಮಾನ್ ಖಾನ್‌ ಪಾದ ಸ್ಪರ್ಶಿಸಿದ್ದಾರೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಅಕ್ಟೋಬರ್ 6 ರಂದು ಆಧ್ಯಾತ್ಮಿಕ ಭಾಷಣಕಾರ ಅನಿರುದ್ಧ್ ಆಚಾರ್ಯ ಬಿಗ್ ಬಾಸ್ 18 ರ ಗ್ರ್ಯಾಂಡ್ ಪ್ರೀಮಿಯರ್‌ಗೆ ಅತಿಥಿಯಾಗಿ ಆಗಮಿಸಿ ನಟ ಸಲ್ಮಾನ್ ಖಾನ್‌ಗೆ ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ನೀಡಿ ಕಾರ್ಯಕ್ರಮಕ್ಕೆ ಬಂದಿದ್ದ ಸ್ಪರ್ಧಿಗಳೆಲ್ಲರನ್ನು ಆಶೀರ್ವದಿಸಿದ್ದಾರೆ. ಈ ನಡುವೆ, ಅನಿರುದ್ಧ ಆಚಾರ್ಯರು ಸಲ್ಮಾನ್ ಖಾನ್‌ರ ಪಾದಗಳನ್ನು ಸ್ಪರ್ಶಿಸಿ  ಆಶೀರ್ವಾದ ತೆಗೆದುಕೊಂಡಿದ್ದಾರೆ ಎಂದು ಪೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ಪೋಟೊ ಕುರಿತು ನಿಜ ತಿಳಿದುಕೊಳ್ಳಲು, ಪೋಟೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೋಟೊದಲ್ಲಿರುವ  ವ್ಯಕ್ತಿಗಳಿಬ್ಬರ ಕೈಗಳು ಮತ್ತು ಆವಭಾವಗಳು ಹೊಂದಿಕೆಯಾಗಿಲ್ಲ. ಈ ಪೋಟೊವನ್ನು ಬದಲಾಯಿಸಿದಂತೆ ಕಂಡುಬಂದಿದೆ. ಅನಿರುದ್ಧ್ ಆಚಾರ್ಯ ಎಂಬ ಕೀವರ್ಡ್‌ ಬಳಸಿ ಹುಡುಕಿದಾಗ, 2024ರ ಅಕ್ಟೋಬರ್ 6ರಂದು ಅನಿರುದ್ಧ್ ಆಚಾರ್ಯರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಮೂಲ ಚಿತ್ರ ದೊರೆತಿದೆ. ಆ ಚಿತ್ರದಲ್ಲಿ ಆಚಾರ್ಯರು ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ಸಲ್ಮಾನ್ ಖಾನ್‌ಗೆ ನೀಡುತ್ತಿದ್ದಾರೆ. ಹಾಗಾಗಿ ವೈರಲ್ ಆಗುತ್ತಿರುವ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದನ್ನು ಈ ಕೆಳಗಿನ ಚಿತ್ರವು ಸ್ಪಷ್ಟಪಡಿಸುತ್ತದೆ.


“ಗೌರವಾನ್ವಿತ ಆಚಾರ್ಯರನ್ನು ಅವಮಾನಿಸಲು ಪೋಟೊಗಳನ್ನು ಎಡಿಟ್‌ ಮಾಡಿ ಹಂಚಿಕೊಳ್ಳುವವರಿಗೆ ಶಿಕ್ಷೆ ವಿಧಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಚಾಚೈ ಪೊಲೀಸ್ ಠಾಣೆಯ ಅಧೀಕ್ಷಕರಿಗೆ ಹೃತ್ಪೂರ್ವಕ ಧನ್ಯವಾದಗಳು.” ಎಂದು ಬರೆದು ಅಕ್ಟೋಬರ್ 11 ರಂದು ಆಚಾರ್ಯರು  ತಮ್ಮ Instagram ಖಾತೆಯಲ್ಲಿ ಪೋಟೊವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಚಾರ್ಯರು ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ಸಲ್ಮಾನ್ ಖಾನ್‌ಗೆ ನೀಡುತ್ತಿರುವ ದೃಶ್ಯವನ್ನು, ಆಚಾರ್ಯರು ಸಲ್ಮಾನ್‌ ಖಾನ್‌ರ ಪಾದಕ್ಕೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುವ ರೀತಿಯಲ್ಲಿ ಪೋಟೊವನ್ನು ಎಡಿಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ದೃಶ್ಯಗಳನ್ನು ಹಂಚಿಕೊಳ್ಳುವುದಕ್ಕಿಂತ ಮೊದಲು ಸತ್ಯವನ್ನು  ತಿಳಿದುಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶದಿಂದ ಮರಳಿ ಬಂದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *