ದುರ್ಗಾ ಮಾತೆ

Fact Check: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಧ್ವಂಸಗೊಳಿಸಿರುವವನು ಮಾನಸಿಕ ಅಸ್ವಸ್ತ. ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ

ಕೆಲವು ದಿನಗಳ ಹಿಂದೆಯಷ್ಟೇ ದಸರ ಹಬ್ಬ ಮತ್ತು ದುರ್ಗಾ ಪೂಜೆ ಮುಗಿಸಿದೆ. ಆದರೆ ಈಗ ದುರ್ಗಾ ದೇವಿಯ ಮುರಿದ ವಿಗ್ರಹ ಮತ್ತು ಪೂಜೆಯ ಸಾಮಾನುಗಳು ದೇವಾಲಯದ ತುಂಬಾ ಹರಡಿಕೊಂಡಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋವನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ. ಈ ವಿಡಿಯೋವನ್ನು”ಅತಿರೇಕ: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನಿ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತದ ಭಾರತೀಯ ಹೈದರಾಬಾದ್” ಎಂದು ಕೆಲವು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಅನ್ನು…

Read More

Fact Check | ಏರ್‌ ಶೋನಲ್ಲಿ ಪೈಲೆಟ್‌ ಅದ್ಭುತ ಪ್ರದರ್ಶನ ಎಂದು ರಿಮೋಟ್ ಕಂಟ್ರೋಲ್ಡ್‌ ಜೆಟ್‌ ಮಾಡಲ್‌ ವಿಡಿಯೋ ಹಂಚಿಕೆ

ಈ ವಿಡಿಯೋವನ್ನು ನೋಡಿ ಭಾರತದ ಏರ್‌ಶೋ ಇತಿಹಾಸದಲ್ಲೇ ಇದೊಂದು ಅದ್ಭುತವಾದ ಪ್ರದರ್ಶನ, ನಾವು ಸಾಕಷ್ಟು ಏರ್‌ಶೋಗಳನ್ನು ನೋಡಿರುತ್ತೇವೆ ಆದರೆ ಈ ರೀತಿಯ ಅದ್ಭುತವಾದ ಪ್ರತಿಭೆಯುಳ್ಳ ಫೈಲೆಟ್‌ನ ಸಾಮಾರ್ಥ್ಯವನ್ನು ಪ್ರದರ್ಶಿಸಿದ ಏರ್‌ಶೋ ಇದು ಎಂದರೆ ತಪ್ಪಾಗುವುದಿಲ್ಲ. ಒಂದು ಏರ್‌ಕ್ರಾಫ್ಟ್‌ ಅನ್ನು ಹೀಗೂ ಬಳಸಲಾಗುತ್ತದೆ ಎಂಬುದು ನಮಗೆ ಇದೇ ಮೊದಲ ಬಾರಿಗೆ ತಿಳಿದು ಬಂದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದಲ್ಲಿ ಕೂಡ ಏರ್‌ಕ್ರಾಫ್ಟ್‌ ಹಾರುತ್ತಿರುವುದು, ಅದರ ಹಾರಾಟದ ಬಳಿಯೇ ಕೆಲವರು ನಿಂತಿರುವುದು ಕೂಡ ಕಂಡು ಬರುತ್ತಿದೆ….

Read More

Fact Check : ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮಹಿಳೆಯೊಬ್ಬಳು ಹಿಜಾಬ್‌ ಧರಿಸದೆ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸುತ್ತುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ  ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ನ ವಾಯ್ಸ್ ಆಫ್ ಹಿಂದೂಸ್ ಎಂಬ ಖಾತೆಯಲ್ಲಿ ” ಯಾವುದೇ ಹಿಂದೂ ಹುಡುಗಿ ಹಿಜಾಬ್ ಧರಿಸದೆ ಬಾಂಗ್ಲಾದೇಶದಲ್ಲಿ ನಡೆದಾಡಲು ಸಾಧ್ಯವಿಲ್ಲ. ಮಹಮ್ಮದ್ ಯೂನಸ್‌ರ ಹೊಸ ಬಾಂಗ್ಲಾದೇಶಕ್ಕೆ ಸುಸ್ವಾಗತ, ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರವಾಗಿ ಯಾರೂ ನಿಲ್ಲುವುದಿಲ್ಲ. ಇದು ಅತ್ಯಂತ ಭಯಾನಕವಾದ ದೃಶ್ಯವಾಗಿದ್ದು, ನಾವೆಲ್ಲರೂ #SaveBangladesiHindus ಎಂದು ಮಾತನಾಡಬೇಕಾಗಿದೆ. ” ಗುಂಪೊಂದು…

Read More

Fact Check : ವಿಜಯ ದಶಮಿ ಆಚರಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಹಿಂದೂ ಯುವತಿಯರನ್ನು ಕೊಲೆ ಮಾಡಲಾಗಿದೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ವಿಜಯ ದಶಮಿ ಆಚರಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಇಬ್ಬರು ಹಿಂದೂ ಹುಡುಗಿಯರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ ಎಂಬ ಸಂದೇಶದೊಂದಿಗೆ ಇಬ್ಬರು ಯುವತಿಯರು ಜೊತೆಯಲ್ಲಿ ಕುಳಿತಿರುವ ಚಿತ್ರವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ, “ಬಾಂಗ್ಲಾದಲ್ಲಿ ದುರ್ಗಾ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಇಬ್ಬರು ಹಿಂದೂ ಯುವತಿಯರ ಭೀಕರ ಹತ್ಯೆ! ಹಿಂದುಗಳಿಗೂ ಕೋಳಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ, ಕೋಳಿಯೊಂದನ್ನು ಕತ್ತರಿಸುವಾಗ ಅದು ಮಾತ್ರ ಚೀರಾಡುತ್ತದೆ, ಉಳಿದ ಕೋಳಿಗಳು ಬಿಟ್ಟಿ ಕಾಳುಗಳನ್ನು ತಿನ್ನುತ್ತಾ ತಮ್ಮ ಪಾಡಿಗೆ ತಾವು…

Read More

Fact Check : ಪ್ರವಾಹದಲ್ಲಿ ಮಕ್ಕಳೊಂದಿಗೆ ಸಿಲುಕಿರುವ ವೃದ್ಧ ಮಹಿಳೆಯ ದೃಶ್ಯವು AI ರಚಿತವಾದದ್ದು

ವೃದ್ಧ ಮಹಿಳೆ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಇತರ ಮಕ್ಕಳೊಂದಿಗೆ ನೀರಿನಲ್ಲಿ ನಿಂತಿದ್ದಾಳೆ ಎಂದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಏಕಾಏಕಿ ಪ್ರವಾಹದ ಪರಿಣಾಮ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ. “ಹೀರೋಗಳು ಎಲ್ಲಾ ನಾಯಕಿಯ ಫೋಟೋಗಳನ್ನು ಇಷ್ಟಪಡುತ್ತಾರೆ, ಇಂದು ತಾಯಿಯನ್ನು ಯಾರು ಇಷ್ಟಪಡುತ್ತಾರೆ, ಲೈಕ್‌ ಮತ್ತು ಕಾಮೆಂಟ್‌ಗಳನ್ನು ಯಾರು ಮಾಡುತ್ತಾರೆ ಎಂಬುದನ್ನು ನೋಡೋಣ. #ಫೋಟೋಗ್ರಫಿ ಚಿತ್ರದಲ್ಲಿ  ಪ್ರವಾಹದ ದುರಂತ” ಎಂದು ಕೆಲವು ಫೇಸ್‌ಬುಕ್ ಬಳಕೆದಾರರು ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ :  ಈ ವೈರಲ್‌…

Read More

Fact Check | ಭಾರತದ ಮುಸಲ್ಮಾನರು ಕ್ರೈಸ್ತರ ಚರ್ಚ್‌ಗಳನ್ನು ಸುಟ್ಟು ಹಾಕುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ

“ಕಳೆದ ರಾತ್ರಿ 20 ಚರ್ಚುಗಳನ್ನು ಸುಟ್ಟುಹಾಕಲಾಯಿತು ಮತ್ತು ಇಂದು ರಾತ್ರಿ ಅವರು “ಒಲಿಸಾಬಾಂಗ್ ಪ್ರಾಂತ್ಯ” ದಲ್ಲಿ 200 ಕ್ಕೂ ಹೆಚ್ಚು ಚರ್ಚುಗಳನ್ನು ನಾಶಮಾಡಲು ಬಯಸುತ್ತಾರೆ. ಅವರು ಮುಂದಿನ 24 ಗಂಟೆಗಳಲ್ಲಿ 200 ಮಿಷನರಿಗಳನ್ನು ಕೊಲ್ಲಲು ಬಯಸುತ್ತಾರೆ. ಎಲ್ಲಾ ಕ್ರಿಶ್ಚಿಯನ್ನರು ಹಳ್ಳಿಗಳಲ್ಲಿ ಅಡಗಿಕೊಂಡಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ ಮತ್ತು ಪ್ರಪಂಚದಾದ್ಯಂತ ನಿಮಗೆ ತಿಳಿದಿರುವ ಎಲ್ಲಾ ಕ್ರಿಶ್ಚಿಯನ್ನರಿಗೆ ಈ ಸಂದೇಶವನ್ನು ಕಳುಹಿಸಿ.” ಎಂಬ ಬರಹವೊಂದನ್ನು ವಾಟ್ಸ್‌ಆಪ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. Hey this just came down through…

Read More

Fact Check: ಬಡ ಮಕ್ಕಳೊಂದಿಗೆ ರತನ್ ಟಾಟಾ ಊಟ ಮಾಡುತ್ತಿರುವ ಫೋಟೊ AI ರಚಿತವಾದದ್ದು

ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿಯಾದ ರತನ್ ಟಾಟಾ ಅವರ ನಿಧನದ ನಂತರ, ಅವರು ಬಡ ಮಕ್ಕಳೊಂದಿಗೆ ಊಟ ಮಾಡುತ್ತಿದ್ದಾರೆ ಎಂಬ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕಪ್ಪು-ಬಿಳುಪು ಫೋಟೋದಲ್ಲಿ ಯುವ ರತನ್ ಟಾಟಾ ನಗರದಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ ಎಂಬ ಚಿತ್ರವನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಚಿತ್ರಗಳಲ್ಲಿ ಹಲವಾರು ಅಸಂಗತೆಗಳು ಕಂಡುಬಂದಿವೆ.  ರತನ್ ಟಾಟಾ ಅವರ ಕಣ್ಣುಗಳು, ಕೈಗಳು ವಿರೂಪಗೊಂಡಿವೆ ಮತ್ತು ಚಿತ್ರಗಳಲ್ಲಿ ಎಲ್ಲಾ ವ್ಯಕ್ತಿಗಳ ಮುಖದ ಆವ ಭಾವಗಳು…

Read More
ಎಐ ಚಿತ್ರಗಳು

Fact Check: ರಾಮಾಯಣ ಕಾಲದ ಕುಂಭಕರ್ಣನ ದೈತ್ಯ ಖಡ್ಗ ಪತ್ತೆಯಾಗಿದೆ ಎಂದು ಎಐ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಖಡ್ಗ ಒಂದರ ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಖಡ್ಗವು ರಾಮಾಯಣ ಕಾಲದ ಕುಂಬಕರ್ಣನ ಖಡ್ಗ ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ರೀತಿಯ ಅನೇಕ ಪ್ರತಿಪಾದನೆಗಳನ್ನು ಕೆಲವು ಬಲಪಂಥೀಯರು ಹರಿಬಿಡುತ್ತಿದ್ದು ಆಸ್ಟ್ರೇಲಿಯಾ ದೇಶ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ “ಅಸ್ತ್ರಾಲಯ” ಎಂಬ ಪ್ರದೇಶವಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದೆ. ಬೃಹತ್ ಖಡ್ಗವನ್ನು ಹಂಚಿಕೊಂಡಿರುವ ಕೆಲವರು “ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕುಂಭಕರ್ಣನ ಖಡ್ಗ ಪತ್ತೆ…

Read More

Fact Check : ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಪಂಜಾಬಿನಲ್ಲಿ ಮಹಾರಾಜ ರಂಜಿತ್ ಸಿಂಗ್‌ರವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್ ಧ್ವಜವನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ಮಹಾರಾಜ ರಂಜಿತ್ ಸಿಂಗ್‌ರವರ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ಚಿತ್ರವನ್ನು ಸಾಮಾಜಿಕ‌ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಘಟನೆಯು ಪಂಜಾಬ್‌ನಲ್ಲಿ ನಡೆದಿದೆ ಎಂದು ಕೆಲವು ವರದಿಗಳು ಹೇಳುತ್ತಿದ್ದು, ಪ್ಯಾಲೆಸ್ಟೈನ್ ಬೆಂಬಲಿಗರು ಭಾರತದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. Xನ @TimesAlgebraIND ಎಂಬ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, “ಪ್ಯಾಲೆಸ್ಟೈನ್ ಪರ ಬೆಂಬಲಿಗರು ಪಂಜಾಬ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಮಹಾರಾಜ ರಂಜಿತ್ ಸಿಂಗ್ ಅವರು ಪಂಜಾಬ್‌ನಲ್ಲಿ ಅನೇಕ ಇಸ್ಲಾಮಿಕ್…

Read More