Fact Check : ಮಳೆಯಲ್ಲಿ ನಮಾಜ್ ಮಾಡುವ ವ್ಯಕ್ತಿಗೆ ಕೊಡೆ ಹಿಡಿಯುವ ಚಿತ್ರ ನೈಜ ಘಟನೆಯಲ್ಲ, ಸಿನಿಮಾ ದೃಶ್ಯ

ಮಳೆಯಲ್ಲಿ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತಿರುವಾಗ ಮತ್ತೊಬ್ಬ ವ್ಯಕ್ತಿ ಆತನಿಗೆ ಕೊಡೆ ಹಿಡಿದಿರುವ ಚಿತ್ರವನ್ನು ಅನೇಕ ಬಳಕೆದಾರರು ನೈಜ ಘಟನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

“ಪಕ್ಕದ ಕಟ್ಟಡದ ಪ್ಲಾಟ್‌ಫಾರ್ಮ್‌ನಲ್ಲಿಯೂ ಕುಳಿತುಕೊಳ್ಳಬಹುದಿತ್ತು, ಆದರೆ ನಾವು ಸಾಬೀತುಪಡಿಸಬೇಕಾದ ಅಂಶವೆಂದರೆ ಸಹೋದರತ್ವವನ್ನು ಯಾವಾಗಲೂ ಹೀಗೆ ಏಕಪಕ್ಷೀಯವಾಗಿ ನಿರ್ವಹಿಸಲಾಗಿದೆ..!” ಎಂಬ ಶಿರ್ಷಿಕೆಯೊಂದಿಗೆ  ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

 

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ಚಿತ್ರದ ಕುರಿತು ಸತ್ಯಾಂಶವನ್ನು ತಿಳಿದುಕೊಳ್ಳಲು, ಈ ಚಿತ್ರವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಪಂಜಾಬಿನ ಅರ್ದಾಸ್ ಸರ್ಬತ್ ದೇ ಭಲೇ ದಿ ಎಂಬ ಚಲನಚಿತ್ರದಲ್ಲಿ ವೈರಲ್‌ ಚಿತ್ರವನ್ನು ಇರುವ ದೃಶ್ಯ ಕಂಡುಬಂದಿದೆ. 2024ರ ಆಗಸ್ಟ್ 6ರಂದು ಹಂಚಿಕೊಳ್ಳಲಾದ ಪನೋರಮಾ ಮ್ಯೂಸಿಕ್‌ನ ಅಧಿಕೃತ YouTube ಚಾನಲ್‌ನಲ್ಲಿ ವೈರಲ್‌ ಚಿತ್ರಕ್ಕೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಈ ವೈರಲ್‌ ಚಿತ್ರದ ಕುರಿತು ಮತ್ತಷ್ಟು ಹುಡುಕಿದಾಗ, 2024ರ ಸೆಪ್ಟೆಂಬರ್ 12ರಂದು ಅಜಿತ್ ವೆಬ್‌ಟಿವಿಯಲ್ಲಿ ಅದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ದೃಶ್ಯವು ಅದೇ ಚಲನಚಿತ್ರದಲ್ಲಿ ಕಂಡುಬಂದಿದೆ ಎಂದು ಖಚಿತವಾಗಿದೆ.

2024ರ ಜೂನ್ 24ರಂದು ನಟ ಗುರುಪ್ರೀತ್ ಘುಗ್ಗಿ  ವೈರಲ್‌ ಚಿತ್ರಕ್ಕೆ ಸಂಬಂಧಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ನಮಾಜ್‌ ಮಾಡುತ್ತಿರುವ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಕೊಡೆ ಹಿಡಿರುವುದು ನೈಜ ಘಟನೆಯ ವೀಡಿಯೊ ಅಲ್ಲ. ಆ ಘಟನೆಯು ಅರ್ದಾಸ್ ಸರ್ಬತ್ ದೇ ಭಲೇ ದಿ ಎಂಬ ಪಂಜಾಬ ಚಲನಚಿತ್ರದ ವೀಡಿಯೊ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯಾಂಶವನ್ನು ತಿಳಿದುಕೊಳ್ಳಿ.


ಇದನ್ನು ಓದಿ :

Fact Check : ಭವಿಶ್ ಅಗರ್ವಾಲ್- ಕುನಾಲ್ ಕಮ್ರಾ ನಡುವಿನ ವಿವಾದದ ಹಿನ್ನೆಲೆಯಲ್ಲಿ ಶೋರೂಮ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವೀಡಿಯೊ ಹಳೆಯದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *