Fact Check : ಅಮಿತಾಬ್ ಬಚ್ಚನ್ ಕೀಲು ನೋವಿನ ಚಿಕಿತ್ಸೆ ಕುರಿತು ಮಾತನಾಡಿಲ್ಲ, ಇದು AI ರಚಿತ ವಿಡಿಯೋ

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಇಂಡಿಯಾ ಟಿವಿಯ ರಜತ್ ಶರ್ಮಾ ನಡುವಿನ ಸಂದರ್ಶನದ ವಿಡಿಯೋದಲ್ಲಿ, ದೀಪಕ್ ಚೋಪ್ರಾ ಎಂಬ ವ್ಯಕ್ತಿ ತನ್ನ ಕೀಲು ನೋವಿನ ಸಮಸ್ಯೆಯನ್ನುಹೇಳಿಕೊಂಡಾಗ ಬಚ್ಚನ್ ಮತ್ತು ಶರ್ಮಾ ಕೀಲು ನೋವಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವಿಡಿಯೋವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಆಡಿಯೋ ಮತ್ತು ದೃಶ್ಯಗಳ ನಡುವಿನ ಲಿಪ್-ಸಿಂಕಿಂಗ್‌ ಸಮಸ್ಯೆಗಳು ಕಂಡುಬಂದಿವೆ. ಮತ್ತು ಹಲವಾರು ಅಸಂಗತಿಗಳನ್ನು ವಿಡಿಯೋ ತೋರಿಸುತ್ತಿದೆ. ಈ ಕುರಿತು ಮತ್ತಷ್ಟು ಹುಡುಕಿದಾಗ, 2014ರ ಏಪ್ರಿಲ್ 12ರಂದು ಪ್ರಕಟಿಸಲಾದ ಇಂಡಿಯಾ ಟಿವಿಯ ಅಧಿಕೃತ YouTube ಚಾನಲ್‌ನಲ್ಲಿ ಮೂಲ ವಿಡಿಯೋ ಲಭಿಸಿದೆ.

ಈ ಇಂಡಿಯಾ ಟಿವಿಯ ವೈರಲ್ ವಿಡಿಯೋ ಕ್ಲಿಪ್‌ನ ವಿಭಾಗವು 13:40 ಮಾರ್ಕ್‌ನಲ್ಲಿ ಕಾಣಿಸುತ್ತದೆ. ವಿಡಿಯೋದಲ್ಲಿ, ಪತ್ರಕರ್ತ ರಜತ್ ಶರ್ಮಾ ಮತ್ತು ಅಮಿತಾಬ್ ಬಚ್ಚನ್‌ರವರು ಭೂತನಾಥ್ ರಿಟರ್ನ್ಸ್ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ ಹೊರತು ಎಲ್ಲಿಯೂ ಕೀಲು ನೋವಿನ ಬಗ್ಗೆ ಮಾತನಾಡಿಲ್ಲ.

ಎರಡೂ ವಿಡಿಯೋಗಳನ್ನು ಹೋಲಿಕೆ ಮಾಡಿದಾಗ ಒಂದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಆದರೆ, ಮೂಲ ವಿಡಿಯೋದಲ್ಲಿ ಕೀಲು ನೋವು ಅಥವಾ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸೆಗಳನ್ನು ನೀಡಿಲ್ಲ. ವೈರಲ್ ವಿಡಿಯೋವನ್ನು ಟ್ಯಾಂಪರ್ ಮಾಡಲಾಗಿದೆ ಎಂದು ಖಚಿತಪಡಿಸುತ್ತದೆ.

ಈ ವೈರಲ್‌ ವಿಡಿಯೋದ ಕುರಿತು ಮತ್ತಷ್ಟು ಹುಡುಕಿದಾಗ, TrueMedia ದ ಡೀಪ್‌ಫೇಕ್ ಡಿಟೆಕ್ಟರ್‌ನ್ನು ಬಳಸಿಕೊಂಡು ನಡೆಸಿದ ವಿಶ್ಲೇಷಣೆಯು ಕುಶಲತೆಯ ಬಲವಾದ ಪುರಾವೆಗಳನ್ನು ಬಹಿರಂಗಪಡಿಸಿದೆ, AI- ರಚಿತವಾದ ಆಡಿಯೋವನ್ನು ಸೂಚಿಸುವ 100% ವಿಶ್ವಾಸಾರ್ಹ ಸ್ಕೋರ್‌ನ್ನು ಹಿಂದಿರುಗಿಸುತ್ತದೆ. ಈ ಉಪಕರಣವು ಮುಖದ ವೈಶಿಷ್ಟ್ಯಗಳಲ್ಲಿ 99% AI- ಚಾಲಿತ ಬದಲಾವಣೆಗಳನ್ನು ಪತ್ತೆಹಚ್ಚಿದೆ. ವಿಡಿಯೋದಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ ಬಳಕೆಯನ್ನು ನಿಖರವಾಗಿ ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮಿತಾಬ್ ಬಚ್ಚನ್ ಮತ್ತು ರಜತ್ ಶರ್ಮಾ ಕೀಲು ನೋವಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎಂಬ ವಿಡಿಯೋ AI ರಚಿತವಾಗಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯಾಂಶಗಳನ್ನು ತಿಳಿಯುವುದು ಉತ್ತಮ.


ಇದನ್ನು ಓದಿ :

Fact Check : ಬಂಡೆಗಳ ಮೇಲೆ ಸಿಲುಕಿದ್ದ ಆನೆಯನ್ನು ಕ್ರೇನ್‌ನಿಂದ ರಕ್ಷಿಸಲಾಗಿದೆ ಎಂಬ ವಿಡಿಯೋ ನಿಜವಲ್ಲ, AI ರಚಿತವಾದದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *