Fact Check: RSS, BJP ಬಗ್ಗೆ ಪಾಕಿಸ್ತಾನದ ಇಸ್ಲಾಮಿಕ್ ಬೋಧಕ ಮಾತನಾಡಿದ್ದಾರೆಯೇ ಹೊರತು ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಅಲ್ಲ

ತಾಲಿಬಾನ್

ಸಾಂಪ್ರದಾಯಿಕ ಇಸ್ಲಾಮಿಕ್ ಉಡುಪನ್ನು ಧರಿಸಿದ ವ್ಯಕ್ತಿಯೊಬ್ಬ ಆರ್‌ಎಸ್ಎಸ್, ಬಿಜೆಪಿ ಮತ್ತು ಮರಾಠರ ಬಗ್ಗೆ ಮಾತನಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವೀಡಿಯೋದಲ್ಲಿರುವ ವ್ಯಕ್ತಿ ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ. “ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಯಾವುದೇ ದೇಶವು ಭಾರತದ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಬಿಜೆಪಿ ಮತ್ತು ಆರ್‌ಎಸ್ಎಸ್ ಅತ್ಯಂತ ಶಕ್ತಿಶಾಲಿ” ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಭಾರತದ ಮೇಲೆ ದಾಳಿ ಮಾಡಲು, ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿದ್ದಾರೆ ಎಂದು ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಂತರ್ಜಾಲದಲ್ಲಿ ಕೀವರ್ಡ್ ಹುಡುಕಾಟವನ್ನು ನಾವು ನಡೆಸಿದಾಗ, ಅದೇ ದೃಶ್ಯಗಳನ್ನು ಹೊಂದಿರುವ ವೀಡಿಯೊ ಒಂದು ನಮಗೆ ಲಭ್ಯವಾಯಿತು. ಈ ಯೂಟ್ಯೂಬ್ ವೀಡಿಯೊವನ್ನು 03 ಆಗಸ್ಟ್ 2021 ರಂದು ಅಪ್ಲೋಡ್ ಮಾಡಲಾಗಿದೆ. ವೈರಲ್ ವೀಡಿಯೊವನ್ನು ರಚಿಸಲು ಯೂಟ್ಯೂಬ್ ವೀಡಿಯೊವನ್ನು 0.53 ಟೈಮ್ ಸ್ಟಾಂಪ್ ನಲ್ಲಿ 3:31 ರವರೆಗೆ ಕತ್ತರಿಸಲಾಗಿದೆ. ಖಾಲಿದ್ ಮೆಹಮೂದ್ ಅಬ್ಬಾಸಿ ವೀಡಿಯೊದಲ್ಲಿದ್ದಾರೆ ಎಂದು ವೀಡಿಯೊದ ಶೀರ್ಷಿಕೆ ತೋರಿಸುತ್ತದೆ.

ಖಾಲಿದ್ ಅವರ ಅಧಿಕೃತ ಫೇಸ್‌ಬುಕ್ ಪುಟದ ಪ್ರಕಾರ, ಖಾಲಿದ್ ಪಾಕಿಸ್ತಾನದ ಇಸ್ಲಾಮಾಬಾದ್ ಮೂಲದ ಇಸ್ಲಾಮಿಕ್ ಬೋಧಕ. ಅವರು ತಂಝೀಮ್-ಎ-ಇಸ್ಲಾಮಿಯೊಂದಿಗೆ 30 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 2018 ರಲ್ಲಿ ತಂಝೀಮ್-ಎ-ಇಸ್ಲಾಮಿಯನ್ನು ತೊರೆದು, ಶುಭನ್-ಉಲ್-ಮುಸ್ಲಿಮೀನ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ (ಈ ವೀಡಿಯೊದ ವಿವರಣೆಯನ್ನು ಪರಿಶೀಲಿಸಿ). ಅವರು ಪ್ರಸ್ತುತ ಶುಭನ್-ಉಲ್-ಮುಸ್ಲಿಮೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಘಟನೆಗಳು ತಾಲಿಬಾನ್‌ಗೆ ಸಂಬಂಧಿಸಿವೆ ಎಂದು ಸಾಬೀತುಪಡಿಸುವ ಯಾವುದೇ ಮಾಹಿತಿಯನ್ನು ನಾವು ಅಂತರ್ಜಾಲದಲ್ಲಿ ಕಂಡುಹಿಡಿಯಲಾಗಲಿಲ್ಲ.

ಈ ವೀಡಿಯೊದಲ್ಲಿ, ಭಾರತದಲ್ಲಿ ಆರ್‌ಎಸ್ಎಸ್ ಮತ್ತು ಇತರ ನಿಕಟ ಸಂಘಟನೆಗಳ (ಸಂಘ ಪರಿವಾರ) ಆಲೋಚನೆಗಳು, ನೀತಿಗಳು ಮತ್ತು ಶಕ್ತಿ ಸಾಮರ್ಥ್ಯಗಳನ್ನು ಉಲ್ಲೇಖಿಸಲಾಗಿದೆ. ವೈರಲ್ ಹೇಳಿಕೆಗೆ ವ್ಯತಿರಿಕ್ತವಾಗಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ದೇಶವು ಭಾರತದ ಮೇಲೆ ದಾಳಿ ಮಾಡುವುದಿಲ್ಲ ಎಂದು ಅಬ್ಬಾಸಿ ಹೇಳುವುದಿಲ್ಲ. ಕಾಂಗ್ರೆಸ್ ಜಾತ್ಯತೀತ ಸರ್ಕಾರ ಎಂದು ಅವರು ಹೇಳಿದ್ದಾರೆ. ಆದರೆ ಭಾರತದ ಮೇಲೆ ದಾಳಿ ಮಾಡಲು ಬಿಜೆಪಿಯನ್ನು ಮೊದಲು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಅವರು ವೀಡಿಯೊದಲ್ಲಿ ಎಲ್ಲಿಯೂ ಹೇಳಿಲ್ಲ.

ಹೆಚ್ಚುವರಿಯಾಗಿ, ಈ ನಿಟ್ಟಿನಲ್ಲಿ ಅಬ್ಬಾಸಿ ಸೆಪ್ಟೆಂಬರ್ 2021 ರಲ್ಲಿ “ದಿ ಕ್ವಿಂಟ್” ನೊಂದಿಗೆ ಮಾತನಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ, ಅಲ್ಲಿ ಅವರು ತಾಲಿಬಾನ್ ಜೊತೆ ಯಾವುದೇ ಮೈತ್ರಿಯನ್ನು ನಿರಾಕರಿಸಿದ್ದಾರೆ.ನಾನು ತಾಲಿಬಾನ್ ಮುಖ್ಯ ಕಾರ್ಯದರ್ಶಿ ಎಂಬುದು ಸಂಪೂರ್ಣವಾಗಿ ಸುಳ್ಳು ಹೇಳಿಕೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈಗ ಅಧಿಕಾರಕ್ಕೆ ಬಂದಿದೆ, ಆದರೆ ಸುಮಾರು ಒಂದುವರೆ ವರ್ಷಗಳಷ್ಟು ಹಳೆಯದಾದ ವೀಡಿಯೊದಿಂದ ಕ್ಲಿಪ್‌ ಭಾಗವನ್ನು ಹೊರತೆಗೆಯಲಾಗಿದೆ. ನನಗೆ ತಾಲಿಬಾನ್ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ.” ಎಂದು ಹೇಳಿದ್ದಾರೆ.

ಆದ್ದರಿಂದ, 2019 ರಲ್ಲಿ ಪಾಕಿಸ್ತಾನದ ಇಸ್ಲಾಮಿಕ್ ಬೋಧಕ ಮಾಡಿದ ವೀಡಿಯೊವನ್ನು ಆರ್‌ಎಸ್ಎಸ್ ಮತ್ತು ಬಿಜೆಪಿ ಬಗ್ಗೆ ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಮಾತನಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಗೇಮಿಂಗ್ ವಿಡಿಯೋವನ್ನು ತೇಜಸ್ ವಿಮಾನದ ದೃಶ್ಯ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *