Fact Check | ಪವನ್ ಕಲ್ಯಾಣ್ ವಿರುದ್ಧದ ಪ್ರತಿಭಟನೆಯ ಈ ವಿಡಿಯೋ ಹಳೆಯದು

ಸಾಮಾಜಿಕ ಜಾಲತಾಣದಲ್ಲಿ “ತಿರುಮಲ ತಿರುಪತಿ ದೇವಸ್ಥಾನದ ಲಡ್ಡುಗಳ ವಿವಾದಕ್ಕೆ ಸಂಬಂಧಿಸಿದಂತೆ  ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರ ಬ್ಯಾನರ್ ಅನ್ನು ಹಿಡಿದು ಅದಕ್ಕೆ ಚಪ್ಪಲಿಯಲ್ಲಿ ಹೊಡೆದು ಜನ ಪ್ರತಿಭಟಿಸಿದ್ದಾರೆ. ಇದು ಡಿಸಿಎಂ ಪವನ್‌ ಕಲ್ಯಾಣ್‌ಗೆ ಒಂದು ಪಾಠವಾಗಬೇಕಿದೆ. ದೇವರ ವಿಚಾರದಲ್ಲಿ ರಾಜಕಾರಣ ಮಾಡುವ ಇಂತಹ ರಾಜಕಾರಣಿಗಳಿಗೆ ಮುಂದೆ ಜನ ಇದೇ ರೀತಿ ಮಾಡಲಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Vizag steel plant gurinchi 🤣🤣🤣 pic.twitter.com/d3l5Km7ooa — khairathabadhero (@kiarathabadhero) October…

Read More
ದೀಪೇಂದರ್ ಸಿಂಗ್ ಹೂಡ

Fact Check: ಹರಿಯಾಣದಲ್ಲಿ ಕಾಂಗ್ರೆಸ್‌ ಸೋತ ಬಳಿಕ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡ ಕಣ್ಣೀರು ಹಾಕಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದರೂ ಸಹ ಕಾಂಗ್ರೆಸ್ 36 ಸ್ಥಾನಕ್ಕಷ್ಟೇ ಸೀಮಿತವಾಗಿದೆ ಮತ್ತು ಬಿಜೆಪಿ 48 ಸೀಟುಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಹರಿಯಾಣ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡಾ ಕಣ್ಣೀರು ಹಾಕುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅನೇಕ ಎಕ್ಸ್ ಮತ್ತು ಫೇಸ್‌ಬುಕ್‌ ಬಳಕೆದಾರರು ಹೂಡಾ ಅವರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿ “#HaryanaElectionResult,…

Read More
ಇಸ್ರೇಲ್

Fact Check: ಲೆಬನಾನ್ ಜನರು ಇಸ್ರೇಲ್ ರಕ್ಷಣಾ ಪಡೆಯ ಸೈನಿಕರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಲೆಬನಾನ್ ಬೀದಿಗಳಲ್ಲಿ ಇಸ್ರೇಲ್ ರಕ್ಷಣಾ ಪಡೆಯ (ಐಡಿಎಫ್) ಸೈನಿಕರನ್ನು ಲೆಬನಾನ್ ನಾಗರಿಕರು ಸ್ವಾಗತಿಸುತ್ತಿರುವುದನ್ನು ತೋರಿಸುವ 1 ನಿಮಿಷ 35 ಸೆಕೆಂಡುಗಳ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. “ಲೆಬನಾನ್ ಜನರು… ಇಸ್ರೇಲಿ ಧ್ವಜಗಳನ್ನು ಹಾರಿಸಿದರು, ಸೈನಿಕರಿಗೆ ನೀರಿನ ಬಾಟಲಿಗಳು ಮತ್ತು ಉಪಾಹಾರವನ್ನು ನೀಡಿದರು ಮತ್ತು ನಮ್ಮನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಹೇಳಿದರು. ಆದರೆ ಮತ್ತೊಂದೆಡೆ, ಭಾರತದಲ್ಲಿ ಕೆಲವರು #HezbollahTerrorists ಗಳನ್ನು ತಮ್ಮ ತಂದೆಯರು ಎಂದು ಏಕೆ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ” ಎಂದು ಎಕ್ಸ್ ನಲ್ಲಿ ಬರೆದು…

Read More

Fact Check : ಅಮಿತಾಬ್ ಬಚ್ಚನ್ ಕೀಲು ನೋವಿನ ಚಿಕಿತ್ಸೆ ಕುರಿತು ಮಾತನಾಡಿಲ್ಲ, ಇದು AI ರಚಿತ ವಿಡಿಯೋ

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಇಂಡಿಯಾ ಟಿವಿಯ ರಜತ್ ಶರ್ಮಾ ನಡುವಿನ ಸಂದರ್ಶನದ ವಿಡಿಯೋದಲ್ಲಿ, ದೀಪಕ್ ಚೋಪ್ರಾ ಎಂಬ ವ್ಯಕ್ತಿ ತನ್ನ ಕೀಲು ನೋವಿನ ಸಮಸ್ಯೆಯನ್ನುಹೇಳಿಕೊಂಡಾಗ ಬಚ್ಚನ್ ಮತ್ತು ಶರ್ಮಾ ಕೀಲು ನೋವಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವಿಡಿಯೋವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಆಡಿಯೋ ಮತ್ತು ದೃಶ್ಯಗಳ ನಡುವಿನ ಲಿಪ್-ಸಿಂಕಿಂಗ್‌ ಸಮಸ್ಯೆಗಳು ಕಂಡುಬಂದಿವೆ. ಮತ್ತು ಹಲವಾರು…

Read More

Fact Check : ಐಶ್ವರ್ಯ ರೈ, ಅಮಿತಾಬ್ ಬಚ್ಚನ್ ದಂಪತಿ ದುರ್ಗಾ ಪೂಜೆಗೆ ಆಗಮಿಸಿದ್ದರು ಎಂದು ನಕಲಿ ಫೋಟೋ ಹಂಚಿಕೆ

ಐಶ್ವರ್ಯಾ ರೈ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರೊಂದಿಗೆ ಐಶ್ವರ್ಯಾ ರೈ ಇರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಈ ಚಿತ್ರವನ್ನು ಮೂವರು ದುರ್ಗಾ ಪೂಜೆ ಮಾಡುವಾಗ ತೆಗೆಯಲಾಗಿದೆ ಎಂಬ ಉಲ್ಲೇಖದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ವಾಸ್ತವವಾಗಿ, ವೈರಲ್ ಆಗುತ್ತಿರುವ ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಮತ್ತು ಐಶ್ವರ್ಯಾ ಅವರ ಚಿತ್ರಗಳನ್ನು ಎಡಿಟ್ ಮಾಡಲಾಗಿದೆ. ಮೂಲ ಚಿತ್ರವು ಸೋನಂ ಕಪೂರ್ ಮತ್ತು…

Read More

Fact Check : ಪಾಕಿಸ್ತಾನದಲ್ಲಿ ಝಾಕಿರ್ ನಾಯಕ್‌ರಿಗೆ ಉಡುಗೊರೆಯಾಗಿ ಇಮ್ರಾನ್ ಖಾನ್ ಫೋಟೋ ಫ್ರೇಮ್ ನೀಡಲಾಗಿದೆ ಎಂಬುದು ಸುಳ್ಳು

ವಿವಾದಿತ ಇಸ್ಲಾಮಿ ವಿದ್ವಾಂಸ ಡಾ. ಝಾಕಿರ್ ನಾಯ್ಕ್(Zakir Naik) ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವೈರಲ್ ಚಿತ್ರದಲ್ಲಿ, ಪಾಕಿಸ್ತಾನದ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಅವರೊಂದಿಗೆ ಇರುವುದನ್ನು ಕಾಣಬಹುದಾಗಿದ್ದು, ಮೌಲಾನಾ ಫಜ್ಲುರ್ ರೆಹಮಾನ್‌ರವರು ಡಾ ಝಾಕಿರ್ ನಾಯ್ಕ್ ಅವರಿಗೆ ಉಡುಗೊರೆಯಾಗಿ ಇಮ್ರಾನ್ ಖಾನ್‌ರವರ ಫೋಟೋ ಫ್ರೇಮ್ ನೀಡುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ಫೋಟೋವನ್ನು ನಿಜವೆಂದು ಪರಿಗಣಿಸಿ ಸಾಮಟಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಪೋಸ್ಟ್ ಅನ್ನು…

Read More

Fact Check | ವೈರಲ್ ಆಗಿರುವ ಈ ಚಿತ್ರ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದಲ್ಲ

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಮಹಿಳೆ ಮತ್ತು ಮಗುವೊಂದು ಕಾಣಿಸಿಕೊಂಡಿದ್ದು, ಇದನ್ನು ಬಳಸಿಕೊಂಡು ಸಾಕಷ್ಟು ಮಂದಿ ಈ ವೈರಲ್ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಪರಿಶ್ರಮದ ನಂತರ ಎಪಿಜೆ ಅಬ್ದುಲ್ ಕಲಾಂ ಅವರ ಈ ಫೋಟೋ ಲಭ್ಯವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗಾಗಿ ಈ ಫೋಟೋ ಸಾಕಷ್ಟು ವೈರಲ್‌ ಕೂಡ ಆಗಿದೆ ಸಂಚಲನ ಮೂಡಿಸಿರುವ ಈ ಫೋಟೋ 80-90 ರ ದಶಕದಲ್ಲಿ ತೆಗೆದ ಚಿತ್ರವಾಗಿದೆ…

Read More

Fact Check : ಬಂಡೆಗಳ ಮೇಲೆ ಸಿಲುಕಿದ್ದ ಆನೆಯನ್ನು ಕ್ರೇನ್‌ನಿಂದ ರಕ್ಷಿಸಲಾಗಿದೆ ಎಂಬ ವಿಡಿಯೋ ನಿಜವಲ್ಲ, AI ರಚಿತವಾದದ್ದು

ಪರ್ವತದ ಕಿರಿದಾದ ಬಂಡೆಯ ಮೇಲೆ ಸಿಲುಕಿರುವ ದೈತ್ಯಾಕಾರದ ಆನೆಯನ್ನು ಕ್ರೇನ್ ಮೂಲಕ ರಕ್ಷಿಸುವುದನ್ನು ಬರಿ ಕಲ್ಪಿಸಿಕೊಂಡರೆ ಭಯಾನಕ ದೃಶ್ಯದಂತಿದೆ. ಇನ್ನು ಅದು ನಿಜವಾದ ಘಟನೆಯಾದರೆ ಅದು ಕಲ್ಪನೆಗೂ ಮೀರಿದ  ಅಮೋಘವಾದ ದೃಶ್ಯ! ಎಂದು ಬರೆದು  ಫೇಸ್‌ಬುಕ್ ಬಳಕೆದಾರರು  “ಅಮೇರಿಕದ ಪೊಲೀಸರು ಕಲ್ಲಿನ ಪರ್ವತದಲ್ಲಿ ಸಿಲುಕಿಕೊಂಡಿದ್ದ  ಆನೆಯನ್ನು ರಕ್ಷಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋದ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು,  ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು  ರಿವರ್ಸ್ ಇಮೇಜ್‌…

Read More

Fact Check : ಫ್ಲಿಪ್‌ಕಾರ್ಟ್‌ನಲ್ಲಿ 99% ರಿಯಾಯತಿ ಎಂಬ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಹಾವಳಿ, ಗ್ರಾಹಕರು ವಂಚನೆಗೊಳಗಾಗದಿರಿ

ಬಿಗ್‌ ಬಿಲಿಯನ್‌ ಸೇಲ್‌ ಹೆಸರಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿದಂತೆ ಹಲವು ಅಪ್ಲಿಕೇಷನ್ಗಳು ಆಗಾಗ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ, ” ಫ್ಲಿಪ್‌ಕಾರ್ಟ್‌ ಶೇಕಡಾ 99ಕ್ಕಿಂತ ಹೆಚ್ಚು ರಿಯಾಯಿತಿ ನೀಡುತ್ತಿದೆ. ಇದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ ಆಫರ್‌!!!” ಎಂದು ರೂ 80,000 ಆಪಲ್ ವಾಚ್ ರೂ 500 ಕ್ಕಿಂತ ಕಡಿಮೆ; ದುಬಾರಿ ಕ್ಯಾನನ್ ಡಿಎಸ್ಎಲ್ಆರ್ಗಳು, ಎಲ್ಜಿ ವಾಷಿಂಗ್ ಮೆಷಿನ್ಗಳು ಮತ್ತು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಇತರೆ ದುಬಾರಿ ವಸ್ತುಗಳನ್ನು ಉಲ್ಲೇಖಿಸಿ ವೆಬ್‌ಸೈಟ್‌ ಲಿಂಕನ್ನು ಹಂಚಿಕೊಳ್ಳಲಾಗುತ್ತಿದೆ.   ಅಕ್ಷರಶಃ…

Read More

Fact Check | ಇಸ್ರೇಲ್ ಅಕ್ರಮ ರಾಷ್ಟ್ರವೆಂದು ಅಂತರರಾಷ್ಟ್ರೀಯ ನ್ಯಾಯಾಲಯ ಘೋಷಿಸಿಲ್ಲ

ಪ್ಯಾಲೆಸ್ತೀನ್‌ನ ವಿದೇಶಾಂಗ ಸಚಿವ ರಿಯಾದ್ ಅಲ್-ಮಲಿಕಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ, “ರಿಯಾದ್ ಅಲ್-ಮಲಿಕಿ ಅವರು ಇಸ್ರೇಲ್ ಅನ್ನು ಕಾನೂನು ಬಾಹಿರ ರಾಷ್ಟ್ರವೆಂದು ಘೋಷಿಸುವ ಬಗ್ಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಸರಿಯಾಗಿ ನೆನಪಿಟ್ಟುಕೊಳ್ಳಿ ಈ ಆದೇಶದ ಪ್ರಕಾರ ಇನ್ನು ಮುಂದೆ ಇಸ್ರೇಲ್‌ ಅಧಿಕೃತ ರಾಷ್ಟ್ರವಾಗಿ ಇರುವುದಿಲ್ಲ. ಇದನ್ನು ಅಂತರಾಷ್ಟ್ರೀಯ ನ್ಯಾಯಾಲಯವೇ ಹೇಳಿದೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. अंतर्राष्ट्रीय न्यायालय द्वारा इज़राइल को एक अवैध देश घोषित…

Read More