Fact Check | ಮುಸ್ಲಿಂ ದಂಪತಿಗಳು ತಮ್ಮ ಮಕ್ಕಳನ್ನೇ ಮದುವೆಯಾಗಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕೊಲಾಜ್ ಫೋಟೋವೊಂದು ವೈರಲ್‌ ಆಗಿದೆ. ಇದರ ಒಂದು ಬದಿಯಲ್ಲಿ ವಯಸ್ಕ ವ್ಯಕ್ತಿಯೊಬ್ಬ ಬಾಲಕಿಯೊಂದಿಗೆ ಹೂವಿನ ಮಾಲೆಯನ್ನು ಧರಿಸಿ ನಿಂತಿರುವುದು ಕಂಡು ಬಂದರೆ ಮತ್ತೊಂದು ಕಡೆ ವಯಸ್ಕ ಮಹಿಳೆಯೊಬ್ಬರು ಬಾಲಕನೊಂದಿಗೆ ನಿಂತಿರುವುದು ಕಂಡು ಬಂದಿದೆ. ಈ ಫೋಟೋವನ್ನು ಹಂಚಿಕೊಂಡು ಸಾಕಷ್ಟು ಮಂದಿ ” ತಂದೆಯೊಬ್ಬ ಮಗಳನ್ನು ಮದುವೆಯಾಗಿದ್ದಾನೆ. ಇದರಿಂದ ಮುನಿಸಿಕೊಂಡು ಆತನ ಹೆಂಡತಿ ತನ್ನ ಮಗನನ್ನೇ ಮದುವೆಯಾಗಿದ್ದಾಳೆ. ಇಸ್ಲಾಂ ಧರ್ಮ ಪವಿತ್ರ ಎಂದು ಭಾವಿಸುವವರು ಇದನ್ನು ನೋಡಲೇ ಬೇಕು” ಎಂದು ಪೋಸ್ಟ್‌ ಮಾಡಲಾಗುತ್ತಿದೆ.

ಇದು ಸುಳ್ಳು ಸುದ್ದಿಯಾಗಿರುವುದರಿಂದ ಸಂತ್ರಸ್ತರ ಗುರುತನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಬಹಿರಂಗ ಪಡಿಸುತ್ತಿಲ್ಲ..

ವೈರಲ್‌ ಪೋಸ್ಟ್‌ ನೋಡಿದ ಹಲವು ಮಂದಿ ಈ ಘಟನೆ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್‌ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಮಂದಿ ಇಸ್ಲಾಂ ಧರ್ಮದ ಕುರಿತು ತಮ್ಮ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಕೂಡ ಈ ಘಟನೆ ನಿಜವೆ ಅಥವಾ ಸುಳ್ಳಿನಿಂದ ಕೂಡಿದೆಯೇ ಎಂಬ ಪ್ರಶ್ನೆಗಳು ಮೂಡಲು ಆರಂಭಿಸಿವೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಇದು ಸುಳ್ಳು ಸುದ್ದಿಯಾಗಿರುವುದರಿಂದ ಸಂತ್ರಸ್ತರ ಗುರುತನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಬಹಿರಂಗ ಪಡಿಸುತ್ತಿಲ್ಲ..

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಚಿತ್ರದ ಮೂಲವನ್ನು ಹುಡುಕಲು ಗೂಗಲ್‌ ರಿವರ್ಸ್‌ ಇಮೇಜ್‌ ಅನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು.  ಈ ವೇಳೆ ಇಸ್ಲಾಮಿಕ್ ಬೋರ್ಡ್.ಕಾಮ್ ವೆಬ್‌ಸೈಟ್‌ನಲ್ಲಿನ ವರದಿಯೊಂದು ಕಂಡು ಬಂದಿದೆ. ಅದರ ಪ್ರಕಾರ ಈ ಫೋಟೋ ಕುರ್‌ಆನ್‌ ಪಠಣವನ್ನು ಪೂರ್ಣಗೊಳಿಸಿದ ಕಾರ್ಯಕ್ರಮದ್ದಾಗಿದೆ ಎಂದು ತಿಳಿದು ಬಂದಿದೆ.

                                    ಇದು ಸುಳ್ಳು ಸುದ್ದಿಯಾಗಿರುವುದರಿಂದ ಸಂತ್ರಸ್ತರ ಗುರುತನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಬಹಿರಂಗ ಪಡಿಸುತ್ತಿಲ್ಲ..

ವೈರಲ್ ಚಿತ್ರವು ಕುರ್‌ಆನ್‌ ಪಠಣವನ್ನು ಪೂರ್ಣಗೊಳಿಸಿದ ಹುಡುಗಿಯರ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದು, ಇದರಲ್ಲಿ ಕಂಡು ಬಂದ ವ್ಯಕ್ತಿ ಹುಡುಗಿಯ ತಂದೆಯಾಗಿದ್ದಾನೆ. ಇಲ್ಲಿ ತಂದೆ ಮತ್ತು ಮಗಳು  ಒಟ್ಟಿಗೆ ಕುರ್‌ಆನ್‌ ಪಠಣವನ್ನು ಪೂರ್ಣಗೊಳಿಸಿದ ನಂತರ ಇಬ್ಬರೂ ಹಫೀಜ್-ಎ-ಕುರ್‌ಆನ್‌ ಆದರು. ಈ ವೇಳೆ ವೈರಲ್‌ ಚಿತ್ರವನ್ನು ತೆಗೆಯಲಾಗಿದೆ. ಈ ಫೋಟೋ 2012ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಫೋಟೋವನನೇ ಮತ್ತೆ 23 ಸೆಪ್ಟೆಂಬರ್ 2018 ರಂದು ‘ISLAM’  ಎಂಬ ಫೇಸ್‌ಬುಕ್‌ ಪೇಜ್‌ ಕೂಡ ಹಂಚಿಕೊಂಡಿದ್ದು, ತಂದೆ ಮತ್ತು ಮಗಳು ಇಬ್ಬರೂ ಒಟ್ಟಿಗೆ ಕುರ್‌ಆನ್‌ ಪಠಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಇಲ್ಲಿಯೂ ಉಲ್ಲೇಖಿಸಿದ್ದಾರೆ.

ಇದು ಸುಳ್ಳು ಸುದ್ದಿಯಾಗಿರುವುದರಿಂದ ಸಂತ್ರಸ್ತರ ಗುರುತನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಬಹಿರಂಗ ಪಡಿಸುತ್ತಿಲ್ಲ..

ಇದರ ನಂತರ ಎರಡನೇ ಫೋಟೋ ಕುರಿತು ಪರಿಶೀಸಿದಾಗ ಮೊದಲ ಫೋಟೋದಲ್ಲಿ ವ್ಯಕ್ತಿ ಮತ್ತು ಮಹಿಳೆ ಗಂಡ ಹೆಂಡತಿಯಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನೂ ಈ ಫೋಟೋವನ್ನು ಪರಿಶೀಲನೆ ನಡೆಸಲು ನಾವು ಮುಂದಾದಗ,ನಮಗೆ ವೈರಲ್‌ ಫೋಟೋ  31 ಜನವರಿ 2020 ರಂದು ಪೋಸ್ಟ್ ಮಾಡಲಾದ Facebook ಪುಟ Poshto songs s ನಲ್ಲಿ ಕಂಡುಬಂದಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಇದು ಮಗ ಕುರ್‌ಆನ್‌ ಪಠಣ ಮುಗಿಸಿದ ಸಂದರ್ಭಕ್ಕೆ ಸಂಬಂಧಿಸಿದ ಚಿತ್ರವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ತಾಯಿ ತನ್ನ ಮಗನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಆತನೊಂದಿಗೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಇದು ಸುಳ್ಳು ಸುದ್ದಿಯಾಗಿರುವುದರಿಂದ ಸಂತ್ರಸ್ತರ ಗುರುತನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಬಹಿರಂಗ ಪಡಿಸುತ್ತಿಲ್ಲ..

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ತಂದೆಯೊಬ್ಬ ಮಗಳನ್ನು ಮದುವೆಯಾಗಿದ್ದು, ಇದರಿಂದ ಮುನಿಸಿಕೊಂಡು ಆತನ ಹೆಂಡತಿ ತನ್ನ ಮಗನನ್ನೇ ಮದುವೆಯಾಗಿದ್ದಾಳೆ ಎಂಬುದು ಸುಳ್ಳು. ಎರಡೂ ಕೂಡ ಕೊಲಾಜ್‌ ಫೋಟೋಗಳಾಗಿವೆ. ವೈರಲ್‌ ಫೋಟೋಗಳು ತಂದೆ ಮತ್ತು ಮಗಳು ಒಟ್ಟಿಗೆ ಕುರ್‌ಆನ್‌ ಪಠಣವನ್ನು ಪೂರ್ಣಗೊಳಿಸಿದ್ದ ಸಂದರ್ಭದ್ದಾಗಿದೆ. ಮತ್ತೊಂದು ಫೋಟೋ ಮಗ ಕುರ್‌ಆನ್‌ ಪಠಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಆತನ ತಾಯಿ ಪುತ್ರನೊಂದಿಗೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಸಂಬಂಧಿಸಿದೆ. ಹಾಗಾಗಿ ವೈರಲ್‌ ಪೋಸ್ಟ್‌ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ.


ಇದನ್ನೂ ಓದಿ : Fact Check |‌ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮುಖಂಡನ ಮೇಲೆ ಹಿಂದೂಗಳ ಗುಂಪಿನಿಂದ ದಾಳಿ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *