ದೆಹಲಿ

Fact Check: ದೆಹಲಿಯಲ್ಲಿ ಚಾಕು ಹಿಡಿದು ಯುವಕರು ಮಹಿಳೆಗೆ ಬೆದರಿಕೆ ಹಾಕುವ ವಿಡಿಯೋವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ದೆಹಲಿಯ ಸುಲ್ತಾನ್ಪುರಿಯ ಜನನಿಬಿಡ ಪ್ರದೇಶದಲ್ಲಿ ಕೆಲವು ಹದಿಹರೆಯದವರು ಮಹಿಳೆಗೆ ಚಾಕುವಿನಿಂದ ಬೆದರಿಕೆ ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಅಪರಾಧಕ್ಕೆ ಮುಸ್ಲಿಂ ಹುಡುಗರು ಕಾರಣ ಎಂದು ಅನೇಕ ಬಳಕೆದಾರರು ಆರೋಪಿಸಿ ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದ್ದು, ““ये वीडियो सुल्तान पुरी F3 दिल्ली की है इसे वाईरल कर दो ताकि ये सभी बदमास पकड़े जाए। 4 मुस्लिम लड़कों के सामने सैंकड़ों हिजड़े नामर्द…

Read More
ಸಿಯಾರಾಮ್ ಬಾಬ

Fact Check: 188 ವರ್ಷದ ವ್ಯಕ್ತಿ ಗುಹೆಯಲ್ಲಿ ಪತ್ತೆ ಎಂಬುದು ನಿಜವಲ್ಲ, ಇಲ್ಲಿದೆ ವಿವರ

ಇತ್ತೀಚೆಗೆ ಗುಹೆಯಲ್ಲಿ 188 ವರ್ಷದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ ಎಂಬ ವೀಡಿಯೋ ಒಂದು ಸಾಕಷ್ಟು ವೈರಲ್ ಆಗಿದ್ದು. ಈ ವೀಡಿಯೋದಲ್ಲಿ ಜನರು ವೃದ್ಧರಿಗೆ ನಡೆಯಲು ಸಹಾಯ ಮಾಡುವುದನ್ನು ನೋಡಬಹುದು. ಎಕ್ಸ್‌(ಟ್ವಿಟರ್) ನಲ್ಲಿ ಈ ವಿಡಿಯೋ ತುಣುಕು ಸಾಕಷ್ಟು ವೈರಲ್ ಆಗಿದ್ದು “ಇವರು ಸಂತ ಸಿಯಾರಾಮ್ ಬಾಬಾ, ಹನುಮಾನ್ ಜಿಯ ಮಹಾನ್ ಭಕ್ತ. ಬಾಬಾ ಅವರ ವಯಸ್ಸು 121 ವರ್ಷಗಳು, ಈ ವಯಸ್ಸಿನಲ್ಲೂ ಬಾಬಾ ಕನ್ನಡಕವಿಲ್ಲದೆ 16-18 ಗಂಟೆಗಳ ಕಾಲ ನಿರಂತರವಾಗಿ ರಾಮಾಯಣವನ್ನು ಓದುತ್ತಾರೆ. ಮತ್ತು ತಮ್ಮದೇ ಆದ ಆಹಾರವನ್ನು…

Read More

Fact Check | ದೆಹಲಿಯ ರಸ್ತೆಯಲ್ಲಿ ಯುವಕನಿಂದ ಬಾಲಕಿಗೆ ಕಿರುಕುಳ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ, ಬಾಲಕಿಯೊಬ್ಬಳು ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಹೋಗುತ್ತಿರುತ್ತಾಳೆ. ಆಕೆಯ ಹಿಂಬದಿಯಿಂದ ಬಂದ ಬೈಕ್‌ ಸವಾರನೊಬ್ಬ ಬಾಲಕಿಯನ್ನು ಮುಂದಕ್ಕೆ ತೆರಳದಂತೆ ತನ್ನ ಬೈಕಿನಲ್ಲೇ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ. ಈತನನ್ನು ಜನ ಸಾಮಾನ್ಯರು ತಡೆದು ವಿಚಾರಿಸಿದಾಗ ನನ್ನ ತಂದೆ ಅಧ್ಯಕ್ಷರು, ನಾನು ಯಾವ ಹುಡುಗಿಯನ್ನು ಬೇಕಾದರೂ ಕೀಟಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದು ಇಂದಿನ ದೆಹಲಿಯ ದುಸ್ಥಿತಿ” ಎಂದು ವಿಡಿಯೋವೊಂದನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. चोरी और ऊपर से सीना ज़ोरी, इसे…

Read More

Fact Check : ಭವಿಶ್ ಅಗರ್ವಾಲ್- ಕುನಾಲ್ ಕಮ್ರಾ ನಡುವಿನ ವಿವಾದದ ಹಿನ್ನೆಲೆಯಲ್ಲಿ ಶೋರೂಮ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವೀಡಿಯೊ ಹಳೆಯದು

ಓಲಾ ಸಿಇಒ ಭವಿಶ್ ಅಗರ್ವಾಲ್ ಮತ್ತು ಹಾಸ್ಯಗಾರ ಕುನಾಲ್ ಕಮ್ರಾ ನಡುವೆ ಟ್ವಿಟರ್‌ನಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ , ಓಲಾದ ಅತೃಪ್ತ ಗ್ರಾಹಕರು ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕರ್ನಾಟಕದಲ್ಲಿ ಓಲಾದ ಅತೃಪ್ತ ಗ್ರಾಹಕರು ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ, ಕಾರಣವೆಂದರೆ ಕಂಪನಿಯು ತಮ್ಮ ವಾಹನಗಳಿಗೆ ತಿಂಗಳುಗಟ್ಟಲೆ ಸೇವೆ ಸಲ್ಲಿಸುವಲ್ಲಿ ವಿಫಲವಾಗಿದೆ. ಇದರ ಮಧ್ಯೆ, ಭವಿಶ್ ಅಗರ್ವಾಲ್ ಅವರು ಸಾರ್ವಜನಿಕವಾಗಿ ಸತ್ಯವನ್ನು ಬಹಿರಂಗಪಡಿಸಿ, ಕುನಾಲ್ ಕಮ್ರಾರನ್ನು ಅಪಹಾಸ್ಯ ಮಾಡಿದ್ದಾರೆ….

Read More

Fact Check | ರಣದೀಪ್ ಸಿಂಗ್ ಸುರ್ಜೇವಾಲಾ ಬ್ರಾಹ್ಮಣರನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದಾರೆ ಎಂಬುದು ಸುಳ್ಳು

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಕಾಂಗ್ರೆಸ್‌ ಸಂಸದ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬ್ರಾಹ್ಮಣರನ್ನು ಕೊಲ್ಲಲು ಕರೆ ನೀಡಿದ್ದಾನೆ. ದೇಶದಲ್ಲಿ ಬ್ರಾಹ್ಮಣರ ನರಮೇಧ ನಡೆಸಲು ಕಾಂಗ್ರೆಸ್‌ ಬಹುದೊಡ್ಡ ಸಂಚು ರೂಪಿಸಿದೆ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Breaking news बहुत खूब सुरजेवाला!वायरल वीडियो*कांग्रेस के राज्यसभा…

Read More
ಸಮಾಜವಾದಿ ಪಕ್ಷದ ಶಾಸಕ

Fact Check: ಬಿಜೆಪಿ ಆಡಳಿತ ಕೊನೆಗೊಳ್ಳುತ್ತದೆ ಎಂದು ಎಚ್ಚರಿಸಿದ ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್ ಅಲಿ ಅವರ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಮುಸ್ಲಿಂ ಜನಸಂಖ್ಯೆ ಹೆಚ್ಚಾದಂತೆ ಬಿಜೆಪಿ ಆಡಳಿತ ಕೊನೆಗೊಳ್ಳುತ್ತದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಮೆಹಬೂಬ್ ಅಲಿ ಎಚ್ಚರಿಕೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವೈರಲ್ ಆಗುತ್ತಿದೆ. “ಈಗ ನಿಮ್ಮ ಆಡಳಿತ ಕೊನೆಗೊಳ್ಳುತ್ತದೆ” ಎಂದು ಅವರು ಹೇಳುತ್ತಾರೆ ಮತ್ತು 2027 ರ ವೇಳೆಗೆ ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ನಿಜವಾಗಿಯೂ ಮೆಹಬೂಬ್ ಅಲಿಯವರು ಈ ಎಚ್ಚರಿಕೆ ನೀಡಿದ್ದಾರೆಯೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು.  ಫ್ಯಾಕ್ಟ್‌ ಚೆಕ್:…

Read More

Fact Check : ಯುಪಿ CMO ಮೇಲೆ ದಾಳಿ ಎಂದು ನೋಯ್ಡಾದ ಬಿಜೆಪಿ ನಾಯಕನನ್ನು ಥಳಿಸಲಾದ ವೀಡಿಯೊ ಹಂಚಿಕೆ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜನರ ಗುಂಪೊಂದು ಚೀಫ್ ಮೆಡಿಕಲ್ ಆಫೀಸರ್‌ನನ್ನು ಹಿಂಬಾಲಿಸಿ ಥಳಿಸಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಫ್ಯಾಕ್ಟ್‌ ಚೆಕ್‌ : ಈ ವೈರಲ್ ವೀಡಿಯೊದ ಸತ್ಯಾಂಶಗಳನ್ನು ತಿಳಿದುಕೊಳ್ಳಲು, ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಈ ಹಿಂದೆ ಟ್ವಿಟರ್‌ನಲ್ಲಿ  ಹಂಚಿಕೊಂಡ ವೀಡಿಯೊ ಲಭಿಸಿದೆ. ಈ ವೀಡಿಯೊ ಮಣಿಪುರದ ಸಮಸ್ಯೆಗೆ ಸಂಬಂಧಿಸಿದ ಘಟನೆಯಾಗಿದ್ದು, ವೈರಲ್‌ ವೀಡಿಯೊದ ತುಣುಕನ್ನು ಹೋಲುತ್ತದೆ. ಮಣಿಪುರದ ಸಮಸ್ಯೆಯ ಚರ್ಚೆಯ ವೇಳೆ ಗ್ರೇಟರ್ ನೋಯ್ಡಾದ ಬಿಜೆಪಿ ನಾಯಕನೊಬ್ಬನ ಮೇಲೆ ಹಲ್ಲೆ…

Read More

Fact Check | ಮುಸ್ಲಿಂ ದಂಪತಿಗಳು ತಮ್ಮ ಮಕ್ಕಳನ್ನೇ ಮದುವೆಯಾಗಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕೊಲಾಜ್ ಫೋಟೋವೊಂದು ವೈರಲ್‌ ಆಗಿದೆ. ಇದರ ಒಂದು ಬದಿಯಲ್ಲಿ ವಯಸ್ಕ ವ್ಯಕ್ತಿಯೊಬ್ಬ ಬಾಲಕಿಯೊಂದಿಗೆ ಹೂವಿನ ಮಾಲೆಯನ್ನು ಧರಿಸಿ ನಿಂತಿರುವುದು ಕಂಡು ಬಂದರೆ ಮತ್ತೊಂದು ಕಡೆ ವಯಸ್ಕ ಮಹಿಳೆಯೊಬ್ಬರು ಬಾಲಕನೊಂದಿಗೆ ನಿಂತಿರುವುದು ಕಂಡು ಬಂದಿದೆ. ಈ ಫೋಟೋವನ್ನು ಹಂಚಿಕೊಂಡು ಸಾಕಷ್ಟು ಮಂದಿ ” ತಂದೆಯೊಬ್ಬ ಮಗಳನ್ನು ಮದುವೆಯಾಗಿದ್ದಾನೆ. ಇದರಿಂದ ಮುನಿಸಿಕೊಂಡು ಆತನ ಹೆಂಡತಿ ತನ್ನ ಮಗನನ್ನೇ ಮದುವೆಯಾಗಿದ್ದಾಳೆ. ಇಸ್ಲಾಂ ಧರ್ಮ ಪವಿತ್ರ ಎಂದು ಭಾವಿಸುವವರು ಇದನ್ನು ನೋಡಲೇ ಬೇಕು” ಎಂದು ಪೋಸ್ಟ್‌ ಮಾಡಲಾಗುತ್ತಿದೆ. ವೈರಲ್‌ ಪೋಸ್ಟ್‌…

Read More

Fact Check |‌ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮುಖಂಡನ ಮೇಲೆ ಹಿಂದೂಗಳ ಗುಂಪಿನಿಂದ ದಾಳಿ ಎಂಬುದು ಸುಳ್ಳು

ಇಮಾಮ್ ಅಂದ್ರೆ ಮುಸ್ಲಿಂ ಧಾರ್ಮಿಕ ಮುಖಂಡ ತನ್ನ ವಿದ್ಯಾರ್ಥಿಗಳಿಗೆ ಕುರ್‌ಆನ್‌ ಪಟ್ಟಣವನ್ನು ಕಲಿಸುತ್ತಿದ್ದಾಗ ಅಲ್ಲಿಗೆ ಬಂದಂತಹ ಹಿಂದೂಗಳ ಗುಂಪು ಈತನ ಮೇಲೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದೆ. ಆದರೆ ಅದೃಷ್ಟವಶತ್ ಆತ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. मेरठ के थाना लिसाड़ी गेट में मिलन पैलेस के पास कासमी मस्जिद के इमाम को मस्जिद में घुसकर गोली…

Read More