Fact Check : ರತನ್ ಟಾಟಾರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದು ಸುಳ್ಳು

ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ ಎಂದು ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  

ಫ್ಯಾಕ್ಟ್‌ ಚೆಕ್:‌

ಈ ವೈರಲ್‌ ಪೋಸ್ಟರ್‌ನ ಕೀವರ್ಡ್‌ಗಳನ್ನು ಬಳಸಿಕೊಂಡು Googleನಲ್ಲಿ ಹುಡುಕಿದಾಗ, ರತನ್ ಟಾಟಾರವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಹಲವಾರು ಪ್ರಮುಖ ಸುದ್ದಿವಾಹಿನಿಗಳ ವರದಿಗಳು ಲಭಿಸಿವೆ. ಈ ಎಲ್ಲ ವರದಿಗಳಲ್ಲಿ ಹೆಚ್ಚಿನವು ಮಿಡ್-ಡೇ ಪ್ರಕಟಿಸಿದ ಲೇಖನದಿಂದ ಪತ್ತೆಯಾಗಿವೆ. ಇದು ಆಸ್ಪತ್ರೆಯ ಮೂಲಗಳಲ್ಲಿ ರತನ್ ಟಾಟಾರವರು ವಯೋಸಹಜವಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಿಡ್-ಡೇ ವರದಿಯ ಪ್ರಕಾರ, ರಕ್ತದೊತ್ತಡದಲ್ಲಿ ತೀವ್ರ ಕುಸಿತ ಉಂಟಾಗಿ ಟಾಟಾ ಅವರನ್ನು 12:30 AM ಮತ್ತು 1:00 AM ನಡುವೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಕ್ಷಣವೇ ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಹೃದ್ರೋಗ ತಜ್ಞ ಡಾ.ಶಾರುಖ್ ಆಸ್ಪಿ ಗೋಲ್ವಾಲ್ಲಾ ಅವರ ನೇತೃತ್ವದ  ತಂಡವು ಪ್ರಸ್ತುತ ಅವರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದೆ.

ಈ ವೈರಲ್‌ ಪೋಸ್ಟರ್‌ ಕುರಿತು ಮತ್ತಷ್ಟು ಹುಡುಕಿದಾಗ, ಈ ವೈರಲ್‌ ಸುದ್ದಿಯ ರಾಷ್ಟ್ರೀಯ ಮುಖ್ಯಾಂಶಗಳನ್ನು ತಯಾರಿಸಿದ ಕೆಲವೇ ಗಂಟೆಗಳ ನಂತರ, ರತನ್ ಟಾಟಾರವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಗಂಭೀರ ಸ್ಥಿತಿಯ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವಯೋಸಹಜ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ತಪಾಸಣೆಗೆ ಹೋಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡಬೇಡಿ ಎಂದು ಭರವಸೆ ನೀಡಿದ್ದಾರೆ.

“ನನ್ನ ಆರೋಗ್ಯದ ಬಗ್ಗೆ ಇತ್ತೀಚೆಗೆ ಹರಡುತ್ತಿರುವ ವದಂತಿಗಳ ಬಗ್ಗೆ ನನಗೆ ತಿಳಿದಿದೆ ಮತ್ತು ಈ ವದಂತಿಗಳು ಆಧಾರರಹಿತವಾಗಿವೆ ಎಂದು ಎಲ್ಲರಿಗೂ ಭರವಸೆ ನೀಡಿದ್ದಾರೆ. ನನ್ನ ವಯೋ ಸಂಬಂಧಿತ ಆರೋಗ್ಯ ಸ್ಥಿತಿಗಳಿಂದಾಗಿ ನಾನು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಹೋಗಿದ್ದೇನೆ. ನಾನು ಚೆನ್ನಾಗಿದ್ದೇನೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹರಡಬೇಡಿ ಎಂದು ವಿನಂತಿಸುವೆ” ಎಂದು ಹೇಳಿದ್ದಾರೆ.


ಒಟ್ಟಾರೆಯಾಗಿ ಹೇಳುವುದಾದರೆ, ಟಾಟಾರವರೇ ತಮ್ಮ ಗಂಭೀರ ಆರೋಗ್ಯ ಸ್ಥಿತಿಯ ಬಗ್ಗೆ ವರದಿಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ. ಆದರೆ ಟಾಟಾ ಗಂಭೀರ ಸ್ಥಿತಿಯಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ತ್ವರಿತ ಪ್ರತಿಕ್ರಿಯೆಯ ಮಾಹಿತಿಯನ್ನು ಸತ್ಯವೆಂದು ಒಪ್ಪಿಕೊಳ್ಳುವ ಮೊದಲು ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ನೇಪಾಳದ ಕೋಸಿ ಆಣೆಕಟ್ಟಿನ ಎಲ್ಲಾ ಬ್ಯಾರೇಜ್‌ಗಳನ್ನು ತೆರೆಯಲಾಗಿದೆ ಎಂದು ದ.ಅಮೇರಿಕಾದ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *