Fact Check : ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸದಿದ್ದಕ್ಕಾಗಿ ಅಮೆರಿಕದ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬುದು ಸುಳ್ಳು

ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶದಲ್ಲಿ ಅಮೇರಿಕನ್ ಮಹಿಳೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ರಿಕ್ಷಾ ಸವಾರಿ ಮಾಡುವಾಗ ಕೆಲವು ವ್ಯಕ್ತಿಗಳು ಆಕೆಗೆ ಕಿರುಕುಳವನ್ನು ಕೊಟ್ಟಿದ್ದಾರೆ.

ಫ್ಯಾಕ್ಟ್‌ ಚೆಕ್:

‌ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಅದೇ ಘಟನೆಯ ,ಒಂದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಲಭಿಸಿವೆ. ಈ ಎಲ್ಲ ಪೋಸ್ಟ್‌ಗಳನ್ನು ಗಮನಿಸಿದಾಗ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜನ್ಮದಿನವನ್ನು ಮಹಿಳೆಯೊಬ್ಬಳು ಆಚರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ರೀತಿಯ ಪೋಸ್ಟರ್‌ಗಳ ಸುಳಿವುಗಳನ್ನು ತೆಗೆದುಕೊಂಡು, ಇಂಟರ್ನೆಟ್‌ನಲ್ಲಿ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ,  ಈ ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳು ದೊರೆತಿವೆ. ವರದಿಗಳ ಪ್ರಕಾರ, ವೈರಲ್ ವೀಡಿಯೊದಲ್ಲಿ ಕಂಡುಬರುವ ಮಹಿಳೆ ಅಮೇರಿಕಾದವಳಲ್ಲ, ಆದರೆ ಬಾಂಗ್ಲಾದೇಶದ ಸಾಂಸ್ಕೃತಿಕ ಒಕ್ಕೂಟದ ನಾಯಕಿ ಮತ್ತು ನಟಿಯಾದ ರೂಪದರ್ಶಿ ಮಿಶ್ತಿ ಸುಭಾಸ್ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.
ಶೇಖ್ ಹಸೀನಾ ಅವರ 78 ನೇ ಹುಟ್ಟುಹಬ್ಬವನ್ನು ಆಚರಿಸಲು ಮಿಶ್ತಿ ಸುಭಾಸ್ ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಹೋದಾಗ ಈ ಘಟನೆ ಸಂಭವಿಸಿದೆ. ಆಗ ಸ್ಥಳದಲ್ಲಿದ್ದ ಕೆಲವು ಜನರು ನಟಿಯ ಮೇಲೆ ಕಿಡಿಕಾರಿದ್ದಾರೆ, ಶೇಕ್ ಹಸೀನಾ ದೇಶವನ್ನು ನಾಶಪಡಿಸಿದ್ದಾರೆ ಮತ್ತು ಅಮಾಯಕ ವಿದ್ಯಾರ್ಥಿಗಳನ್ನು ಕೊಂದಿದ್ದಾರೆ. ಇವರ ಹುಟ್ಟುಹಬ್ಬವನ್ನು ಆಚರಿಸಲು ಬಂದ ಈ ನಾಯಕಿಯನ್ನು ಶೀಘ್ರವಾಗಿ ಭಂದಿಸಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆಯ ಕುರಿತು ಮತ್ತಷ್ಟು ಹುಡುಕಿದಾಗ, ಕೆಲವು ವೀಡಿಯೊಗಳು ದೊರೆತಿವೆ. ಮಿಸ್ತಿ ಸುಭಾಸ್‌ ರಿಕ್ಷಾದಲ್ಲಿ ಹೊರಡುತ್ತಿದ್ದಾಗ ಕೆಲವು ವ್ಯಕ್ತಿಗಳು ಕುಪಿತರಾಗಿ ಆಕೆಗೆ ಕಿರುಕುಳ ನೀಡಿರುವ ಬಗ್ಗೆ ವೀಡಿಯೊಗಳಲ್ಲಿ ಸ್ಪಷ್ಟವಾದ ಮಾಹಿತಿ ಲಭಿಸಿದೆ. ಈ ಘಟನೆಯ ಕುರಿತಾದ ಸುದ್ದಿ ವರದಿಗಳಲ್ಲಿ ಎಲ್ಲಿಯೂ ಸಾರ್ವಜನಿಕರು ಹಿಜಾಬ್ ಧರಿಸದಿದ್ದಕ್ಕಾಗಿ ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ಉಲ್ಲೇಖವಾಗಿಲ್ಲ. ಹಾಗಾಗಿ ಈ ಎಲ್ಲ ವೀಡಿಯೊಗಳು ವೈರಲ್ ವೀಡಿಯೋದ ಹೇಳಿಕೆಯನ್ನು ಸುಳ್ಳು ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಶೇಖ್ ಹಸೀನಾ ಅವರ ಜನ್ಮದಿನವನ್ನು ಆಚರಿಸಲು ಬಾಂಗ್ಲಾದೇಶದ ನಟಿ ಮಿಶ್ತಿ ಸುಭಾಸ್ ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಹೋದಾಗ ಜನರು ಆಕೆಯ ಮೇಲೆ ಹರಿಹಾಯ್ದಿದ್ದಾರಿವುದನ್ನುಕೆಲವು ಬಳಕೆದಾರರು ಅಮೆರಿಕದ ಮಹಿಳೆಯೊಬ್ಬಳು ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶಿಯರು ಕಿರುಕುಳವನ್ನು ನೀಡಿದ್ದಾರೆ ಎಂದು ತಪ್ಪಾಗಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯಾಂಶಗಳನ್ನು ತಿಳಿದುಕೊಂಡು ಹಂಚಿಕೊಳ್ಳಿ.


ಇದನ್ನು ಓದಿ :

Fact Check : ಯೆಮೆನ್‌ನ ಗ್ಯಾಸ್ ಸ್ಫೋಟವನ್ನು ಇಸ್ರೇಲ್‌ನಲ್ಲಿ ನಡೆದ ದಾಳಿ ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *