Fact Check: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ “ಶೌಚಾಲಯ ತೆರಿಗೆ” ವಿಧಿಸಲು ಮುಂದಾಗಿದೆ ಎಂಬುದು ಸುಳ್ಳು

ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಶೌಚಾಲಯ ತೆರಿಗೆ ವಿಧಿಸಿದೆ ಎಂಬ ಸುದ್ದಿಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ಹಿಮಾಚಲ ಪ್ರದೇಶದ ಜನರು ಈಗ ತಮ್ಮ ಮನೆಗಳಲ್ಲಿ ಹೊಂದಿರುವ ಶೌಚಾಲಯ ಆಸನಗಳ ಸಂಖ್ಯೆಯ ಮೇಲೆ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು “ನಂಬಲಸಾಧ್ಯ, ನಿಜವಾಗಿದ್ದರೆ! ಪಿಎಂ ಸಮಯದಲ್ಲಿ @ನರೇಂದ್ರ ಮೋದಿ ji, ಸ್ವಚ್ಛತಾವನ್ನು ಜನರ ಆಂದೋಲನವಾಗಿ ನಿರ್ಮಿಸುತ್ತದೆ, ಇಲ್ಲಿದೆ @INCindia ಶೌಚಾಲಯಕ್ಕಾಗಿ ಜನರ ತೆರಿಗೆ! ಅವರ ಕಾಲದಲ್ಲಿ ಉತ್ತಮ ನೈರ್ಮಲ್ಯವನ್ನು ಒದಗಿಸದಿರುವುದು ನಾಚಿಕೆಗೇಡಿನ ಸಂಗತಿ, ಆದರೆ ಈ ಹೆಜ್ಜೆ ದೇಶವನ್ನು ನಾಚಿಕೆಪಡಿಸುತ್ತದೆ!” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಇದೇ ರೀತಿಯ ಪೋಸ್ಟ್‌ ಅನ್ನು ಹಂಚಿಕೊಂಡಿದ್ದು “ಬಿಟ್ಟಿ ತೋರಿಸಿ ಮತ ಖರೀದಿಸಿದವರು..😏 ಶೌಚಾಲಯಕ್ಕೆ ಕಾಂಗ್ರೆಸ್ ಸರಕಾರ ತೆರಿಗೆ! ಕಟಕಟ್!😂🤣 ಚುನಾವಣೆಯ ಸಂದರ್ಭದಲ್ಲಿ ನೀಡಿದ ಉಚಿತ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿರುವ ಹಿಮಾಚಲ ಕಾಂಗ್ರೆಸ್ ಸರ್ಕಾರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಆದಾಯವನ್ನು ಗಳಿಸುವ ಸಲುವಾಗಿ “ಟಾಯ್ಲೆಟ್ ಸೀಟ್ ಟ್ಯಾಕ್ಸ್” ಎಂಬ ಹೊಸ ತೆರಿಗೆಯನ್ನು ಸಂಗ್ರಹಿಸಲು ಯೋಜಿಸಿದೆ. ಇದರ ಪ್ರಕಾರ ಜನರು ತಮ್ಮ ಮನೆಯಲ್ಲಿರುವ ಪ್ರತಿ ಶೌಚಾಲಯಕ್ಕೆ 25 ರೂಪಾಯಿ ತೆರಿಗೆ ಪಾವತಿಸಬೇಕು.“. ಎಂಬ ಶೀರ್ಷಿಕೆಯನ್ನು  ನೀಡಲಾಗಿದೆ.

ಫ್ಯಾಕ್ಟ್‌ ಚೆಕ್: 

ಈ ಮಾಹಿತಿ ಸುಳ್ಳಾಗಿದ್ದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ರಾಜ್ಯದಲ್ಲಿ ಅಂತಹ “ಶೌಚಾಲಯ ತೆರಿಗೆ” ಇಲ್ಲ ಎಂದು ಹೇಳಿದ್ದಾರೆ.

ನಾವು ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ನಲ್ಲಿ ಕೀವರ್ಡ್‌ ಹುಡುಕಾಟವನ್ನು ನಡೆಸಿದಾಗ, ಈ ತೆರಿಗೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಸ್ಪಷ್ಟನೆ ನೀಡಿರುವ ವರದಿಗಳು ಲಭ್ಯವಾಗಿವೆ ಎನ್‌ಡಿಟಿವಿ ವರದಿಯಲ್ಲಿ ರಾಜ್ಯದಲ್ಲಿ ಅಂತಹ “ಶೌಚಾಲಯ ತೆರಿಗೆ” ಇಲ್ಲ ಎಂದು ಹೇಳಿದ್ದಾರೆ.

ಹಿಂದುಸ್ತಾನ್ ಟೈಮ್ಸ್ ರವರು ಇಂದು ಮಾಡಿರುವ ವರದಿಯ ಪ್ರಕಾರ ” ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಇಂತಹ ಹೇಳಿಕೆಗಳು ಆಧಾರರಹಿತ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದು ಎಂದು ಹೇಳಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಬಿಜೆಪಿ ಧರ್ಮದ ಕಾರ್ಡ್ ಆಡುತ್ತಿದೆ ಅಥವಾ ಕೆಲವೊಮ್ಮೆ ನಕಲಿ ಶೌಚಾಲಯ ತೆರಿಗೆ ವಿಷಯವನ್ನು ಎತ್ತುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಯಾರೂ ವಿಷಯಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸಬಾರದು, ವಿಶೇಷವಾಗಿ ಆರೋಪಗಳು ವಾಸ್ತವದಿಂದ ದೂರವಿದ್ದಾಗ” ಎಂದು ಅವರು ಹೇಳಿದರು.

ಟೈಮ್ಸ್‌ ಆಫ್ ಇಂಡಿಯಾ ವರದಿಯ ಪ್ರಕಾರ “ಬಿಜೆಪಿಯ ತೀವ್ರ ಟೀಕೆಯ ನಂತರ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ಉದ್ದೇಶಿತ ‘ಶೌಚಾಲಯ ತೆರಿಗೆ’ಯನ್ನು ಹಿಂಪಡೆದಿದೆ. ತಮ್ಮ ಸ್ವಂತ ನೀರಿನ ಮೂಲಗಳನ್ನು ಬಳಸಿ ಆದರೆ ಇಲಾಖೆಯ ಒಳಚರಂಡಿ ವ್ಯವಸ್ಥೆಯನ್ನು ಬಳಸಿಕೊಂಡು ಮನೆಗಳಿಗೆ ತೆರಿಗೆ ವಿಧಿಸುವ ಗುರಿಯನ್ನು ಹೊಂದಿದೆ. ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ಖಂಡಿಸಿದರು ಇದು ಬೌದ್ಧಿಕವಾಗಿ ಭ್ರಷ್ಟ ನಿರ್ಧಾರ. ನಂತರ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.” ಎಂದಿದ್ದಾರೆ.

ಆದ್ದರಿಂದ ಸಧ್ಯ ಹಿಮಾಚಲ ಪ್ರದೇಶದಲ್ಲಿ ಶೌಚಾಲಯ ತೆರಿಗೆಯನ್ನು ಅಲ್ಲಿಯ ಕಾಂಗ್ರೆಸ್‌ ಸರ್ಕಾರ ವಿಧಿಸಲು ಮುಂದಾಗಿದೆ ಎಂಬುದು ಸುಳ್ಳು ಸುದ್ದಿಯಾಗಿದೆ.


ಇದನ್ನು ಓದಿ: ಮೊಬೈಲ್ ನೀಡಲಿಲ್ಲ ಎಂದು ಬಾಲಕನೊಬ್ಬ ಬ್ಯಾಟಿನಿಂದ ತನ್ನ ತಾಯಿಗೆ ಹೊಡೆದಿರುವ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *