Fact Check : ಯೆಮೆನ್‌ನ ಗ್ಯಾಸ್ ಸ್ಫೋಟವನ್ನು ಇಸ್ರೇಲ್‌ನಲ್ಲಿ ನಡೆದ ದಾಳಿ ಎಂದು ತಪ್ಪಾಗಿ ಹಂಚಿಕೆ

ಇರಾನ್ ಕ್ಷಿಪಣಿ ದಾಳಿಯಿಂದ ಇಸ್ರೇಲ್‌ನಲ್ಲಿ ಭಾರೀ ಸ್ಫೋಟವಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇಸ್ರೇಲ್‌ನ ಟೆಲಿಗ್ರಾಮ್ ಗುಂಪುಗಳಲ್ಲಿ ಪ್ರಸಾರವಾಗಿರುವ ವೀಡಿಯೊಗಳು ಇಸ್ರೇಲ್‌ನ ಮೇಲೆ ಇರಾನ್ ದಾಳಿಯ ದುರಂತಗಳನ್ನು ಮತ್ತು  ಬೆಂಕಿ ಇನ್ನೂ ಉರಿಯುತ್ತಿರುವುದನ್ನುತೋರಿಸಿವೆ.‌ ಇಂತಹ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಬಾರದು, ಹಂಚಿಕೊಳ್ಳಬಾರದು ಎಂದು ಇಸ್ರೇಲ್ ಜನರಲ್ಲಿ ಕೇಳಿಕೊಂಡಿದೆ“. ಎಂದು ಸ್ಫೋಟದ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  Zee News , Yemen Shabab , Ythis News ಮತ್ತು Agenzia Nova ಸೇರಿದಂತೆ ಹಲವಾರು ಮಾಧ್ಯಮಗಳ ವರದಿಗಳು ಲಭಿಸಿವೆ.

2024ರ ಆಗಸ್ಟ್ 30 ರಂದು ಸಂಜೆ ಮನ್ಸೌರಾ ಪ್ರದೇಶದ ಗ್ಯಾಸ್ ಸ್ಟೇಷನ್‌ನಲ್ಲಿ ಸಂಭವಿಸಿದ ಅಚಾನಕವಾದ ಬೆಂಕಿಯಿಂದಾಗಿ ಯೆಮೆನ್‌ನ ಅಡೆನ್‌ನಲ್ಲಿ ಸ್ಫೋಟ ಸಂಭವಿಸಿ ಟ್ಯಾಂಕರ್ ಸ್ಫೋಟಕ್ಕೆ ಕಾರಣವಾಗಿದೆ, ಈ ವೀಡಿಯೊದಲ್ಲಿ ಜ್ವಾಲೆಗಳ ದೃಶ್ಯಗಳು ಗೋಚರಿಸಿವೆ. ವಸತಿ ಪ್ರದೇಶಗಳ ಗ್ಯಾಸ್ ಸ್ಟೇಷನ್‌ಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಬೆಂಕಿ ಸಂಭವಿಸಿದೆ. ಇಂತಹ ಅವ್ಯವಸ್ಥೆಯಿಂದಾಗಿ ನಾಗರಿಕರು ಅಪಾಯವನ್ನು ಎದುರಿಸಬೇಕಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ ಎಂದು ಯೆಮೆನ್ ಶಬಾಬ್ ವರದಿಯಲ್ಲಿ ಉಲ್ಲೇಖವಾಗಿದೆ.

2024ರ ಆಗಸ್ಟ್ 31ರಂದು  ದಿ ಸಿಯಾಸತ್ ಡೈಲಿ ಎಂಬ ಅಧಿಕೃತ X ಖಾತೆಯಲ್ಲಿ “ಸಾಕ್ಷಿಗಳ ಪ್ರಕಾರ, ಪ್ರಬಲವಾದ ಸ್ಫೋಟವು ಯೆಮೆನ್‌ನ ದಕ್ಷಿಣ ಬಂದರು ನಗರವಾದ ಏಡೆನ್‌ನಲ್ಲಿ ಸಂಭವಿಸಿದ್ದು, ವಸತಿ ಪ್ರದೇಶಗಳ ನೆರೆಹೊರೆಯವರನ್ನು ಬೆಚ್ಚಿಬೀಳಿಸಿದೆ” ಎಂದು ಹಂಚಿಕೊಳ್ಳಲಾಗಿದೆ.

2024ರ ಆಗಸ್ಟ್ 31ರಂದು “ಡೆಡ್ಲಿ ಗ್ಯಾಸ್ ಸ್ಟೇಶನ್ ಸ್ಫೋಟ ರಾಕ್ಸ್ ಅಡೆನ್, ಯೆಮೆನ್” ಎಂಬ ಶೀರ್ಷಿಕೆಯ ಯುರೋಪಿಯನ್ ಮಾಧ್ಯಮ ಔಟ್‌ಲೆಟ್ CGTN ಯುರೋಪ್‌ನ YouTube ಚಾನಲ್‌ನಲ್ಲಿ  ಅದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊ ಯೆಮೆನ್‌ನ ಅಡೆನ್‌ನಲ್ಲಿರುವ ಗ್ಯಾಸ್ ಸ್ಟೇಷನ್‌ನಲ್ಲಿ ಸಂಭವಿಸಿದ ಸ್ಫೋಟವನ್ನು ತೋರಿಸಿದೆ. ಆದರೆ ಬಳಕೆದಾರರು ಈ ಘಟನೆ ಇರಾನ್ ದಾಳಿಯ ನಂತರ ಇಸ್ರೇಲ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ಘಟನೆಗಳನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಂಶವನ್ನು ತಿಳಿದುಕೊಂಡು ಹಂಚಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಇದು ರಷ್ಯಾದ ಮೇಲಾದ ದಾಳಿಯ ವಿಡಿಯೋ ಹೊರತು, ಇರಾಕ್‌ ಟೆಲ್ ಅವಿವ್‌ ಮೇಲೆ ನಡೆಸಿದ ದಾಳಿಯದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *