Fact Check: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಬಾಲಕಿಗೆ ಬಲವಂತವಾಗಿ ಚುಂಬಿಸಿದ್ದಾರೆ ಎಂದು ಎಡಿಟ್‌ ಮಾಡಿದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸಾವಿನ ನಂತರ ಹೆಚ್ಚಿನ ಭದ್ರತಾ ಕ್ರಮಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂಭಾವ್ಯ ಪ್ರತೀಕಾರದ ಮೇಲಿನ ಕಳವಳ ಮತ್ತು ಪ್ರದೇಶದಲ್ಲಿ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 

ಆದರೆ ಸಧ್ಯ ಅಯತೊಲ್ಲಾ ಅಲಿ ಖಮೇನಿ ಅವರ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಸಹ್ಯಕರ ಮರುಭೂಮಿ ಸಂಸ್ಕೃತಿ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು 5 ವರ್ಷದ ಬಾಲಕಿಯನ್ನು ಬಲವಂತವಾಗಿ ಚುಂಬಿಸುತ್ತಾರೆ ಮತ್ತು ನಂತರ ಅವಳನ್ನು ಕೇಳುತ್ತಾರೆ, “ಇದು ರುಚಿಯಾಗಿದೆಯೇ?” ಎಂಬ ಶೀರ್ಷಿಕೆಯೊಂದಿಗೆ ಖಮೇನಿ ಅವರು ಪುಟ್ಟ ಬಾಲಕಿಯೊಬ್ಬಳಿಗೆ ಮುತ್ತು ಕೊಡುವ ವೀಡಿಯೋ ಒಂದು ವೈರಲ್ ಆಗಿದೆ.

ಈ ವೀಡಿಯೋ ಎಕ್ಸ್ ನಲ್ಲಿ ಸಾಕಷ್ಟು ವೈರಲ್ ಆಗಿದ್ದು ಅನೇಕರು ಈ ವೀಡಿಯೋವನ್ನು ಇದೇ ರೀತಿಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ಕಾಣಬಹುದು.

ಫ್ಯಾಕ್ಟ್‌ ಚೆಕ್:

ವಾಸ್ತವವಾಗಿ ಈ ಹೇಳಿಕೆಗಳು ನಿಜವಲ್ಲ. ಈ ವೀಡಿಯೊ ಜುಲೈ 2011 ರಲ್ಲಿ ಹತ್ಯೆಗೀಡಾದ ಇರಾನಿನ ವಿಜ್ಞಾನಿ ದರಿಯುಶ್ ರೆಜೈ-ನೆಜಾದ್ ಅವರ ಕುಟುಂಬವನ್ನು ಅಯತೊಲ್ಲಾ ಅಲಿ ಖಮೇನಿ ಅವರು ಭೇಟಿಯಾದ ಸಂದರ್ಭದ್ದಾಗಿದೆ. ವೀಡಿಯೊದಲ್ಲಿ, ಅವರು ಸಹಾನುಭೂತಿ, ಗೌರವ ಮತ್ತು ದಯೆಯನ್ನು ತೋರಿಸುತ್ತಾರೆ-ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ವೀಡಿಯೋ ತೋರಿಸುವುದಿಲ್ಲ

ವೈರಲ್ ವೀಡಿಯೋ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ರಿವರ್ಸ್‌ ಇಮೇಜ್‌ ಮೂಲಕ ವೈರಲ್ ವೀಡಿಯೋದ ಕೀಪ್ರೇಮ್‌ಗಳನ್ನು ಬಳಸಿ ಹುಡುಕಿದಾಗ, ಯೂಟೂಬ್‌ನಲ್ಲಿ ಇದರ ಸಂಪೂರ್ಣ ವೀಡಿಯೋ ಲಭ್ಯವಾಗಿದ್ದು, ಯೂಟ್ಯೂಬ್‌ನಲ್ಲಿನ ಪೂರ್ಣ ವೀಡಿಯೊದಲ್ಲಿ ಖಮೇನಿ ಚಿಕ್ಕ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ತೋರಿಸುವುದಿಲ್ಲ; ಆದ್ದರಿಂದ, ಹಂಚಿಕೊಂಡ ವೀಡಿಯೊವನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ.

ಈ ಕೆಳಗೆ ಖಮೇನಿಯವರು ಬಾಲಕಿಯೊಂದಿಗೆ ನಡೆಸಿದ ಸಂಭಾಷಣೆಯನ್ನು ನೀವು ನೋಡಬಹುದು. ಅವರು ಮೂಲ ವೀಡಿಯೋದಲ್ಲಿ ಬಾಲಕಿಗೆ ಮುತ್ತಿಕ್ಕುವ ದೃಶ್ಯ ಇಲ್ಲದೇ ಇರುವುದನ್ನು ಸ್ಪಷ್ಟವಾಗಿ ಗಮನಿಸಬಹುದು.

ಆದ್ದರಿಂದ ಕೆಲವು ಸಾಮಾಜಿಕ ಜಾಲತಾಣದ ಪ್ರಭಾವಿಗಳು ತಮ್ಮ ನಿರೂಪಣೆಯನ್ನು ಹೊಂದಿಸಲು ತಪ್ಪುದಾರಿಗೆಳೆಯುವ ಪ್ರತಿಪಾದನೆಗಳೊಂದಿಗೆ ಇರಾನಿನ ಸರ್ವೋಚ್ಚ ನಾಯಕನ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದಾರೆ.


ಇದನ್ನು ಓದಿ: ಹಿಮಾಚಲ ಪ್ರದೇಶದಲ್ಲಿ ಶಿವಲಿಂಗವನ್ನು ಧ್ವಂಸ ಮಾಡಿರುವುದು ಮಾನಸಿಕ ಅಸ್ವಸ್ತ ಮಹಿಳೆಯೇ ಹೊರತು ಮುಸ್ಲಿಮರಲ್ಲ!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *