Fact Check: ಹಿಮಾಚಲ ಪ್ರದೇಶದಲ್ಲಿ ಶಿವಲಿಂಗವನ್ನು ಧ್ವಂಸ ಮಾಡಿರುವುದು ಮಾನಸಿಕ ಅಸ್ವಸ್ತ ಮಹಿಳೆಯೇ ಹೊರತು ಮುಸ್ಲಿಮರಲ್ಲ!

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿ ಶುಕ್ರವಾರ, ಸೆಪ್ಟೆಂಬರ್ 27, 2024 ರಂದು ಶಿಮಾದಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಶಿವಲಿಂಗವನ್ನು ಧ್ವಂಸಗೊಳಿಸಲಾಗಿದೆ. ಸಿಟಿ ನ್ಯೂಸ್ ಹಿಮಾಚಲ್ ಎಂಬ ಸ್ಥಳೀಯ ಮಾಧ್ಯಮ ಸಂಸ್ಥೆ ಟ್ವೀಟ್ ಮಾಡಿದ ವೀಡಿಯೊ ತುಣುಕು ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ದೇವಾಲಯದ ಒಳಗೆ ಅಪವಿತ್ರಗೊಳಿಸಿದ ಶಿವಲಿಂಗವನ್ನು ತೋರಿಸಿದರೆ, ನಿರೂಪಕ ಇದನ್ನು ಕೆಲವು ದುಷ್ಕರ್ಮಿಗಳ ಕೃತ್ಯ ಎಂದು ವಿವರಿಸುತ್ತಾರೆ. ತನಿಖೆಯ ಬಗ್ಗೆ ಪೊಲೀಸರನ್ನು ಕೇಳಿದಾಗ, ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ನೆರೆಹೊರೆಯ ಸಿಸಿಟಿವಿ ದೃಶ್ಯಾವಳಿಗಳನ್ನು…

Read More

Fact Check | ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ಎಂಬುದು ಸುಳ್ಳು

ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಲಾಗುತ್ತಿದ್ದು, ಹಿಂದುಗಳ ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸಿ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ವಿಡಿಯೋದೊಂದಿಗೆ ಲಘು ಟಿಪ್ಪಣಿಯನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಹಲವರು ಈ ವಿಡಿಯೋಗೆ ರಾಜಕೀಯದ ಆಯಾಮವನ್ನು ಕೂಡ ನೀಡಿದ್ದು, ವಿಡಿಯೋ ಕುರಿತು ವಿವಿಧ ಚರ್ಚೆಗಳನ್ನು ಕೂಡ ಹುಟ್ಟುಹಾಕಿದೆ. Muslim youth "Arshad" was tied up and brutally beaten in Dataganj, Budaun. Due to the…

Read More
ಮಹಾತ್ಮ ಗಾಂಧಿ

Fact Check: ಮಹಾತ್ಮ ಗಾಂಧಿಯವರು ಮಹಿಳಾ ಶಿಕ್ಷಣ ಮತ್ತು ಮತದಾನದ ಹಕ್ಕನ್ನು ನಿರಾಕರಿಸಿದ್ದರು ಎಂಬುದು ಸುಳ್ಳು

ಇತ್ತೀಚೆಗೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜು ಯುವಕನೊಬ್ಬ ಗಾಂಧೀಜಿಯವರ “ನನ್ನ ಸತ್ಯನ್ವೇಷಣೆ” ಆತ್ಮ ಚರಿತ್ರೆಯನ್ನು ಉಲ್ಲೇಖಿಸಿ, “1897ರಲ್ಲಿ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಈ ವ್ಯವಸ್ಥೆ ಇದ್ದ ಹಾಗೆಯೇ ಇರಬೇಕು ಎಂದು ಪ್ರತಿಪಾದಿಸಿದ್ದರು, ಅದಕ್ಕೆ ದಾಖಲೆಗಳು ಬಾಲಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯಲ್ಲಿ ಸಿಗುತ್ತದೆ. ಗಾಂಧೀಜಿಯವರ ವಾದ ಯಥಾವತ್ತಾಗಿ ಜಾರಿಯಾಗಿದ್ದರೆ ಇಲ್ಲಿ ಯಾವ ಹೆಣ್ಣು ಮಕ್ಕಳು ಕೂರುವಂತಿರಲಿಲ್ಲ, ಶಿಕ್ಷಣ ಪಡೆಯುವಂತಿರಲಿಲ್ಲ. 1930, 31, 32ರಲ್ಲಿ ದುಂಡು ಮೇಜಿನ ಸಭೆಯಲ್ಲಿ ಗಾಂಧೀಜಿಯವರು ವಾದ ಮಾಡುತ್ತಾರೆ, ಮಹಿಳೆಯರಿಗೆ ಮತದಾನದ ಹಕ್ಕು ಬೇಡ…

Read More

Fact Check I ಫೇಲಸ್ತೀನ್ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಕರೆದಿಲ್ಲ

ಫೇಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್‌ರವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಬೈದಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನಿ ಮೂಲದ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಮೋದಿಯವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ಕುರಿತು ಟ್ವೀಟ್ ಪೋಸ್ಟ್ ಮಾಡಿದ ಬಳಿಕ,  ಮೋದಿಯವರ ಬಗ್ಗೆ ಫೇಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್‌ರವರು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಆರೋಪಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್ ಈ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಯಾಕೆಂದರೆ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ….

Read More

Fact Check : ಇರಾನ್‌ ದಾಳಿಗೆ ಹೆದರಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಬಂಕರ್‌ಗೆ ಓಡಿಹೋಗಿದ್ದಾರೆ ಎಂಬುದು ಸುಳ್ಳು

ಇಸ್ರೇಲ್‌ನ ಟೆಲ್ ಅವಿವ್‌ನ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಕೆಲವೇ ಗಂಟೆಗಳ ನಂತರ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೆದರಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದ ಕಾರಿಡಾರ್‌ನ ಮೂಲಕ ಬಂಕರ್‌ಗೆ ಓಡಿಹೋಗುತ್ತಿದ್ದಾರೆ ಎಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   Sohidul Islam Sahid ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟರ್‌ನಲ್ಲಿ, “ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ತನ್ನ ಜೀವವನ್ನು ಉಳಿಸಿಕೊಳ್ಳಲು ಓಡುತ್ತಿದ್ದಾರೆ. ಅವರು ಎಷ್ಟು ದಿನ ಬಂಕರ್‌ನಲ್ಲಿ ಅಡಗಿಕೊಳ್ಳುತ್ತಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌…

Read More

Fact Check | ಪೊಲೀಸರಿಗೆ ಥಳಿಸಿರುವ ಈ ವಿಡಿಯೋ ಕರ್ನಾಟಕದ್ದಲ್ಲ, ಬದಲಿಗೆ ಗಾಜಿಯಾಬಾದ್‌ನದ್ದು

ಕರ್ನಾಟಕದ ಹೆಸರಿನಲ್ಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆ ಸೇರಿ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತಿದೆ. ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಕೆಲವು ಬಳಕೆದಾರರು ಕರ್ನಾಟಕದಲ್ಲಿ ಚಲನ್ ನೀಡಿದ್ದಕ್ಕಾಗಿ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ. ಇದು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮುಸಲ್ಮಾನರಿಗೆ ಸಿಕ್ಕ ಶಕ್ತಿ ಎಂದು ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಈ ವೈರಲ್‌ ವಿಡಿಯೋ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಇತರೆ ರಾಜ್ಯದ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತೆ ಮಾಡಿದೆ. Shame…

Read More
ನೆಹರು

Fact Check: ಜವಾಹರಲಾಲ್ ನೆಹರು ಅವರು ಪತ್ನಿ ಕಮಲಾ ಅವರನ್ನು ನಿರ್ಲಕ್ಷಿಸಿದ್ದರು ಎಂಬ ಸುದ್ದಿ ಸುಳ್ಳು!

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅವರ ಪತ್ನಿ ಕಮಲಾ ನೆಹರು ಅವರ ಕಥೆಯನ್ನು ಹೇಳುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪತ್ನಿ ಜಶೋದಾಬೆನ್ ಮೋದಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು ಜನರು ಟೀಕಿಸುತ್ತಾರೆ, ಆದರೆ “ಜವಾಹರಲಾಲ್ ನೆಹರು ತಮ್ಮ ಪತ್ನಿ ಕಮಲಾ ನೆಹರೂ ಅವರಿಗೆ ಏನು ಮಾಡಿದರು ಎಂಬ ಕಥೆ ತಿಳಿದಿಲ್ಲ” ಎಂದು ಹೇಳಲು ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಕಮಲಾ ನೆಹರು ಕ್ಷಯರೋಗದಿಂದ (ಟಿಬಿ) ಬಳಲುತ್ತಿದ್ದರು ಎಂದು ಪೋಸ್ಟ್‌ನ ಸಂದೇಶದಲ್ಲಿ ಹೇಳಲಾಗಿದೆ ಈ ಕಾರಣದಿಂದಾಗಿ ಮಾಜಿ…

Read More

Fact Check : ಮನಮೋಹನ್ ಸಿಂಗ್‌ ಹೂಡಿಕೆ ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂದು ನಕಲಿ ವೀಡಿಯೊ ಹಂಚಿಕೆ

ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಹೂಡಿಕೆಯನ್ನು ಉತ್ತೇಜಿಸಿ ಪ್ರಚಾರವನ್ನು ಮಾಡುತ್ತಿದ್ದಾರೆ. ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವೀಡಿಯೊದಲ್ಲಿ ಮನಮೋಹನ್‌ ಸಿಂಗ್‌ ಮಾತನಾಡುತ್ತಿರುವುದನ್ನು ನೋಡಬಹುದು. ಧ್ವನಿ ಕೂಡ ಮನಮೋಹನ್‌ ಸಿಂಗ್‌ರಿಗೆ ಹೋಲಿಕೆ ಆಗುತ್ತಿದೆ. ಹೀಗಾಗಿ ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವ ಹಲವು ಮಂದಿಗೆ ಈ ವೀಡಿಯೊ ಅಚ್ಚರಿಯನ್ನು ಉಂಟು ಮಾಡಿ, ಗೊಂದಲವನ್ನು ಸೃಷ್ಟಿಸಿದೆ. ಕೆಲವು ಬಳಕೆದಾರರು ಮನಮೋಹನ್‌ ಸಿಂಗ್‌ರ ಈ ವೈರಲ್‌ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್ : ಮನಮೋಹನ್‌ ಸಿಂಗ್‌…

Read More

Fact Check | ಬಾಂಗ್ಲಾದೇಶದಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಯ ವಿಡಿಯೋವನ್ನು ಹಿಂದೂವಿನದ್ದು ಎಂದು ಹಂಚಿಕೆ

“ಬಾಂಗ್ಲಾದೇಶದ ನಾರ್ಸಿಂಗಡಿ ಜಿಲ್ಲೆಯ ಕೌರಿಯಾ ಪಾರಾದ ಈದ್ಗಾ ಗೇಟ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ಇನ್ನೊಬ್ಬ ಹಿಂದೂವನ್ನು ಕತ್ತು ಸೀಳಿ ಕೊಂದಿದ್ದಾರೆ. @UNHumanrights ನಿದ್ರಿಸುತ್ತಿದೆ. ನಾವಲ್ಲದಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಪರ ಧ್ವನಿ ಎತ್ತುವವರು ಯಾರು? #ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಾಂಗ್ಲಾದೇಶದಲ್ಲಿ ಈ ರೀತಿ ನಿರಂತರವಾಗಿ ಹಿಂದೂಗಳು ಹತ್ಯೆಗೆ ಒಳಗಾಗುತ್ತಿದ್ದಾರೆ ಎಂದು ಕೂಡ ಹಲವರು ಉಲ್ಲೇಖಿಸುತ್ತಿದ್ದಾರೆ. Another Hindu was killed by slitting his throat in front of everyone at…

Read More