Fact Check:  ಹೈದರಾಬಾದ್‌ನ ದೇವಸ್ಥಾನವೊಂದರಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಹೈದರಾಬಾದಿನ ಮಸಾಬ್ ಟ್ಯಾಂಕ್‌ನಲ್ಲಿರುವ ಶ್ರೀ ದುರ್ಗಾ ದೇವಿ ದೇವಾಲಯದ ಮಂಟಪದಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆಯ ಆಘಾತಕಾರಿ ಘಟನೆ ನಡೆದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ಮಸಾಬ್ ಟ್ಯಾಂಕ್‌ನ ಶ್ರೀ ಶ್ರೀ ದುರ್ಗಾ ಭವಾನಿ ದೇವಸ್ಥಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ, ಅನಾಮಧೇಯ ವ್ಯಕ್ತಿಯೊಬ್ಬ ದೇವಾಲಯದೊಳಗೆ ಕರುವಿನ ಮಾಂಸವನ್ನು ಎಸೆದಿದ್ದಾನೆ. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಹಿಂದೂ ಧ್ವನಿ ಎತ್ತಬೇಕು – ನಮಗೆ ನ್ಯಾಯ ಬೇಕು!…” ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಯಾಕೆ ಹೀಗೆ ಆಗುತ್ತಿದೆ?…

Read More

Fact Check : ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ವಿಡಿಯೋ ಗೇಮ್ ದೃಶ್ಯ ಹಂಚಿಕೆ

ಇಸ್ರೇಲ್-ಲೆಬನಾನ್ ನಡುವೆ ಸಂಘರ್ಷ ಮತ್ತೆ ಮುಂದುವರಿದಿದೆ. ಇಸ್ರೇಲ್ ಇರಾನ್ ಮೇಲೆ ದಾಳಿಯನ್ನು ನಡೆಸಲು  ಸಿದ್ಧತೆಯನ್ನು ನಡೆಸುತ್ತಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಿಲಿಟರಿ ವಾಹನಗಳ ಬೆಂಗಾವಲು ಪಡೆ – ಶಸ್ತ್ರಸಜ್ಜಿತ ಕಾರುಗಳು, ಟ್ರಕ್‌ಗಳು ಮತ್ತು ಟ್ಯಾಂಕ್‌ಗಳು ಅಂಕುಡೊಂಕಾದ ರಸ್ತೆಗಳ ಮೂಲಕ ಸಾಗುತ್ತಿವೆ. ಇಸ್ರೇಲ್‌ನ ಧ್ವಜಗಳು ರಸ್ತೆಬದಿಗಳ ಸ್ಥಳದಲ್ಲಿ ಕಂಡುಬಂದಿದ್ದು, “ಇಸ್ರೇಲ್ ಇರಾನ್‌ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ವಿಡಿಯೋದ…

Read More
ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶದ ಬಹ್ರೈಚ್ ಹಿಂಸಾಚಾರದ ವಿಡಿಯೋ ಎಂದು ಮಹಾರಾಜ್‌ಗಂಜ್‌ನ ಕೋಮುಗಲಭೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ, ರಾಮ್ ಗೋಪಾಲ್ ಮಿಶ್ರಾ ಎಂಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿದ ನಂತರ, ಈ ಘಟನೆಯನ್ನು ತೋರಿಸುವ ವೀಡಿಯೊ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಬಹ್ರೈಚ್‌ನಲ್ಲಿ ಹಿಂಸಾಚಾರವು ನಿಜವಾಗಿಯೂ ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ ಈ ವೀಡಿಯೊ ಸತ್ಯವನ್ನು ಬಹಿರಂಗಪಡಿಸುತ್ತದೆ” ಎಂದು ವೀಡಿಯೊವನ್ನು ಹಂಚಿಕೊಳ್ಳುವವರು ಪ್ರತಿಪಾದಿಸುತ್ತಿದ್ದಾರೆ. ವೀಡಿಯೊದಲ್ಲಿ, “ಆಂಗ್ರಿ ಹನುಮಾನ್” ಚಿತ್ರವನ್ನು ಹೊಂದಿರುವ ಕೇಸರಿ ಧ್ವಜಗಳೊಂದಿಗೆ ಬೀದಿಯಲ್ಲಿ ಮೆರವಣಿಗೆ ಮಾಡುವಾಗ ಜನರು ದೊಡ್ಡ ಸಂಗೀತಕ್ಕೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಮನೆಯ…

Read More

Fact Check | ಕ್ರಿಸ್ಟಿಯಾನೋ ರೊನಾಲ್ಡೊ ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ ಎಂಬ ವಿಡಿಯೋ ಎಡಿಟೆಡ್ ಆಗಿದೆ

ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಅವರು ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ವಿಡಿಯೋದಲ್ಲಿ ಕೂಡ ಕ್ರಿಸ್ಟಿಯಾನೋ ರೊನಾಲ್ಡೊ ಅವರು ವಿರಾಟ್ ಕೊಹ್ಲಿ ಅವರನ್ನು ಹೊಗಳುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಈ ವಿಡಿಯೋ ಈಗ ಕ್ರಿಕೆಟ್ ಪ್ರೇಮಿಗಳಿಗೆ ಸಂತಸವನ್ನು ಉಂಟು ಮಾಡಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ವಿಡಿಯೋ ನೋಡಿದ ಸಾರ್ವಜನಿಕರು ಕೂಡ ಫುಟ್ಬಾಲ್ ಆಟಗಾರ ಭಾರತೀಯ ಕ್ರಿಕೆಟಿಗ ವಿರಾಟ್…

Read More
ಮುಸ್ಲಿಂ

Fact Check: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಜಾಗೃತಿಗಾಗಿ ಮಾಡಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ತುಣುಕೊಂದು(ರೀಲ್‌) ಹರಿದಾಡುತ್ತಿದ್ದು, ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ದಂಪತಿಗಳ ನಡುವೆ ಬರುವ ಇನ್ನೊಬ್ಬ ವ್ಯಕ್ತಿ ತನ್ನ ಅಂಗಿಯನ್ನು ತೆಗೆದು ಸ್ನಾಯುಗಳನ್ನು ಪ್ರದರ್ಶಿಸುತ್ತಾನೆ. ಇದರಿಂದ ಕೋಪಗೊಂಡ ಮಹಿಳೆ ಅರೆಬೆತ್ತಲಾದ ಪುರುಷನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ, ಅವನನ್ನು ಬಹುತೇಕ ಓಡಿಸುತ್ತಾಳೆ. ಈ ವೀಡಿಯೊವನ್ನು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಹಂಚಿಕೊಳ್ಳುವವರು ಅಂಗಿ ಇಲ್ಲದ ಪುರುಷ ಮುಸ್ಲಿಂ ಮತ್ತು ಮಹಿಳೆ ಹಿಂದೂ ಎಂದು ಪ್ರತಿಪಾದಿಸಲಾಗುತ್ತಿದೆ. ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡು “ಅಬ್ದುಲ್” ತನ್ನ…

Read More

Fact Check : ಕಲ್ಲಂಗಡಿ & ಗಸಗಸೆ ಬೀಜದಿಂದ ಅಧಿಕ ರಕ್ತದೊತ್ತಡ ಗುಣವಾಗುತ್ತದೆ ಎಂಬುದು ಸುಳ್ಳು

ಕಲ್ಲಂಗಡಿ ಬೀಜಗಳು ಮತ್ತು ಗಸಗಸೆಗಳನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ, ಪುಡಿ ಮಾಡಿದ ನಂತರ ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು Instagramನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಕಲ್ಲಂಗಡಿ ಬೀಜಗಳು ಮತ್ತು ಗಸಗಸೆ ಬೀಜಗಳಲ್ಲಿ ಪೌಷ್ಟಿಕಾಂಶಗಳಿದ್ದರೂ , ಅವು ಅಧಿಕ ರಕ್ತದೊತ್ತಡ ಅಥವಾ ನಿದ್ರಾಹೀನತೆಯನ್ನು ಗುಣಪಡಿಸುತ್ತವೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಪ್ರಸ್ತುತ, ಅಧಿಕ ರಕ್ತದೊತ್ತಡಕ್ಕೆ ಯಾವುದೇ ಚಿಕಿತ್ಸೆ ಇಲ್ಲ….

Read More
ವಕ್ಫ್

Fact Check: ಇಸ್ಲಾಮಿಕ್ ರಾಷ್ಟ್ರಗಳು ವಕ್ಫ್ ಆಸ್ತಿಯನ್ನು ಹೊಂದಿಲ್ಲ ಎಂಬ PIB ಪ್ರತಿಪಾದನೆ ಸುಳ್ಳು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8 ರಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024 ಅನ್ನು ಪ್ರಸ್ತಾಪಿಸಿದರು. ಈ ಮಸೂದೆಯು ವಿವಾದವನ್ನು ಹುಟ್ಟುಹಾಕಿದೆ, ಸಮುದಾಯದ ಮುಖಂಡರು, ಕಾರ್ಯಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ತಜ್ಞರು ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆದರಿಕೆ ಹಾಕಬಹುದು ಎಂಬ ಆಧಾರದ ಮೇಲೆ ಟೀಕಿಸಿದ್ದಾರೆ. ವಕ್ಫ್ ಕಾಯ್ದೆಯಲ್ಲಿ ಪ್ರಸ್ತಾವಿತ ಬದಲಾವಣೆಗಳನ್ನು ಪರಿಶೀಲಿಸಲು 21 ಲೋಕಸಭಾ ಮತ್ತು 10…

Read More

Fact Check: ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಉತ್ತರ ಅಮೆರಿಕಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಭೀಕರ ರಾಜತಾಂತ್ರಿಕ ಕಲಹ ಉಂಟಾಗಿದೆ. ಈ ನಡುವೆ ಕೆನರಾ ಬ್ಯಾಂಕ್ ಶಾಖೆಯ ಹೊರಗೆ ಕೆನಡಾ ವಿರುದ್ದ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ ಎಂಬ ಟ್ರೋಲ್ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನ ಕೆಲವು ಬಳಕೆದಾರರು “ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರನ್ನು ಅಪಹಾಸ್ಯ ಮಾಡಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌…

Read More

Fact Check : ಗಾಜಾ ಪತ್ರಕರ್ತನ ಮೃತ ದೇಹ ಎಂದು ಎಡಿಟೆಡ್‌ ಪೋಟೊ ಹಂಚಿಕೊಳ್ಳಲಾಗುತ್ತಿದೆ

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ನಡುವೆ ಗಾಜಾದ ಪತ್ರಕರ್ತನ ಮೃತ ದೇಹದ ಚಿತ್ರವೊಂದು ದೊರೆತಿದೆ ಎಂದು ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕೊನೆಯೂಸಿರು ಕೂಡ ಗಾಜಾದಲ್ಲಿ ತುಳಿತಕ್ಕೊಳಗಾದವರ ಧ್ವನಿಯನ್ನು ಎತ್ತಿಹಿಡಿದಂತೆ ಇತ್ತು.” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರು ಪೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಟೊ AI (Artificial intelligence) ನಿಂದ ರಚಿಸಲ್ಪಟ್ಟಿದೆ. ಈ ವೈರಲ್‌ ಪೋಟೊವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  ಪೋಟೊದಲ್ಲಿ ಮನುಷ್ಯ ಧರಿಸಿರುವ ಉಡುಪಿನ ಮೇಲೆ “ಪ್ರೆಸ್” ಎಂಬ ಪದವು ವಿರೂಪಗೊಂಡಂತೆ…

Read More

Fact Check : ಸ್ವಯಂ ಚಾಲಿತ ಕಾರು ಹೊತ್ತಿ ಉರಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ

ಹೊತ್ತಿ ಉರಿಯುತ್ತಿರುವ ಕಾರೊಂದು ಚಲಿಸುತ್ತಾ ಮುಂದೆ ಬರುತ್ತಿರುವ ಮತ್ತು ಏಕಾಏಕಿ ಕಾರು ಚಲಿಸಿದ್ದರಿಂದ ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವ್ಯಂಗ್ಯಾತ್ಮಕವಾಗಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು “ಬೆಂಕಿ ಆರಿಸದೇ ದೂರ ನಿಂತು  ತಮಾಷೆ ನೋಡುತ್ತಿರುವವರಿಗೆ, ನನ್ನ ಬೆಂಕಿ ಆರಿಸಿ ಎಂದು ಹತ್ತಿರ ಬಂದ ಕಾರು….” ಎಂದು ಹಂಚಿಕೊಂಡಿದ್ದಾರೆ. ಇದಲ್ಲದೇ ದೇಶದ ವಿವಿಧ ನಗರಗಳನ್ನು ಹೆಸರಿಸಿ ಈ ಘಟನೆ ನಡೆದಿದೆ ಎಂದು ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕಾರು…

Read More