ಗುಜರಾತ್‌

Fact Check: ಗುಜರಾತಿನಲ್ಲಿ ರೈಲ್ವೆ ಹಳಿ ತಪ್ಪಿಸಲು ಪ್ರಯತ್ನಿಸಿದ ನೌಕರರು ಹಿಂದೂಗಳೇ ಹೊರತು ಮುಸ್ಲಿಮರಲ್ಲ

ಇತ್ತೀಚೆಗೆ ಗುಜರಾತ್‌ನ ಸೂರತ್‌ನಲ್ಲಿ ಸೆಪ್ಟೆಂಬರ್ 21 ರಂದು ಕಿಮ್ ರೈಲು ನಿಲ್ದಾಣದ ಬಳಿ ರೈಲು ಹಳಿತಪ್ಪಿಸಲು ಸಂಚು ರೂಪಿಸಿದ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ಮುಸ್ಲಿಮರು ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ಕುರಿತ ಮೂವರು ಅಪರಾಧಿಗಳನ್ನು ಪೋಲಿಸರು ಬಂಧಿಸಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ” ಕರ್ನಾಟಕಕ್ಕೆ ಬರುತ್ತಿದ್ದ ಸೇನಾ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ್ದ ಮುಸ್ಲಿಂ ರೈಲ್ವೆ ನೌಕರರ ಬಂಧನ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮತ್ತು ಆರೋಪಿಗಳನ್ನು…

Read More

Fact Check I ಆಸ್ಕರ್‌ ಪ್ರಶಸ್ತಿ ನಾಮ ನಿರ್ದೇಶನಕ್ಕೆ ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಚಲನಚಿತ್ರ ಆಯ್ಕೆ ಮಾಡಿಲ್ಲ

ಆಸ್ಕರ್‌ ಪ್ರಶಸ್ತಿಗೆ ಪ್ರತಿ ವರ್ಷ ಭಾರತದಿಂದ ಒಂದು ಸಿನಿಮಾವನ್ನು ‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ಆಯ್ಕೆ ಮಾಡಿ ಕಳುಹಿಸುತ್ತದೆ. ಈ ವರ್ಷ ಕಿರಣ್ ರಾವ್‌ರವರಿಂದ​ ನಿರ್ದೇಶಿತ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆಗಿದೆ. ಸೋಮವಾರ (ಸೆ.23) ಆಸ್ಕರ್​ ಸ್ಪರ್ಧೆಗೆ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆದ ಸುದ್ದಿ ಕೇಳಿ ಬಂದ ಬೆನ್ನಲ್ಲೇ, ಆಸ್ಕರ್‌ ಪ್ರಶಸ್ತಿಯ ಅಂಗಳಕ್ಕೆ ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ ತಮ್ಮ ಸಿನಿಮಾವನ್ನು ಅಧಿಕೃತವಾಗಿ ಸಲ್ಲಿಕೆ ಮಾಡಿದೆ ಎಂದು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರತಂಡ ಘೋಷಿಸಿಕೊಂಡಿದೆ….

Read More

Fact Check | ಬಾಂಗ್ಲಾ ಬೌಲರ್‌ ಹಸನ್‌ ಮಹಮದ್‌ಗೆ ರೋಹಿತ್‌ ಶರ್ಮಾ ಕಾಲಿನಿಂದ ಒದ್ದಿದ್ದಾರೆ ಎಂಬುದು ಸುಳ್ಳು

“ಹಸನ್ ಮಹಮೂದ್ ಮೈದಾನದಲ್ಲಿ ಸಜ್ದಾ ಮಾಡಲು ಪ್ರಯತ್ನಿಸಿದ್ದ.. ಆದರೆ ದುರದೃಷ್ಟವಶಾತ್ ರೋಹಿತ್ ಶರ್ಮಾ ಅವನನ್ನು ಒದ್ದು ನಿಕಾಲ್,,, ಚಲ್ ಹಟ್ ಎಂದು ಹೇಳಿದ್ರು, ರೋಹಿತ್ ಅವರ ಈ ವರ್ತನೆ ವಿರುದ್ಧ ವಾರ್ತಾ ಭಾರತಿ, ಸಾಣೆಹಳ್ಳಿ ಮಠ ಸೇರಿದಂತೆ ಬಾಂಧವರ ಕೃಪಾಪೋಷಿತ ಜಾತ್ಯತೀತ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋ ಹಲವರು ವ್ಯಂಗ್ಯಯುತವಾಗಿ ಮತ್ತುಅಶ್ಲೀಲವಾಗಿ ಕೂಡ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ನಿಜವೆಂದು ನಂಬಿದರೆ, ಮತ್ತೆ ಕೆಲವರು ಇದೇ…

Read More
ಸಿದ್ದರಾಮಯ್ಯ ಸರ್ಕಾರ

Fact Check: ಸಿದ್ದರಾಮಯ್ಯ ಸರ್ಕಾರ ಅಂಗನವಾಡಿ ಹುದ್ದೆಗಳ ನೇಮಕಕ್ಕೆ ‘ಉರ್ದು ಭಾಷೆ’ ಕಡ್ಡಾಯಗೊಳಿಸಿದೆ ಎಂಬ ಸುಳ್ಳು ಸುದ್ದಿ ಮತ್ತೆ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು “ಉರ್ದು ಪಾಕಿಸ್ತಾನದ ರಾಷ್ಟ್ರೀಯ ಭಾಷೆ ಮತ್ತು ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಎಂದು ಪ್ರತಿಪಾದಿಸಲಾಗುತ್ತಿದೆ. ಕರ್ನಾಟಕದ ಅಂಗನವಾಡಿ ಶಾಲೆಗಳಲ್ಲಿ ಉರ್ದು ಕಡ್ಡಾಯವಾಗಿದೆ, ಆದರೆ ರಾಜ್ಯದಲ್ಲಿ ಹಿಂದಿ ಭಾಷಿಕರು ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ.” ಎಂದು ಪ್ರತಿಪಾದಿಸಲಾಗುತ್ತಿದೆ. ತುಮಕೂರು ನಗರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಗೌರವಧನ ಆಧಾರಿತ ಅಂಗನವಾಡಿ ಕಾರ್ಯರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂಬ ಪತ್ರಿಕೆಯ ಪ್ರಕಟಣೆಯೊಂದನ್ನು ಮುಂದಿಟ್ಟುಕೊಂಡು ಈ ಸುದ್ದಿ ಹಬ್ಬಿಸಲಾಗುತ್ತಿದೆ. ಕೆಲವು ತಿಂಗಳ…

Read More

Fact Check : ಸುಧಾಮೂರ್ತಿಯವರು ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿದ್ದಾರೆ ಎಂಬುದು ಸುಳ್ಳು

ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಹೂಡಿಕೆ ಅಪ್ಲಿಕೇಶನ್‌ ಕುರಿತು ಪ್ರಚಾರ ಮಾಡುತ್ತಿರುವ ವೀಡಿಯೊವನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸುಧಾ ಮೂರ್ತಿಯವರು ತಮ್ಮ ಪತಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡುವಾಗ  ದಿನಕ್ಕೆ ₹ 21,000 ಆರಂಭಿಕ ಹೂಡಿಕೆಯನ್ನು ಮಾಡಿದರೆ ₹35,000 ವರೆಗೆ ಗಳಿಸಬಹುದು ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೋದ ಸ್ಕ್ರೀನ್‌ಸಾಟ್‌ ಚಿತ್ರಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು, ವೀಡಿಯೊದ ಕೀಫ್ರೇಮ್‌ಗಳನ್ನು ಹಾಕಿ ಹುಡುಕಿದಾಗ,…

Read More

Fact Check : ಗಣೇಶ ಪೂಜೆ ಮಾಡುವಾಗ ಅರ್ಚಕನಿಗೆ ಹೃದಯಘಾತ ಸಂಭವಿಸಿದೆ ಎಂಬದು ನಾಟಕೀಯ ವಿಡಿಯೋ

ಗಣೇಶನಿಗೆ ಪೂಜೆ ಮಾಡುವಾಗ ಅರ್ಚಕರೊಬ್ಬರು ಹೃದಯಾಘಾತದಿಂದ ಬಳಲುತ್ತಿರುವ ಸಿಸಿಟಿವಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ಗಣೇಶನಿಗೆ ಪೂಜೆ ಮಾಡುವಾಗ ಅರ್ಚಕನೊಬ್ಬನು ಹೃದಯಘಾತದಿಂದ ನೆಲಕ್ಕೆ ಕುಸಿದು ಬೀಳುತ್ತಾನೆ. ಆಗ ಗಣೇಶನ ವಿಗ್ರಹದಿಂದ ಧಾರ್ಮಿಕ ಧ್ವಜವು ಅರ್ಚಕನ ಮೇಲೆ ಬೀಳುತ್ತದೆ, ಆಗ ಅರ್ಚಕನಿಗೆ ಎಚ್ಚರವಾಗುತ್ತದೆ. ದೇವರ ಪವಾಡದಿಂದ ಅರ್ಚಕ ಬದುಕಿ ಉಳಿದಿದ್ದಾನೆ ಎಂದು ಬಳಕೆದಾರರು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್:‌ ಈ ವೈರಲ್‌ ವೀಡಿಯೋದ ಕೀವರ್ಡ್‌ಗಳ ಸಹಾಯದಿಂದ Google ನಲ್ಲಿ ಹುಡುಕಿದಾಗ, ಅದೇ ತರಹದ ವೀಡಿಯೊವನ್ನು ಹೋಲುವ ಫೇಸ್‌ಬುಕ್‌…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿ ಮತ್ತು SC ಮೀಸಲಾತಿಯನ್ನು ಕರ್ನಾಟಕ ಸರ್ಕಾರ ನೀಡಲು ಮುಂದಾಗಿಲ್ಲ

ಬಾಂಗ್ಲಾ ವಲಸಿಗರಿಗೆ ತಲಾ 5 ಎಕರೆ ಭೂಮಿ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂಬ ಹೇಳಿಕೆಯಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ವಾಟ್ಸಾಪ್‌ ನಲ್ಲಿ ಕಂಡುಬಂದ ಪ್ರತಿಪಾದನೆಯಲ್ಲಿ, “ಬಾಂಗ್ಲಾದೇಶದ ಒಬ್ಬೊಬ್ಬ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿಯನ್ನು ಕೊಡುತ್ತಿರುವ ರಾಜ್ಯ ಸರ್ಕಾರ”..? ಹಿಂದೂಗಳೇ ಎತ್ತ ಸಾಗುತ್ತಿದೆ ಕರ್ನಾಟಕ.?…” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್: ಸತ್ಯಶೋಧನೆಗಾಗಿ ನಾವು ವಾಟ್ಸಾಪ್‌ ಫಾರ್ವರ್ಡ್ ಮೆಸೇಜ್‌ನಲ್ಲಿರುವ ಇಂಗ್ಲಿಷ್ ವರದಿಯನ್ನು ಗಮನಿಸಿದ್ದೇವೆ. ಇದು ಟೈಮ್ಸ್ ಆಫ್‌…

Read More

Fact Check | ತಿರುಪತಿ ದೇಗುಲದ ಅರ್ಚಕರ ಪುತ್ರಿಯರ ಮದುವೆಗೆ ನೂರು ಕೆಜಿ ಚಿನ್ನ ಬಳಕೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

“ಇದು ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರ ಮೂವರು ಪುತ್ರಿಯರ ಮದುವೆಯ ಫೋಟೋ, ಎಲ್ಲಾ ಮೂವರ ಚಿನ್ನದ ಆಭರಣಗಳ ತೂಕ 125 ಕೆಜಿ! ಭಾರತೀಯ ನಾಗರಿಕರು ಎಲ್ಲಿ ದಾನ ಮಾಡಬೇಕೆಂದು ಯೋಚಿಸಬೇಕು. ಏಕೆಂದರೆ ನೀವು ದಾನ ಮಾಡುವ ಚಿನ್ನದ ಆಭರಣಗಳು ದೇವಾಲಯದ ಅಭಿವೃದ್ಧಿಗೆ ಹೋಗುತ್ತಿಲ್ಲ. ಬದಲಾಗಿ ಅಲ್ಲಿನ ಅರ್ಚಕರ ಮನೆಗೆ ಸೇರುತ್ತಿದೆ. ಏಕೆ ಈ ಬಗ್ಗೆ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದು ಧರ್ಮದ್ರೋಹ ಅಲ್ಲವೆ?” ಎಂದು  ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. He’s a pandit of…

Read More