Fact Check : ಮಹಮ್ಮದ್ ಯೂನಸ್ ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾದ ಮಹಮ್ಮದ್ ಯೂನಸ್‌, ರಾಷ್ಟ್ರದ ಹಂಗಾಮಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೀಡಿಯೊ ಕ್ಲಿಪ್‌ನಲ್ಲಿ ಯೂನಸ್, “ನಾನು, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್, ನಾನು ಮಧ್ಯಂತರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೇನೆ” ಎಂಬ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ವೈರಲ್‌ ವೀಡಿಯೊ ಕ್ಲಿಪ್‌ನ  ‘ಮಹಮ್ಮದ್ ಯೂನಸ್ ರಾಜೀನಾಮೆ’ ಎಂಬ ಹೆಸರನ್ನು Google ಕೀವರ್ಡ್ ಬಳಸಿಕೊಂಡು ಹುಡುಕಿದಾಗ,  ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳು ಮತ್ತು ಹಿಂಸಾಚಾರಗಳು ನಿಲ್ಲದಿದ್ದರೆ ಯೂನಸ್ ರಾಜೀನಾಮೆ ನೀಡುವುದಾಗಿ ಜನರಿಗೆ ತಿಳಿಸುವ ಕುರಿತು  ಹಲವಾರು ಹಳೆಯ ಸುದ್ದಿ ವರದಿಗಳು ಲಭಿಸಿವೆ. ಆದರೆ, ಅವರು ನಿಜವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳುವ ಯಾವುದೇ ವರದಿಗಳು ಲಭಿಸಿಲ್ಲ. ಈ ವೈರಲ್‌ ವೀಡಿಯೊವನ್ನು ಗಮನಿಸಿದಾಗ ಈ  ವೀಡಿಯೊವನ್ನು ನಕಲು ಮಾಡಲಾಗಿದೆ ಎಂದು ತಿಳಿದುಬಂದಿತು.

ಡೀಪ್‌ಫೇಕ್ ಪತ್ತೆ ಸಾಧನವಾದ TrueMedia ವನ್ನು ಬಳಸಿಕೊಂಡು ಈ  ವೀಡಿಯೊವನ್ನು ವೀಕ್ಷಿಸಿದಾಗ, ಯೂನಸ್ ಅವರ ಬಾಯಿಯು ವೀಡಿಯೊದಲ್ಲಿ ಮಾತನಾಡುತ್ತಿರುವ ಪದಗಳಿಗೆ ಹೊಂದಿಕೆಯಾಗಿಲ್ಲ ಎಂಬುದು ಖಚಿತವಾಗಿ ತಿಳಿದುಬಂದಿದೆ. ಈ ಉಪಕರಣವು ಆಡಿಯೊ ಮತ್ತು ಯೂನಸ್‌ನ ಮುಖದಲ್ಲಿನ ಆವಭಾವವನ್ನು ಪತ್ತೆಹಚ್ಚಿದೆ.

ಯೂನಸ್ ರಾಜೀನಾಮೆ ನೀಡಿದ ಆಡಿಯೋವನ್ನು AI ಪರಿಕರಗಳನ್ನು ಬಳಸಿಕೊಂಡು ರಚಿಸಲಾಗಿದೆ ಮತ್ತು ಇದು ಅಧಿಕೃತವಲ್ಲ.

ಕ್ವಿಂಟ್ ವೀಡಿಯೋವನ್ನು Contrails.ai ಗೆ ಕಳುಹಿಸಿದಾಗ, ಬೆಂಗಳೂರು ಮೂಲದ AI ಸ್ಟಾರ್ಟ್‌ಅಪ್, AI- ರಚಿತವಾದ ವಿಷಯವನ್ನು ಪತ್ತೆಹಚ್ಚಿದೆ. ಯೂನಸ್ ಧ್ವನಿಯು ಸಂಪೂರ್ಣವಾಗಿ AI ರಚಿತವಾಗಿದೆ ಎಂದು ವರದಿಯಲ್ಲಿ ಪ್ರಕಟವಾಗಿದೆ.

ಯೂನಸ್ ರಾಜೀನಾಮೆ ನೀಡಿದ ಆಡಿಯೋವನ್ನು AI ಪರಿಕರಗಳನ್ನು ಬಳಸಿಕೊಂಡು ರಚಿಸಲಾಗಿದೆ ಮತ್ತು ಇದು ಅಧಿಕೃತವಲ್ಲ.

ಯೂನಸ್ ರಾಜೀನಾಮೆ ನೀಡಿದ ಆಡಿಯೋವನ್ನು AI ಪರಿಕರಗಳನ್ನು ಬಳಸಿಕೊಂಡು ರಚಿಸಲಾಗಿದೆ ಮತ್ತು ಇದು ಅಧಿಕೃತವಲ್ಲ.

ಯೂನಸ್ ಅವರ ನೈಜ ಧ್ವನಿಯನ್ನು ಬಳಸಿಕೊಂಡು ಆಡಿಯೊವನ್ನು ಅನುಕರಿಸಲಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.

ಡೀಪ್‌ಫೇಕ್ ಅನಾಲಿಸಿಸ್ ಯುನಿಟ್‌ನ ಸಂಶೋಧನೆಗಳ ಪ್ರಕಾರ, DAU ಕ್ಲಿಪ್ ಅನ್ನು Loccus.ai ನ ಆಡಿಯೊ ಪತ್ತೆ ಸಾಧನದ ಮೂಲಕ ನಡೆಸಿದಾಗ, ಇದು ಆಡಿಯೋ AI- ರಚಿತವಾಗಿರುವ “ಹೆಚ್ಚಿನ ಸಂಭವನೀಯತೆ” ಇದೆ ಎಂದು ಬಹಿರಂಗಪಡಿಸಿದೆ ಮತ್ತು ಈ ವೈರಲ್‌ ಆಡಿಯೋ ಅಧಿಕೃತವಾಗಿರುವುದು ತುಂಬಾ ಕಡಿಮೆ ಸಾಧ್ಯತೆಯನ್ನು ಹೊಂದಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.

ಯೂನಸ್ ರಾಜೀನಾಮೆ ನೀಡಿದ ಆಡಿಯೋವನ್ನು AI ಪರಿಕರಗಳನ್ನು ಬಳಸಿಕೊಂಡು ರಚಿಸಲಾಗಿದೆ ಮತ್ತು ಇದು ಅಧಿಕೃತವಲ್ಲ.

ತಜ್ಞರ ವಿಶ್ಲೇಷಣೆಗಾಗಿ, DAU ಗ್ಲೋಬಲ್ ಡೀಪ್‌ಫೇಕ್ ಡಿಟೆಕ್ಷನ್ ಸಿಸ್ಟಮ್ (GODDS) ನಲ್ಲಿ ಪರಿಶೀಲನೆ ನಡೆಸಿದಾಗ,  ಆಡಿಯೊವು ವೀಡಿಯೊದ ವಿಷಯದೊಂದಿಗೆ “ತಪ್ಪಾಗಿ ಜೋಡಿಸಲ್ಪಟ್ಟಂತೆ ತೋರುತ್ತಿದೆ” ಎಂದು ಉಲ್ಲೇಖಿಸಿದ್ದು,   ಅಧಿಕೃತ ವೀಡಿಯೊ ಅಲ್ಲ ಎಂದು ಸೂಚಿಸಿದೆ ಮತ್ತು ವೀಡಿಯೊದಲ್ಲಿ ಜಂಪ್ ಕಟ್‌ಗಳನ್ನು ಗುರುತಿಸಿದೆ. ರೋಚೆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ)  ಡಿಫೇಕ್ ಯೋಜನೆಯು “ಕೀಳಾಗಿ ಧ್ವನಿಯನ್ನು ಅನುಕರಿಸಿದ ನಕಲಿ ವಿಡಿಯೋ ಎಂದಿದ್ದು,  “ಯೂನಸ್‌ರವರ ಹಾಗೆ ಆಡೀಯೊದಲ್ಲಿ ಮಾತನಾಡಲಾಗಿಲ್ಲ ಹಾಗೂ ಇದರಲ್ಲಿ ಧ್ವನಿ ಸುರುಳಿಗಳನ್ನು ಅಲ್ಲಲ್ಲಿ ತುಂಡರಿಸಿರುವುದು ಕಂಡುಬಂದಿದೆ ಮತ್ತು ವೀಡಿಯೊದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಯೂನಸ್‌ರವರ ಬಾಯಿಯು “ನಿಜವಾದ ಆಡಿಯೊದಿಂದ ಸಾಕಷ್ಟು ಸಿಂಕ್ ಆಗಿಲ್ಲ” ಎಂದು ಗುರುತಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ರಾಜೀನಾಮೆ ನೀಡಿದ ವೀಡಿಯೊ ನಕಲಿಯಾಗಿದೆ.


ಇದನ್ನು ಓದಿ:


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *