Fact Check | ಮಹಾರಾಷ್ಟ್ರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಮತ್ತು ಸಮಾರಂಭದ ವೇಳೆ ಅನೇಕ ಜನರು ಗಾಯಗೊಂಡಿದ್ದಾರೆ. ಈಗಲಾದರೂ ಅರ್ಥ ಮಾಡಿಕೊಳ್ಳಿ ಡಿಜೆ ಹಬ್ಬ ಅಥವಾ ಇನ್ನೀತರೆ ಸಂಭ್ರಮದ ಸಮಯದಲ್ಲಿ ಡಿಜೆ ಎಷ್ಟೊಂದು ಅಪಾಯಕಾರಿ ಎಂದು. ಈ ಘಟನೆಯ ನಂತರವಾದರೂ ಡಿಜೆಯನ್ನು ಬ್ಯಾನ್ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ” ಎಂದು ವಿಡಿಯೊವೊಂದನ್ನು ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. DJ = SOUND BOMB*नागपुर बहुत ऊंची आवाज में DJ बजाने से…

Read More
100 ರೂಪಾಯಿ

Fact Check: 100 ರೂಪಾಯಿಯ ಹೊಸ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಸುಳ್ಳು

ಇಂದು ಮಧ್ಯರಾತ್ರಿಯಿಂದ 100 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುವುದು ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದಾಗ್ಯೂ, ಪೋಸ್ಟ್ ನಿರ್ದಿಷ್ಟ ದಿನಾಂಕವನ್ನು ಉಲ್ಲೇಖಿಸಲು ವಿಫಲವಾಗಿದೆ, ಮತ್ತು ವ್ಯಾಪಕ ಗೊಂದಲಕ್ಕೆ ಕಾರಣವಾಗಿದೆ. ಹಿಂದಿಯಲ್ಲಿ ಈ ಹೇಳಿಕೆ ಹೀಗಿದೆ: “आज रात 12 बजे 100 का नोट बंद हो जायेगा. जल्दी से अपने दोस्तों को शेयर करो” (ಇಂಗ್ಲಿಷ್ ಅನುವಾದ: “ಇಂದು ರಾತ್ರಿ 12 ಗಂಟೆಗೆ 100 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುವುದು. ಇದನ್ನು ನಿಮ್ಮ ಸ್ನೇಹಿತರೊಂದಿಗೆ…

Read More

Fact Check : ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು

ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ‌   ಫ್ಯಾಕ್ಟ್‌ ಚೆಕ್‌ : ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬ ವೈರಲ್ ಪೋಸ್ಟ್‌ನ ನಿಖರತೆಯನ್ನು ಪರಿಶೀಲಿಸಲು, ಸಂಬಂಧಿತ ಕೀವರ್ಡ್ ಬಳಸಿಕೊಂಡು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಿಲ್ಲ. ಒಂದುವೇಳೆ ಇಂತಹದೊಂದು ಬೆಳವಣಿಗೆ ಕಂಡು ಬಂದಿದ್ದರೆ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುತ್ತಿತ್ತು. ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ಅದಾನಿ…

Read More
ಮುಸ್ಲಿಂ

Fact Check: ಮುಸ್ಲಿಮರು ಹೆಚ್ಚಿರುವ ಪ್ರದೇಶದಿಂದ ಹಿಂದೂಗಳು ಜಾಗ ಖಾಲಿ ಮಾಡಬೇಕೆಂಬ ಬ್ಯಾನರ್‌ ಹಾಕಿರುವುದು ಉತ್ತರ ಪ್ರದೇಶದಲ್ಲಿ

ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದರ ಪೋಸ್ಟರ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಭಾರತದ ಉತ್ತರ ಪ್ರದೇಶ, ಬಂಗಾಲ, ಕೇರಳ, ಹೈದರಾಬಾದ, ಆಸ್ಸಾಮ ರಾಜ್ಯಗಳಲ್ಲಿ ನಾವು ಮುಸಲ್ಮಾನರು ಬಹುಸಂಖ್ಯಾಕರಾಗಿದ್ದೇವೆ. ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಈ ಪ್ರದೇಶವನ್ನು ತಕ್ಷಣ ಖಾಲಿ ಮಾಡಬೇಕು….

Read More

Fact Check | ಸ್ನಾನಗೃಹದಲ್ಲಿರುವಾಗ ಹಿಜ್ಬುಲ್ಲಾ ಅಪರೇಟರ್‌ನನ್ನು ಸ್ಪೋಟಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

“ಲೇಬನಾನ್‌ನಲ್ಲಿ ಇಸ್ರೇಲ್ ಪೇಜರ್ ದಾಳಿಯನ್ನು ನಡೆಸಿದ ನಂತರ, ವಿವಿಧ ರೀತಿಯ ದಾಳಿಗೆ ಇಸ್ರೇಲ್ ಮುಂದಾಗಿದೆ. ಈ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ವಾಕಿಟಾಕಿ ಕೂಡ ಸ್ಪೋಟಗೊಂಡಿರುವ ಪ್ರಕರಣ ಕಂಡು ಬಂದಿದೆ. ಇದರ ನಡುವೆ ಇತ್ತೀಚಿಗೆ ಹಿಜ್ಬುಲ್ಲಾ ಆಪರೇಟರ್ ಒಬ್ಬನನ್ನು ಸ್ನಾನಗ್ರಹದಲ್ಲೇ ಇಸ್ರೇಲ್ ಹೊಡೆದು ಹಾಕಿದೆ. ಈ ಫೋಟೋದಲ್ಲಿರುವ ಕಮೋಡ್ ಅನ್ನು ಗಮನಿಸಿ ಇದು ಸ್ಪೋಟಗೊಂಡ ತೀವ್ರತೆಗೆ ಹಿಜ್ಬುಲ್ಲಾ ಆಪರೇಟರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ” ಎಂದು ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. 🔴لبنان انفجار بیسیم و پاره شدن…

Read More

Fact Check | ಭಾರತ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು

“ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವುದನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಭಾರತ ಅಲ್ಪ ಸಂಖ್ಯಾತ ರಾಷ್ಟ್ರದ ವಿರುದ್ಧ ಈ ರೀತಿಯ ನಿಲುವು ತೆಳೆದಿರುವುದು ಸರಿಯಲ್ಲ” ಎಂದು ಭಾರತದ ವಿರುದ್ಧವಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. – Bangladesh Govt wasn't paying for electricity supplied to them by India…

Read More

Fact Check : ಮಹಮ್ಮದ್ ಯೂನಸ್ ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾದ ಮಹಮ್ಮದ್ ಯೂನಸ್‌, ರಾಷ್ಟ್ರದ ಹಂಗಾಮಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊ ಕ್ಲಿಪ್‌ನಲ್ಲಿ ಯೂನಸ್, “ನಾನು, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್, ನಾನು ಮಧ್ಯಂತರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೇನೆ” ಎಂಬ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ವೈರಲ್‌ ವೀಡಿಯೊ ಕ್ಲಿಪ್‌ನ  ‘ಮಹಮ್ಮದ್ ಯೂನಸ್ ರಾಜೀನಾಮೆ’ ಎಂಬ ಹೆಸರನ್ನು Google ಕೀವರ್ಡ್ ಬಳಸಿಕೊಂಡು ಹುಡುಕಿದಾಗ,  ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳು ಮತ್ತು ಹಿಂಸಾಚಾರಗಳು ನಿಲ್ಲದಿದ್ದರೆ…

Read More
ಪಾಕಿಸ್ತಾನ ಧ್ವಜ

Fact Check: ಬಾಗ್ಪತ್‌ನಲ್ಲಿ ಯುವಕರು ಸಾಗಿಸುತ್ತಿದ್ದ ಧಾರ್ಮಿಕ ಧ್ವಜವು ಪಾಕಿಸ್ತಾನದ ಧ್ವಜವಲ್ಲ ಎಂದು ಯುಪಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ಮುಸ್ಲಿಂ ಧರ್ಮದ ಮತ್ತು ಕೆಲವು ಮುಸ್ಲಿಂ ಸಂಘಟನೆಗಳ ಹಸಿರು ಧ್ವಜವನ್ನು ಎಲ್ಲಿ ಹಾರಿಸಿದರೂ ಸಹ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈಗ ಅದೇ ರೀತಿ, ಉತ್ತರ ಪ್ರದೇಶದ ಬಾಗ್ಪತ್‌ನ ಸಿಂಘವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮೀನಗರ್ ಸರಾಯ್‌ನಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ ಆರೋಪದ ಮೇಲೆ ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ಧ್ವಜವನ್ನುಮುಸ್ಲಿಂ ಯುವಕರು ಹಾರಿಸಿದ್ದಾರೆ ಎಂದು ಆರೋಪಿಸಿ ಟೀಕಿಸಲಾಗುತ್ತಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು….

Read More