Fact Check : ಬಾಂಗ್ಲಾದೇಶದಲ್ಲಿ ಪ್ರವಾಹಕ್ಕೆ ಒಳಗಾದ ದೇವಾಲಯವೆಂದು ಭಾರತದ ದೇವಾಲಯದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಬಾಂಗ್ಲಾದೇಶ

ಭಾರತದ ದೇವಾಲಯದ ಚಿತ್ರವನ್ನು, ಬಾಂಗ್ಲಾದೇಶದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ” ಭಾರತ ದೇಶವು ತನ್ನ ಎಲ್ಲಾ ಆಣೆಕಟ್ಟೆಗಳನ್ನು ತೆರೆದಾಗ ಪ್ರವಾಹ ಉಂಟಾಗಿ ಬಾಂಗ್ಲಾದೇಶದಲ್ಲಿನ ದೇವಾಲಯವು ನೀರಿನಲ್ಲಿ ಮುಳುಗುತ್ತಿದೆ” ಎಂದು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ ಪ್ರವಾಹಕ್ಕೆ ಭಾರತವನ್ನು ಆರೋಪಿಸಿ ಅನೇಕ ಸುಳ್ಳುಗಳು ಇತ್ತೀಚೆಗೆ ಕಂಡುಬರುತ್ತಿವೆ.

ಚಿತ್ರವು 2019 ರದ್ದು ಮತ್ತು ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿರುವ ಕಪಿಲ್ ಮುನಿ ದೇವಸ್ಥಾನವನ್ನು ತೋರಿಸುತ್ತದೆ.

ಫ್ಯಾಕ್ಟ್‌ ಚೆಕ್‌ :

ಗೂಗಲ್‌ ರಿವರ್ಸ್‌ ಇಮೇಜ್‌ನ್ನು ಬಳಸಿಕೊಂಡು ಈ ಚಿತ್ರವನ್ನು ಹುಡುಕಿದಾಗ ಇದು 2019ರದ್ದಾಗಿದೆ. ಭಾರತದಲ್ಲಿ ಸಂಭವಿಸಿದ ಪ್ರವಾಹದಲ್ಲಿ  ಕಂಡು ಬಂದ ಚಿತ್ರವಾಗಿದೆ. ಇದು ಪಶ್ಚಿಮ ಬಂಗಾಳದ ಗಂಗಾಸಾಗರ್‌ನಲ್ಲಿರುವ ಕಪಿಲ್‌ ಮುನಿ ದೇವಸ್ಥಾನವು ನೀರಿನಲ್ಲಿ ಮುಳುಗಿದ್ದ ಚಿತ್ರವಾಗಿದೆ. ಈ ಪ್ರವಾಹ ಪೀಡಿತ ಪ್ರದೇಶದ ದೃಶ್ಯಗಳನ್ನು  ದಿ ಹಿಂದೂ ಮತ್ತು ಡೌನ್‌ಟುಅರ್ತ್  ಎಂಬ ಪತ್ರಿಕೆಗಳು ವರದಿಯನ್ನು ತಯಾರಿಸಿವೆ.

ವೈರಲ್‌ ಆದ ಚಿತ್ರವನ್ನು ಹೋಲುವ ಚಿತ್ರಗಳನ್ನು ಈ ವರದಿಗಳಲ್ಲಿ ನೋಡಬಹುದು. ಮತ್ತು ಈ ವೈರಲ್‌ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಬಿಂಬಿತವಾಗಿ ಕಾಣುತ್ತವೆ. ಅವುಗಳ ಹೋಲಿಕೆಯನ್ನು ಈ ಕೆಳಗಿನ ದೃಶ್ಯಗಳಲ್ಲಿ ನೋಡಬಹುದು.

The image is from 2019 and shows the Kapil Muni temple in Gangasagar, West Bengal.

ಈ ದೇವಾಲಯ ಬಹಳಷ್ಟು ಬಾರಿ ಪ್ರವಾಹಗಳನ್ನು ಎದುರಿಸುತ್ತಿದ್ದು ಕೆಲವೇ ವರ್ಷಗಳಲ್ಲಿ ಮುಳುಗಿಹೋಗಬಹುದು ಎಂದು ವರದಿಗಳು ತಿಳಿಸಿವೆ. ಸ್ಟೇಟ್ಸ್‌ಮನ್ ಮತ್ತು ETV ಯ ಇತರ ವರದಿಗಳು ಇದೇ ರೀತಿಯ ದೇವಾಲಯದ ಚಿತ್ರಗಳನ್ನು ಒಳಗೊಂಡಿವೆ. ಈ ಸ್ಥಳವನ್ನು ಗೂಗಲ್‌ ಮ್ಯಾಪ್‌ನಲ್ಲಿ ಹುಡುಕಿದಾಗ ಇದು ಪಶ್ಚಿಮ ಬಂಗಾಳದ  ಕಪಿಲ್‌ ಮುನಿ ದೇವಸ್ಥಾನ ಎಂಬುದು ನಿಖರವಾಗಿ ಕಂಡುಬಂದಿದೆ. 

ಚಿತ್ರವು 2019 ರದ್ದು ಮತ್ತು ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿರುವ ಕಪಿಲ್ ಮುನಿ ದೇವಸ್ಥಾನವನ್ನು ತೋರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ದೇವಾಲಯದ ಹಳೆಯ ಚಿತ್ರವನ್ನು ಬಾಂಗ್ಲಾದೇಶದಲ್ಲಿ ಪ್ರವಾಹಕ್ಕೆ ಒಳಗಾದ ಹಿಂದೂ ದೇವಾಲಯ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *