Fact Check : ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಾದ ಇತ್ತೀಚಿನ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳುತ್ತಿದೆ

ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ನಡೆದ  ಸ್ಫೋಟದ ವೀಡೀಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ “ಭಯೋತ್ಪಾದಕನ ದೇಹದೊಳಗೆ ಟೈಮ್ ಬಾಂಬ್‌ನ್ನು ಇರಿಸಿ  ಪ್ಯಾಲೆಸ್ಟೀನಿಯರಿಗೆ ಹಿಂದಿರುಗಿಸಿದ ಇಸ್ರೇಲ್‌. ಅದರ ಪರಿಣಾಮ ಇದರಲ್ಲಿದೆ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌:

ಸತ್ಯ :  2012ರ ಜುಲೈ ತಿಂಗಳಿನಲ್ಲಿ ಈ ವೀಡೀಯೊವನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ಸಿರಿಯಾದ ಡಮಾಸ್ಕಸ್ ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯೋರ್ವನ ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆಯಲ್ಲಿ ಸಂಭವಿಸಿದ್ದು ಸರ್ಕಾರಿ ಪ್ರಾಯೋಜಿತ ಕಾರ್‌ಬಾಂಬ್‌ ಸ್ಪೋಟದಿಂದಾಗಿ ಅಂತ್ಯಕ್ರೀಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಸುಮಾರು 85 ಜನರು ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಹಾಗಾಗಿ ಇಸ್ರೇಲ್‌ನಲ್ಲಿ ನಡೆದ ಇತ್ತೀಚಿನ ಘಟನೆ ಎಂಬುದು ಸುಳ್ಳು.

ವೈರಲ್ ವೀಡಿಯೊವನ್ನು ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನಿಂದ ಹುಡುಕಾಟವನ್ನು ನಡೆಸಿದಾಗ ಯುರೋ ನ್ಯೂಸ್  ಜುಲೈ2012 ರಲ್ಲಿ “ಫ್ಯೂನರಲ್ ಅಟ್ಯಾಕ್ ಇನ್ ಸಿರಿಯಾ – ಕ್ಲೈಮ್ಸ್” ಎಂಬ ಶೀರ್ಷಿಕೆಯೊಂದಿಗೆ ವೀಡೀಯೋವನ್ನು ಹಂಚಿಕೊಂಡಿದೆ. ಆದ್ದರಿಂದ ಈ ವೀಡಿಯೊ ಇತ್ತೀಚಿನದಲ್ಲ.

ವೀಡಿಯೊದಲ್ಲಿನ ಸುಳಿವುಗಳನ್ನು ಕೀವರ್ಡ್‌ನ ಸಹಾಯದಿಂದ ಹುಡುಕಿದಾಗ  CNN ಲೇಖನ  ನಮಗೆ ದೊರೆಯಿತು. ಲೇಖನದಲ್ಲಿ ಡಮಾಸ್ಕಸ್‌ನ  ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯ ಶವದ ಮೆರವಣಿಗೆಯನ್ನು ಮಾಡಲಾಯಿತು.ಸಿರಿಯಾದ ಕ್ರಾಂತಿಕಾರಿಗಳು ಆ ವ್ಯಕ್ತಿಯ ಮೃತ ದೇಹವನ್ನು ಧ್ವಜದಿಂದ ಮುಚ್ಚಿದ್ದರು.ಅಲ್ಲಿನ ಜನಸಮೂಹವು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಸರ್ಕಾರವು ಆಯೋಜಿಸಿದ ಕಾರ್ ಬಾಂಬ್‌ನ ಸ್ಫೋಟವಾಯಿತು.ಪರಿಣಾಮದಿಂದ ಸುಮಾರು 85 ಜನರು ಸಾವನ್ನಪ್ಪಿದರು ಎಂದು ವರದಿ ಮಾಡಿದೆ.

ಆದ್ದರಿಂದ ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್‌ನ ಇತ್ತೀಚಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *